ಲೇಬರ್ ಕಾರ್ಡ್ ಇದ್ದವರಿಗೆ ಮದುವೆ ಸಹಾಯಕ್ಕಾಗಿ 50 ಸಾವಿರ ಸಹಾಯಧನ ನೀಡುತ್ತಿದ್ದಾರೆ. ಪಡೆಯೋದು ಹೇಗೆ ನೋಡಿ.

 

ಲೇಬರ್ ಕಾರ್ಡ್ ಇದ್ದವರಿಗೆ ಮದುವೆ ಸಹಾಯಕ್ಕಾಗಿ 50 ಸಾವಿರ ಸಹಾಯಧನ ನೀಡುತ್ತಿದ್ದಾರೆ. ಪಡೆಯೋದು ಹೇಗೆ ನೋಡಿ.




ಕರ್ನಾಟಕ ಸರ್ಕಾರದ ಪ್ರಕಟಣೆ :


ಕರ್ನಾಟಕ ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿತರಾಗಿ ಲೇಬರ್ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಾಹಕ್ಕೆ ಹಾಗೂ ಅವರ ಎರಡು ಮಕ್ಕಳ ವಿವಾಹಕ್ಕೆ ಸರ್ಕಾರದಿಂದ 50,000 ಸಹಾಯಧನ ಸಿಗುತ್ತಿದೆ. ಪ್ರತಿಯೊಬ್ಬ ಅಸಂಘಟಿತ ವಲಯದ ಕಾರ್ಮಿಕನು ಕೂಡ ತಿಳಿದುಕೊಳ್ಳಲೇ ಬೇಕಾದ ವಿಷಯ ಇದಾಗಿದೆ.

ಈ ಸಹಾಯಧನಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ನೀವು ನಿಮ್ಮ ಮೊಬೈಲ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಅಂಕಣದಲ್ಲಿ ಯಾವ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವುದು ತಿಳಿಸಲಾಗಿದೆ. ಈ ಕ್ರಮಗಳನ್ನು ಅನುಸರಿಸಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

➦ ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್ ನಲ್ಲಿ ಗೂಗಲ್ ಗೆ ಹೋಗಿ. 

sevasindhuservices.karnataka.gov.in ಎಂದು ಟೈಪ್ ಮಾಡಿ ಸರ್ಚ್ ಕೊಡಿ.

➦ ಸೇವಾ ಸಿಂಧು ಪೋರ್ಟಲ್ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ, ಆಧಾರ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಕೊಟ್ಟು ರಿಜಿಸ್ಟರ್ ಆಗಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಪಡೆದು ಲಾಗಿನ್ ಆಗಿ.


ಪಿಎಂ ಕಿಸಾನ್ : 14 ನೇ ಕಂತಿನ ಬಿಡುಗಡೆ ದಿನಾಂಕ ಪ್ರಕಟ :


➦ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಕೊಟ್ಟು ಒಟಿಪಿ ಪಡೆದು ಕಾಣುವ ಕ್ಯಾಪ್ಚಾ ಕೂಡ ಹಾಕಿ.

➦ ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಎಡಭಾಗದ ಮೆನುವಿನಲ್ಲಿ ಅಪ್ಲೈ ಫಾರ್ ಸರ್ವಿಸಸ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ, ವಿವ್ಯೂ ಆಲ್ ಅವಯ್ಲೇಬಲ್ ಸರ್ವಿಸಸ್ ಎಂದು ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಹೊಸದೊಂದು ಅಪ್ಲಿಕೇಶನ್ ಪೇಜ್ ಓಪನ್ ಆಗುತ್ತದೆ.

➦ ಅಪ್ಲಿಕೇಷನ್ ಫೋನ್ ಮ್ಯಾರೇಜ್ ಅಸಿಸ್ಟೆನ್ಸ್ ಡಿಪಾರ್ಟ್ಮೆಂಟ್ ಆಫ್ ಲೇಬರ್ ಎನ್ನುವುದು ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಪೇಜ್ ಮೇಲೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮದುವೆ ಸಹಾಯಧನಕ್ಕಾಗಿ ಅರ್ಜಿ ಎನ್ನುವ ಅರ್ಜಿ ಫಾರ್ಮ್ ಕಾಣುತ್ತದೆ.

➦ ಅರ್ಜಿದಾರರ ವಿವರಗಳನ್ನು ಕೇಳಲಾಗಿರುತ್ತದೆ. ಅದರಲ್ಲಿ ಅವರ ಆಧಾರ್ ಸಂಖ್ಯೆ, ಹೆಸರು, ಪಡಿತರ ಚೀಟಿ ಸಂಖ್ಯೆ, ಜನ್ಮದಿನಾಂಕ, ಲಿಂಗ, ವಯಸ್ಸು, ಮುಂತಾದ ವ್ಯಯಕ್ತಿಕ ವಿವರಗಳು ಹಾಗೂ ಲೇಬರ್ ಕಾರ್ಡ್ ಸಂಖ್ಯೆ, ನೋಂದಣಿ ಆದ ದಿನಾಂಕ, ಅವಧಿ ಸಹಿತ ಮಾಹಿತಿಗಳು ಮತ್ತು ಅರ್ಜಿ ಸಲ್ಲಿಸುವವರ ದೂರವಾಣಿ ಸಂಖ್ಯೆ, ಸಂಗಾತಿ ಹೆಸರು, ಮದುವೆ ದಿನಾಂಕ ಕುರಿತ ಮಾಹಿತಿ ಹಾಗೂ ರಾಜ್ಯ ಜಿಲ್ಲೆ ತಾಲೂಕು ಗ್ರಾಮ ಇತ್ಯಾದಿ ವಿವರಗಳನ್ನೆಲ್ಲ ಕೇಳಲಾಗುತ್ತದೆ. ಇವುಗಳನ್ನು ಸರಿಯಾದ ಮಾಹಿತಿಗಳೊಂದಿಗೆ ಭರ್ತಿ ಮಾಡಬೇಕು.

➦ ಕೊನೆಯಲ್ಲಿ ಐ ಅಗ್ರಿ ಎಂದು ಇರುತ್ತದೆ, ಅದಕ್ಕೆ ಕ್ಲಿಕ್ ಮಾಡಿ ಕ್ಯಾಪ್ಚಾ ವನ್ನು ಎಂಟ್ರಿ ಮಾಡಿ ಸಬ್ಮಿಟ್ ಕ್ಲಿಕ್ ಮಾಡಿ ಯಶಸ್ವಿಯಾಗಿ ಪೂರ್ತಿ ಆದ ಬಳಿಕ ನಿಮಗೆ ರೆಫರೆನ್ಸ್ ನಂಬರ್ ಸಿಗುತ್ತದೆ. ಅದನ್ನು ಬರೆದಿಟ್ಟುಕೊಳ್ಳಿ ಅರ್ಜಿಯ ಪ್ರಿಂಟೌಟ್ ಹಾಕಿ ಇಟ್ಟುಕೊಳ್ಳಿ.

➦ ಸಹಾಯಧನ ಖಾತೆಗೆ ನೇರ ವರ್ಗಾವಣೆ ಆಗುತ್ತದೆ. ನೀವು ಮೆನ್ ಮೆನುವಿಗೆ ಬಂದು ನ್ಯೂ ಸ್ಟೇಟ್ ಆಫ್ ಅಪ್ಲಿಕೇಶನ್ ಕ್ಲಿಕ್ ಮಾಡುವ ಮೂಲಕ ಆಗಾಗ ಅದರ ಸ್ಟೇಟಸ್ ಕೂಡ ಚೆಕ್ ಮಾಡಿಕೊಳ್ಳಬಹುದು. 


10 ನೇ ತರಗತಿ ನಂತರ : ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ..





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು