ಪಿಎಂ ಕಿಸಾನ್ : 14 ನೇ ಕಂತಿನ ಬಿಡುಗಡೆ ದಿನಾಂಕ ಪ್ರಕಟ :

ಪಿಎಂ ಕಿಸಾನ್ : 14 ನೇ ಕಂತಿನ ಬಿಡುಗಡೆ ದಿನಾಂಕ ಪ್ರಕಟ :


     








        ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ವರ್ಷದಲ್ಲಿ 3 ಬಾರಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ  ಹಣ ಜಮಾ  ಮಾಡುತ್ತದೆ.ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ 14ನೇ ಕಂತಿನ ಹಣ 2023 ಮೇ ತಿಂಗಳಲ್ಲಿ ಬಿಡುಗಡೆ ಆಗಬಹುದು. ಎಂಬ ಮಾಹಿತಿ ದೊರೆತಿದೆ. 

ಒಂದು ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 3 ಬಾರಿ ಪಿಎಂ  ಕಿಸಾನ್ ಯೋಜನೆಯ ಹಣ ರಿಲೀಸ್ ಮಾಡುತ್ತದೆ. ಏಪ್ರಿಲ್ ನಿಂದ ಜೂಲೈ ವರೆಗಿನ ಅವಧಿ, ಆಗಸ್ಟ್ ನಿಂದ ನವೆಂಬರ್ ವರೆಗಿನ ಇನ್ನೊಂದು ಅವಧಿ, ಹಾಗೂ ಡಿಸೆಂಬರ್ ನಿಂದ ಮಾರ್ಚ್ ವರೆಗಿನ ಮತ್ತೊಂದು ಮೂರನೇ ಅವಧಿಯಲ್ಲಿ ಪಿಎಂ ಕಿಸಾನ್ ಯೋಜನೆಯ ಕಂತಿನ ಹಣ ಬಿಡುಗಡೆ ಆಗುತ್ತದೆ. ಕೇಂದ್ರ ಸರ್ಕಾರ ಒಟ್ಟು 6 ಸಾವಿರ ರೂಗಳನ್ನು ಒಂದು ವರ್ಷದಲ್ಲಿ ಫಲಾನುಭವಿ ರೈತರಿಗೆ ನೀಡುತ್ತದೆ. ಕರ್ನಾಟಕ ಸರ್ಕಾರ ಇದಕ್ಕೆ ಹೆಚ್ಚುವರಿಯಾಗಿ ಇನ್ನೆರಡು ಕಂತುಗಳನ್ನು ನೀಡುತ್ತದೆ. ಅಂದರೆ ಕರ್ನಾಟಕದಲ್ಲಿ ಫಲಾನುಭವಿ ರೈತರ ಖಾತೆಗಳಿಗೆ ಒಂದು ವರ್ಷದಲ್ಲಿ 10,000 ರೂ ಗಳಷ್ಟು ಹಣ ಜಮೆ ಆಗುತ್ತದೆ.




2019 ರಲ್ಲಿ ಫೆಬ್ರವರಿಯಲ್ಲಿ ಆರಂಭವಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಸಣ್ಣ ರೈತರ ವ್ಯವಸಾಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒದಗಿಸುವ ಸಹಾಯಧನವಾಗಿದೆ. ಮೊದಲಿಗೆ 5 ಎಕರೆಯೊಳಗಿನ ಜಾಮೀನು ಹೊಂದಿರುವ ರೈತರಿಗೆ ಮಾತ್ರ ಈ ಯೋಜನೆ ಸೀಮಿತವಾಗಿತ್ತು. ಈಗ ಎಲ್ಲಾ ರೈತರಿಗೂ ವಿಸ್ತರಣೆ ಆಗಿದೆ.


ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಈವರೆಗೆ 2,000 ರೂಗಳ 13ಕಂತುಗಳನ್ನು ಬಿಡುಗಡೆ ಮಾಡಿದ್ದೂ, ಮಾರ್ಚ್ 27ರಂದು ಬೆಳಗಾವಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ 13ನೇ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದರು. ಇದೀಗ 14ನೇ ಕಂತಿನ ಹಣ ಬಿಡುಗಡೆ ದಿನಗಣನೆ ಪ್ರಾರಂಭವಾಗಿದೆ. ವರ್ಷದಲ್ಲಿ 3 ಬಾರಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುತ್ತದೆ. ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ 14 ನೇ ಕಂತಿನ ಹಣ ಮೇ ತಿಂಗಳಲ್ಲಿ ಬಿಡುಗಡೆ ಆಗಬಹುದು ಎಂದು ಊಹಿಸಲಾಗಿದ್ದು, ಮೇ 3ನೇ ವಾರದಂದು ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.






ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸುವುದು ಹೇಗೆ ?

ಪಿಎಂ ಕಿಸಾನ್ ಯೋಜನೆಯಲ್ಲಿ ಕೋಟ್ಯಂತರ ರೈತರು ನೋಂದಾಯಿಸಿಕೊಂಡಿದ್ದಾರೆ. ಕೆವೈಸಿ ಪ್ರಕ್ರಿಯೆಯ ವೇಳೆ ಕೆಲವರ ಹೆಸರು ಕೈಬಿಟ್ಟಿರಬಹುದು. ಅಂಥವರು ಅಥವಾ ಈವರೆಗೂ ಯೋಜನೆ ಪಡೆಯದ ಅರ್ಹ ರೈತರು ಹೊಸದಾಗಿ ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ಇದೆ.





ಆನ್ಲೈನ್ ಮೂಲಕವೂ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್  http://www.pmkisan.gov.in ಇಲ್ಲಿಗೆ ಹೋಗಿ ಮುಖಪುಟದಲ್ಲಿ ಕಾಣುವ ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಮೊದಲ ಸಾಲಿನಲ್ಲಿರುವ ನ್ಯೂ ಫಾರ್ಮ್ರರ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ಪಡೆಯಿರಿ. ನಂತರ ಕೇಳಲಾಗುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ನಂತರ ಪಿಎಂ ಕಿಸಾನ್ ಅರ್ಜಿ ಫಾರ್ಮ್ ತುಂಬಿಸಿ ಅದನ್ನು ಸೇವ್ ಮಾಡಿ. 

ಪಿಎಂ ಕಿಸಾನ್ ಯೋಜನೆ ಪಡೆಯಲು ಅರ್ಹ ರೈತರು ಯಾರು ?

ಕೃಷಿ ಜಮೀನು ಮಾಲೀಕರಾಗಿರಬೇಕು. 

ಸರ್ಕಾರಿ ನೌಕರಿಯಲ್ಲಿರಬಾರದು. 

ಪಿಂಚಣಿದಾರರಿರಬಾರದು.

ಶಾಸಕ ಸಂಸದ, ಮಂತ್ರಿ ಇತ್ಯಾದಿ ಅಧಿಕಾರದಲ್ಲಿರಬಾರದು. ಹಿಂದೆಯೂ ಇದ್ದಿರಬಾರದು, 

ವೈದ್ಯ, ಇಂಜಿನಿಯರ್, ಲಾಯರ್, ಇತ್ಯಾದಿ ವೃತ್ತಿಗಳಲ್ಲಿರಬಾರದು. 

ಆದಾಯ ತೆರಿಗೆ ಪಾವತಿದಾರರಾಗಿರಬಾರದು.


             ಆನ್ಲೈನ್ ಮೂಲಕ ಸಾಧ್ಯವಾಗದಿದ್ದರೆ, ಇಮ್ಮ ಗ್ರಾಮದ ಸಮೀಪದ ಪಂಚಾಯಿತಿ ಕೇಂದ್ರಕ್ಕೆ ಹೋಗಿ ಅಲ್ಲಿ ಇಮ್ಮ ಆಧಾರ್ ಕಾರ್ಡ್ ಪ್ರತಿ ಹಾಗೂ ಜಮೀನು ಪಹಣಿ  ಪಿಎಂ ಕಿಸಾನ್ ಯೋಜನೆಗೆ ಹೆಸರು ನೋಂದಾಯಿಸಬಹುದು.






ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು