ಕರ್ನಾಟಕ ಸರ್ಕಾರದ ಪ್ರಕಟಣೆ :PhonePe, Google Pay, PayTm, Amazon Pay, BHIM UPI ಮತ್ತು ಮುಂತಾದ ಮಾಧ್ಯಮಗಳ ಮೂಲಕ ಆಸ್ತಿ ತೆರಿಗೆ ಪಾವತಿಸುವುದುರ ಬಗ್ಗೆ.

ಕರ್ನಾಟಕ ಸರ್ಕಾರದ ಪ್ರಕಟಣೆ :






PhonePe, Google Pay, PayTm, Amazon Pay, BHIM UPI ಮತ್ತು ಮುಂತಾದ ಮಾಧ್ಯಮಗಳ ಮೂಲಕ ಆಸ್ತಿ ತೆರಿಗೆ ಪಾವತಿಸುವುದುರ ಬಗ್ಗೆ.


ಗ್ರಾಮೀಣ ಜನತೆಗೆ ವಿವಿಧ ಇಲಾಖೆಗಳ ಸೇವೆಗಳ ದಾಖಲೆಗಳನ್ನು ತ್ವರಿತವಾಗಿ ಮತ್ತು ಸಮೀಪವಾಗಿ ಒಂದೇ ಸೂರಿನಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ವಿವಿಧ ಇಲಾಖೆಗಳ ಸೇವೆಗಳೊಂದಿಗೆ ಆಧಾರ್ ಸೇವೆಗಳನ್ನು ಗ್ರಾಮ ಪಂಚಾಯತಿಗಳಲ್ಲಿ ನೀಡುವ ಉದ್ದೇಶದಿಂದ ಬಾಪೂಜಿ ಸೇವಾ ಕೇಂದ್ರಗಳನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಲಾಗಿದೆ.

ಅದರಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳನ್ನು ತ್ವರಿತ ಗತಿಯಲ್ಲಿ ಆನ್ಲೈನ್ ಮೂಲಕ ಒದಗಿಸಲು "ಬಾಪೂಜಿ ಸೇವಾ ಕೇಂದ್ರ' ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಾಗಿದೆ. ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದ ಮೂಲಕ ಸಾರ್ವಜನಿಕರು ಗ್ರಾಮ ಪಂಚಾಯತಿಯ ಅಸ್ತಿ ತೆರಿಗೆಯನ್ನು ಮತ್ತು ಸೇವೆಗಳಿಗೆ ಸಂಬಂಧಿಸಿದ ಶುಲ್ಕಗಳನ್ನು ಆನ್ಲೈನ್ ಮೂಲಕ ಪಾವತಿಸಲು ಅನುವು ಮಾಡಿಕೊಡಲಾಗಿದೆ.





ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಪಾವತಿಗಳಲ್ಲಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ಗ್ರಾಮ ಪಂಚಾಯತಿಗಳಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಸಲುವಾಗಿ ಹಾಗೂ ಸಾರ್ವಜನಿಕರು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡದೆ  PhonePe, Google Pay, PayTm, Amazon Pay, BHIM UPI ಮತ್ತು ಮುಂತಾದ ಮಾಧ್ಯಮಗಳ ಮೂಲಕ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ.

             ಈ ಮೇಲೆ ಹೇಳಿರುವಂತೆ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆಯನ್ನು "ಬಾಪೂಜಿ ಸೇವಾ ಕೇಂದ್ರ" ತಂತ್ರಾಂಶ ಮತ್ತು ಮೊಬೈಲ್ ಆಪ್ ಮೂಲಕ ಪಾವತಿಸುವರ ಜೊತೆಗೆ PhonePe, Google Pay, PayTm, Amazon Pay, BHIM UPI ಮತ್ತು ಮುಂತಾದ ಮಾಧ್ಯಮಗಳ ಮೂಲಕ ಪಾವತಿಸಬಹುದಾಗಿದೆ.




ಗ್ರಾಮ ಪಂಚಾಯತಿಗಳು PhonePe, Google Pay, PayTm, Amazon Pay, BHIM UPI ಮತ್ತು ಮುಂತಾದ ಮಾಧ್ಯಮಗಳ ಮೂಲಕ ಆಸ್ತಿ ತೆರಿಗೆ ಪಾವತಿಯನ್ನು ಉತ್ತೇಜಿಸುವಂತೆ ಆದೇಶಿಸಿದೆ.







ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@











ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು