ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು (85.56), ಬೆಂಗಳೂರು ದಕ್ಷಿಣದಲ್ಲಿ ಅತಿ ಕಡಿಮೆ (52.33) ಮತದಾನ
ಬೆಂಗಳೂರು ಬುಧವಾರ ನಡೆದ ವಿಧಾನಸಭೆ ಚುನಾವಣೆಯ ಮತದಾನ ಪ್ರಮಾಣ ಹೊಸ ದಾಖಲೆ ಬರೆದಿದೆ. ಕಳೆದ ಬಾರಿಯ ವಿಧಾನಸಭೆ ಸರ್ವೇ ತ್ರಿ.ಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇಕಡಾವಾರು 0.75% ರಷ್ಟು ಹೆಚ್ಚಾಗಿದ್ದು ಶೇ 73.19% ರಷ್ಟು ಮತದಾನವಾಗಿದೆ.
2018ರ ಚುನಾವಣೆಯಲ್ಲಿ ಶೇ 72 ರಷ್ಟು ಮತದಾನವಾಗಿತ್ತು. ಇದೀಗ ಶೇ 73.19ರಷ್ಟು ಮತದಾನವಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. 2013 ರಲ್ಲಿ ಶೇ 71.83 ರಷ್ಟು ಮತದಾನವಾಗಿತ್ತು. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಗುರುವಾರ ಅಂತಿಮ ಮತದಾನದ ಪ್ರಮಾಣವನ್ನು ಅಧಿಕೃತವಾಗಿ ಪ್ರಕಟಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಶೇ 85.56 ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ಶೇ 52.33 ರಷ್ಟು ಮತದಾನವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ರಾಮನಗರ ಜಿಲ್ಲೆಯಲ್ಲಿ ಶೇ85.04ರಷ್ಟು ಮಾತಾಡನದೊಂದಿಗೆ 2ನೇ ಸ್ಥಾನದಲ್ಲಿದೆ. ಮಂಡ್ಯ ಶೇ 84.45 ಮಾತಾಡನದೊಂದಿಗೆ 3ನೇ ಸ್ಥಾನದಲ್ಲಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 10.50 ಲಕ್ಷ ಮತದಾರರಿದ್ದು, 8.98 ಲಕ್ಷ ಮಂದಿ ಮತ ಚಲಾಯಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಬೆಂಗಾಲಿನಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಶೇ 55 ರಷ್ಟು ಮತ ಚಲಾಯಿಸಲಾಗಿದೆ. ಕಡಿಮೆ ಮತದಾನ ಪ್ರಮಾಣವಾಗಿರುವ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣವಾಗಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ರೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಆಯೋಗ ಎಬೇಸರ ವ್ಯಕ್ತಪಡಿಸಿದೆ. ಮುಂದಿನ ಬರಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲು ಮುಂದಾಗಿದೆ.
ರಾಜ್ಯದಲ್ಲಿ 5.30 ಕೋಟಿ ಮತದಾರರಿದ್ದರು. ಈ ಪೈಕಿ 3.88 ಕೋಟೀ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 1.96 ಕೋಟಿ ಪುರುಷರು, 1.91 ಕೋಟಿ ಮಹಿಳೆಯರು, 1037 ಇತರರು ಮತ ಚಲಾಯಿಸಿದ್ದಾರೆ. ಶೇ 73.68 ರಷ್ಟು ಪುರುಷರು, ಶೇ 72.70 ಮಹಿಳೆಯರು, ಶೇ 21.05ರಷ್ಟು ಇತರರಿಂದ ಮತದಾನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Election