ದಿ ಕೇರಳ ಸ್ಟೋರಿ ಫಿಲಂ ನೋಡಿ....
ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ' (ಮೇ 5) ದೇಶಾದ್ಯಂತ ರಿಲೀಸ್ ಆಗಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಕೆಲವು ಥಿಯೇಟರ್‌ಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರೆ, ಈ ಸಿನಿಮಾ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ.
ದಿ ಕೇರಳ ಸ್ಟೋರಿ ಫಿಲಂ ನೋಡಿ
'ದಿ ಕೇರಳ ಸ್ಟೋರಿ' ಸಿನಿಮಾಗೆ ಸುದೀಪ್ತೋ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ಅದಾ ಶರ್ಮಾ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ವಿಜಯ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ತೀವ್ರ ಪ್ರತಿಭಟನೆಗಳ ನಡುವೆಯೂ ಬಿಡುಗಡೆಯಾಗಿದ್ದು, ಇಷ್ಟಪಟ್ಟವರು ಹಾಗೂ ಕಷ್ಟಪಟ್ಟವರು ಇಬ್ಬರೂ ಇದ್ದಾರೆ.
ಟೀಸರ್ ಹಾಗೂ ಟ್ರೈಲರ್‌ನಲ್ಲಿ ಕೇರಳದ ಸುಮಾರು 32 ಸಾವಿರ ಮಂದಿ ಇಸ್ಲಾಂಗೆ ಮತಾಂತರಗೊಂಡಿದ್ದು, ಭಯೋತ್ಪಾದನೆ ಸಂಘಟನೆ ಸೇರಿಕೊಂಡಿದ್ದಾರೆಂದು ಆರೋಪ ಮಾಡಲಾಗಿತ್ತು. ಹೀಗಾಗಿ ಕೇರಳದಲ್ಲಿ ಸಿನಿಮಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗಿದ್ದರೆ, ಇಷ್ಟೊಂದು ವಿವಾದ ಸೃಷ್ಟಿಸಿದ್ದ 'ದಿ ಕೇರಳ ಸ್ಟೋರಿ' ಕಥೆಯೇನು? ಸಿನಿಮಾದ ಹೈಲೈಟ್ ಏನು? ಕಥೆಯಲ್ಲಿ ಸತ್ಯಾಂಶವಿದೇ? ಇದನ್ನು ತಿಳಿಯಲು ಮುಂದೆ ಓದಿ.
'ದಿ ಕೇರಳ ಸ್ಟೋರಿ' ಏನು?
'ದಿ ಕೇರಳ ಸ್ಟೋರಿ' ಸಿನಿಮಾ ಕಥೆಯೇನು? ಅನ್ನೋದು ಇಂದು (ಮೇ 5) ರಿವೀಲ್ ಆಗಿದೆ. ಇದು ಶಾಲಿನಿ ಉನ್ನಿ ಕೃಷ್ಣನ್ ಎಂಬ ಹುಡುಗಿ, ಫಾತಿಮಾ ಆದ ಕಥೆ. ಸಿನಿಮಾ ಟೀಮ್ ಇದನ್ನು ಸತ್ಯ ಘಟನೆಗಳನ್ನು ಆಧಾರಿಸಿದ ಕಥೆಯೆಂದು ಹೇಳಿದೆ. ಕೇರಳದ ಶಾಲಿನಿ ಎಂಬ ಮುದ್ದಾದ ಹುಡುಗಿ ಓದಲು ಕಾಸರಗೋಡಿನ ಕಾಲೇಜಿಗೆ ಸೇರುತ್ತಾಳೆ. ಅಲ್ಲೇ ಹಾಸ್ಟೆಲ್‌ಗೂ ಸೇರುತ್ತಾಳೆ. ಅಲ್ಲೇ ಅವಳಿಗೆ ಹೊಸ ಸ್ನೇಹಿತರು ಪರಿಚಯ ಆಗುತ್ತಾರೆ.
ಅವರಲ್ಲಿ ಒಬ್ಬರು ಹಿಂದೂ, ಮತ್ತೊಬರು ಕ್ರಿಶ್ಚಿಯನ್ ಹಾಗೂ ಇನ್ನೊಬ್ಬರು ಮುಸ್ಲಿಂ. ಇವರಲ್ಲಿರು ಮುಸ್ಲಿಂ ಹುಡುಗಿ, ಹಿಂದೂ ಯುವತಿಗೆ ಇಸ್ಲಾಂ ಧರ್ಮ ತುಂಬಿ, ಮತಾಂತರಗೊಳ್ಳುವಂತೆ ಮಾಡುತ್ತಾಳೆ. ಇದು ಯಾರ ಕೃತ್ಯ? ಸಂಚು ರೂಪಿಸಿದವರು ಯಾರು? ಈ ಸಂಘಟನೆ ಯುವತಿಯನ್ನು ಹೇಗೆ ಬಲೆಗೆ ಬೀಳಿಸಿಕೊಳ್ಳುತ್ತೆ? ಅನ್ನೋದನ್ನು ತೋರಿಸಲಾಗಿದೆ.
https://bit.ly/3pXg5Mo