ನಿಮಗೂ ಈ ನಂಬರ್ ಗಳಿಂದ ಕರೆ ಬರುತ್ತದೆಯೇ? ಈ ಕೂಡಲೇ ಬ್ಲಾಕ್ ಮಾಡಲು ಸೂಚಿಸಿದ ವಾಟ್ಸಾಪ್ !!
ಕರ್ನಾಟಕ 224 ವಿಧಾನಸಭಾ ಕ್ಷೇತ್ರಗಳ ಕಾಂಗ್ರೇಸ್ ಗೆಲುವಿನ ಅಂತರ ಹಾಗೂ ಅಭ್ಯರ್ಥಿಗಳ ವಿವರ.
ಇಂದಿನ ಡಿಜಿಟಲ್ ಯುಗದಲ್ಲಿ ಸಂದೇಶ ಕಳುಹಿಸಲು ಮತ್ತು ಹತ್ತಿರದ ಆತ್ಮೀಯರೊಂದಿಗೆ ಸಂಪರ್ಕದಲ್ಲಿರಲು Whatsapp ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ.
ವಾಟ್ಸಾಪ್ ನಲ್ಲಿ ಇತ್ತೀಚಿಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಅಂತಾರಾಷ್ಟ್ರೀಯ ವಿಡಿಯೋ ಮತ್ತು ಆಡಿಯೋ ಕಾಲ್ ಗಾಲ ಹಾವಳಿ ತೀವ್ರವಾಗಿದೆ. ಭಾರತೀಯ ಗ್ರಾಹಕರಿಗೆ ಅಂತಹ ಸಂಖ್ಯೆಗಳನ್ನು ಬ್ಲಾಕ್ ಮಾಡಿ ರಿಪೋರ್ಟ್ ಮಾಡಲು ವಾಟ್ಸಾಪ್ ಸೂಚಿಸಿದೆ.
"ಮಾಸಿಕ ೨೦೦ ಕೋಟಿ ಬಳಕೆದಾರರ ಸಂಖ್ಯೆಯೊಂದಿಗೆ ವಾಟ್ಸಾಪ್ ಇಂದ ವಂಚನೆ ಎಸಗುವ ಜನರ ಬಳಕೆಗೆ ಸುಲಭವಾಗಿದೆ. ಹೀಗಾಗಿ ಅಪರಿಚಿತ ಅಂತಾರಾಷ್ಟ್ರೀಯ ನಂಬರ್ ಗಳಿಂದ ವಿಡಿಯೋ ಮತ್ತು ಆಡಿಯೋ ಕಾಲ್ ಗಳು ಬರುತ್ತಿವೆ. ಈ ನಂಬರ್ ಗಳು ಮಲೇಷಿಯಾ, ಕೀನ್ಯಾ, ವಿಯೆಟ್ನಾಮ್ ಮತ್ತು ಇಥಿಯೋಪಿಯಾದ ಐಎಸ್ ಡಿ ಕೋಡ್ ಗಳನ್ನೂ ಹೊಂದಿವೆ. ಕರೆ ಬಂದವರು ಯಾರು ಮತ್ತು ಅವರ ಉದ್ದೇಶ ಏನೆಂದು ಅರಿಯದೆ ಇರುವುದು ಸಾಧ್ಯವಿಲ್ಲ. ಎಂದು ಭಾರತೀಯ ವಾಟ್ಸಾಪ್ ಬಳಕೆದಾರರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂತಹ ಸಂಖ್ಯೆಗಳನ್ನು ನಿರ್ಬಂಧಿಸಿ ಮ್ಯಾಟ್ ರಿಪೋರ್ಟ್ ಮಾಡಿ ಎಂದು ವಾಟ್ಸಾಪ್ ಹೇಳಿದೆ. ಇದಲ್ಲದೆ, ಗ್ರಾಹಕರ ಸುರಕ್ಷತೆ ಕುರಿತು ಹಲವಾರು ಕ್ರಮ ಕೈಗೊಳ್ಳಲಾಗಿದ್ದು ವಂಚನೆಯಿಂದ ಗ್ರಾಹಕರನ್ನು ರಕ್ಷಿಸಲಾಗುವುದು ಎಂದು ವಾಟ್ಸಪ್ ಭರವಸೆ ನೀಡಿದೆ.