ಸುಡು ಬಿಸಿಲಿಗೆ ನಿಮ್ಮ ಟ್ಯಾಂಕ್ ನೀರು ಬಿಸಿಯಾಗ್ತಿದೀಯಾ? ಚಿಂತೆ ಬಿಟ್ಟು ಈ ಸಿಂಪಲ್ ಟ್ರಿಕ್ಸ್ ಬಳಸಿ :

ಸುಡು ಬಿಸಿಲಿಗೆ ನಿಮ್ಮ ಟ್ಯಾಂಕ್ ನೀರು ಬಿಸಿಯಾಗ್ತಿದೀಯಾ?  ಚಿಂತೆ ಬಿಟ್ಟು ಈ  ಸಿಂಪಲ್ ಟ್ರಿಕ್ಸ್  ಬಳಸಿ :




News Yaro : ಮುಂಗಾರು ಪೂರ್ವ ಮಳೆ ಅಲ್ಲಲ್ಲಿ ಸುರಿಯುತ್ತಿದ್ದರು ತಾಪಮಾನ ಕಡಿಮೆಯಾಗಿಲ್ಲ. ಮಿತಿ ಮೀರಿದ ಬಿಸಿಲಿನ ಝಳಕ್ಕೆ ಎಲ್ಲರೂ ಕಂಗಾಲಾಗಿದ್ದಾರೆ. ಜೊತೆಗೆ ಇನ್ನು ೫ ವರ್ಷ ವಾತಾವರಣದ ಉಷ್ಣತೆ ಹೆಚ್ಚಲಿದೆ ಎಂದು ವಿಶ್ವಸಂತೆ ಎಚ್ಚರಿಸಿದೆ. ಬಿಸಿಲಿನ ಇನ್ನೊಂದು ಸಮಸ್ಯೆ ಎಂದರೆ ಈ ಬಿಸಿಲಿನ ಬೇಗೆಗೆ ಟ್ಯಾಂಕ್ ನಲ್ಲಿರುವ ನೀರು ಕೂಡ  ಬೆಚ್ಚಗಾಗುತ್ತದೆ.ಈ ಸಮಸ್ಯೆಯನ್ನು ಪರಿಹರಿಸಲು, ಟ್ಯಾಂಕ್ ನೀರು ಸದಾ ತಂಪಾಗಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.........




ಬಟ್ಟೆ :

ಸೂರ್ಯನ ಬೆಳಕು ನೇರವಾಗಿ ಟ್ಯಾಂಕ್ ಮೇಲೆ ಬೀಳುವುದರಿಂದ ನೀರು ಬೇಗ ಬಿಸಿಯಾಗುತ್ತದೆ. ಆದ್ದರಿಂದ ಟ್ಯಾಂಕ್ ಸುತ್ತಲೂ ಬಟ್ಟೆ ಕಟ್ಟಿ ಟ್ಯಾಂಕ್ ಮೇಲೆ ನೇರವಾಗಿ ಸೂರ್ಯ ರಶ್ಮಿ ಬೀಳದಂತೆ ನೋಡಿಕೊಳ್ಳಿ.

ಸೆಣಬಿನ ಚೀಲ :

ಸೆಣಬಿನ ಚೀಲ ಯಾರಿಗೆ ಗೊತ್ತಿಲ್ಲ ಹೇಳಿ?  ಮನೆಯಲ್ಲಿ ಇಲ್ಲದಿದ್ದರೆ ಇದು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಈ ಸೆಣಬಿನ ಚೀಲವನ್ನು ಚೆನ್ನಾಗಿ ನೆನೆಸಿ ಟ್ಯಾಂಕ್ ಸುತ್ತಲೂ ಕಟ್ಟಿ, ಇದರಿಂದ ನೀರು ಬೇಗ ಬಿಸಿಯಾಗುವುದಿಲ್ಲ.

ಥರ್ಮಾಕೋಲ್ :

ಥರ್ಮಾಕೋಲ್ ಶಾಖವನ್ನು ದಾಟಿಸುವುದಿಲ್ಲ. ಹೀಗಾಗಿ ಟ್ಯಾಂಕ್ ಸುತ್ತಲೂ ಥರ್ಮಾಕೋಲ್ ಅಳವಡಿಸಿ ಅದನ್ನು ಹಗ್ಗದ ಮೂಲಕ ಕಟ್ಟಿ, ಇದರಿಂದಲೂ ನೀವು ಟ್ಯಾಂಕ್ ನೀರು ಬಿಸಿಯಾಗುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.






ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು