ಮೊದಲ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ 5 ಗ್ಯಾರೆಂಟಿಗಳ ಬಗ್ಗೆ ಘೋಷಣೆ ಮಾಡಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ:
- ಗೃಹಜ್ಯೋತಿ: ಎಲ್ಲಾ ಮನೆಗಳಿಗೆ 200 ಯುನಿಟ್ ವಿದ್ಯುತ್ ಫ್ರೀ.
- ಗೃಹ ಲಕ್ಷ್ಮೀ:ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ ಉಚಿತ.
- ಅನ್ನಭಾಗ್ಯ ಯೋಜನೆ: BPL ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು 10 Kg ಉಚಿತ ಅಕ್ಕಿ.
- ಯುವನಿಧಿ ಯೋಜನೆ: ಈ ವರ್ಷ ಪದವಿ ಆದವರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು ಉಚಿತ 3000.
- ಯುವನಿಧಿ ಯೋಜನೆ: ಡಿಪ್ಲೋಮ ಆದವರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು ಉಚಿತ 1500.
- ಉಚಿತ ಬಸ್ ಪ್ರಯಾಣ, ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪಾಸ್.
ಜೂನ್ 1 ರಿಂದ ಪ್ರತಿ ಬಿಪಿಎಲ್ ಕುಟುಂಬದಾರರಿಗೆ ಅನ್ನಭಾಗ್ಯ ಯೋಜನೆ ಪ್ರಾರಂಭವಾಗುತ್ತಿದೆ.
ಪ್ರತಿತಿಂಗಳು ಪ್ರತಿವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ ಕೊಡಲಾಗುತ್ತಿದೆ.
ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ಸರ್ಕಾರ ರಚನೆಗೊಂಡಬಳಿಕ ರಾಜ್ಯದ ಮುಖ್ಯಮಂತ್ರಿಗಳು ಜೂನ್ 1 ರಿಂದ ಪ್ರತಿ ಬಿಪಿಎಲ್ ಕುಟುಂಬದಾರರಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತವಾಗಿ ಸರ್ಕಾರ ಘೋಷಣೆ ಮಾಡಲಿದ್ದಾರೆ. ಇದಕ್ಕೆ ಅರ್ಹತೆಗಳೇನು ಹಾಗೂ ಯಾವ ದಾಖಲೆಗಳು ಬೇಕಾಗುತ್ತವೆ? ಹೊಸ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವುವು? ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
ರಾಜ್ಯದ ಜನತೆಗೆ ಇದೊಂದು ಸಿಹಿ ಸುದ್ಧಿ ಎಂದು ಹೇಳಬಹುದು, ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ ಪ್ರತಿ ಬಿಪಿಎಲ್ ಕುಟುಂಬದಾರರಿಗೆ 10 ಕೆಜಿ ಅಕ್ಕಿ ಉಚಿತವಾಗಿ ಕರ್ನಾಟಕ ಸರ್ಕಾರವು ಜೂನ್ 1 ರಿಂದ ಪ್ರಾರಂಭವಾಗುತ್ತಿದೆ.
ಇನ್ನು ಯಾರೆಲ್ಲ ಹೊಸಬರು ಇದ್ದೀರಾ, ಬಿಪಿಎಲ್ ಕಾರ್ಡ್ ಪಡೆಯಬೇಕಾದರೆ ಅರ್ಹತೆಗಳೇನು ಹಾಗು ಯಾವ ದಾಖಲಾತಿಗಳು ಬೇಕಾಗುತ್ತವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿಪಿಎಲ್ ಕಾರ್ಡ್ ಪಡೆಯಬೇಕಾದರೆ ಯಾವೆಲ್ಲ ದಾಖಲಾತಿಗಳು ಬೇಕಾಗುತ್ತವೆ.
1 ಆಧಾರ್ ಕಾರ್ಡ್
2 ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3 ವೋಟರ್ ಐಡಿ
4 ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಹೊಂದಿರಬೇಕು.
ಮೇಲಿನ ಎಲ್ಲ ದಾಖಲಾತಿಗಳು ಒದಗಿಸಿದ್ದಲ್ಲಿ ನೀವೇ ಸ್ವತಃ ಆನ್ಲೈನ್ ಅಪ್ಲಿಕೇಶನ್ ಹಾಕಬಹುದು.
ಅರ್ಹತೆಗಳು :
ಬಿಪಿಎಲ್ ರೇಷನ್ ಕಾರ್ಡ್ ಪಡೆಯಬೇಕಾದರೆ ಅತಿ ಕಡುಬಡವರು ಹಾಗೂ ಮಧ್ಯಮವರ್ಗದ ಬಡವರು ಇದಕ್ಕೆ ಅರ್ಹರಾಗಿರುತ್ತಾರೆ. ಹಾಗೂ ಪ್ರತಿ ವ್ಯಕ್ತಿಯು ಕೂಡ ಆಧಾರ್ ಕಾರ್ಡ್ ಹೊಂದಿರಬೇಕಾಗುತ್ತದೆ. ಹಾಗೂ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ. ಇವೆಲ್ಲಾ ದಾಖಲಾತಿ ಹೊಂದಿರುವ ಎಲ್ಲರೂ ಕೂಡ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಾಲ್ಗೊಂಡು 10 ಕೆಜಿ ಅಕ್ಕಿಯನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Govt.scheme