5 ಸಾವಿರ ಮಂದಿಗೆ ವಿದ್ಯಾರ್ಥಿವೇತನ

 

5 ಸಾವಿರ ಮಂದಿಗೆ ವಿದ್ಯಾರ್ಥಿವೇತನ 


ರಿಲಯನ್ಸ್ ಪೌಂಡೇಶನ್ ವತಿಯಿಂದ 2022-23 ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ದೇಶಾದ್ಯಂತ ೫ ಸಾವಿರ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. 


ಮೊದಲ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ 5 ಗ್ಯಾರೆಂಟಿಗಳ ಬಗ್ಗೆ ಘೋಷಣೆ ಮಾಡಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ:


27 ರಾಜ್ಯಗಳು ಹಾಗೂ ನಾಲ್ಕು ಕೇಂದ್ರಾಡಳಿತ ಪ್ರದೇಶಗಳಿಂದ 4984 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ, 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಈ ಪೈಕಿ ಅಂತಿಮವಾಗಿ 5 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ವಿದ್ಯಾರ್ಥಿಗೆ ತಲಾ 2 ಲಕ್ಷ ರೂ. ವಿದ್ಯಾರ್ಥಿವೇತನ ಸಿಗಲಿದೆ. 

ವಿದ್ಯಾರ್ಥಿವೇತನವು ಉತ್ತಮ ಶಿಕ್ಷಣ ಪಡೆಯುವ ಯುವಜನರ ಕನಸನ್ನು ನನಸು ಮಾಡಲಿದೆ. ವಿವಿಧ ಅಧ್ಯಯನ ವಿಭಾಗಗಳಿಂದ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರ ಜತೆಗೆ ದೇಶದ ಪ್ರಗತಿಗೆ ಕೊಡುಗೆ ನೀಡಲಿದ್ದಾರೆ ಎಂದು ರಿಲಯನ್ಸ್ ಪೌಂಡೇಶನ್ ಸಿಇಒ ಜಗನ್ನಾಥ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


BANK RULES : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ ರಿಸರ್ವ್ ಬ್ಯಾಂಕ್ ಹೊಸ ಸೂಚನೆ, ಎಲ್ಲರಿಗೂ ಗುಡ್ ನ್ಯೂಸ್ ?


ರಿಲಯನ್ಸ್ ಪೌಂಡೇಶನ್ ಕೊಡುಮಾಡುವ ಸ್ಕಾಲರ್ಶಿಪ್ 

5 ಸಾವಿರ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ರೂ.

ರಿಲಯನ್ಸ್ ಪೌಂಡೇಶನ್ ' ಮೆರಿಟ್ - ಕಮ್ - ಮಿನ್ಸ್ ' ಆಧಾರದ ಮೇಲೆ ಅಂದರೆ ಪಿಯುಸಿಯಲ್ಲಿ ಪಡೆದ ಅಂಕಗಳು ಹಾಗೂ ಇತರ ಅರ್ಹತಾ ಮಾನದಂಡಗಳನ್ನು ಆಧರಿಸಿ ವಿದ್ಯಾರ್ಥಿವೇತನ ನೀಡುತ್ತಿದೆ. ಈ ವರ್ಷ ಬಿಇ, ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ವಾಣಿಜ್ಯ, ಕಲೆ, ವ್ಯಾಪಾರ/ನಿರ್ವಹಣೆ, ಕಾನೂನು, ಶಿಕ್ಷಣ, ಆತಿಥ್ಯ, ವಾಸ್ತುಶಿಲ್ಪ ಸೇರಿ ಇತರ ವೃತ್ತಿಪರ ಪದವಿ ವಿದ್ಯಾರ್ಥಿಗಳೂ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@













ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು