ದಿನಗೂಲಿ ಕಾರ್ಮಿಕನಿಗೆ ಒಲಿದ ಅದೃಷ್ಟ ಲಕ್ಷ್ಮೀ....!

ದಿನಗೂಲಿ ಕಾರ್ಮಿಕನ ಕೋಟಿ ರೂಪಾಯಿ ಗಳಿಸೋ ಡ್ರಿಮ್ ನಿಜವಾಗಿಸಿದ ಡ್ರಿಮ್ ಇಲೆವೆನ್-ಕಡುಬಡವನಿಗೆ ಒಲಿದ ಅದೃಷ್ಟ ಲಕ್ಷ್ಮೀ ಎರಡು ಕೋಟಿ ರೂಪಾಯಿ ಬಂಪರ್....!





ಕೆಲವೊಬ್ಬರ ಜೀವನದಲ್ಲಿ ರಾತ್ರೋ ರಾತ್ರಿ ಅಚ್ಚರಿಗಳು ನಡೆದು ಕುಬೇರರಾಗುತ್ತಾರೆ ಎಂಬ ಮಾತಿದೆ. ಆ ಮಾತಿಗೆ ಕನ್ನಡಿ ಹಿಡಿದಂತೆಯೇ ಇದೀಗ ರಾಜಸ್ಥಾನದ ರೂಪವಾಸ್ ಜಿಲ್ಲೆಯ ಮಾದಪುರದ ದಿನಗೂಲಿ ನೌಕರನಾದ ಖೇಮ್ ಸಿಂಗ್ ಆನ್ಲೈನ್ ಗೇಮ್ ಡ್ರಿಮ್ 11 ಮೂಲಕ 2 ಕೋಟಿ  ಬಹುಮಾನ ಗೆದ್ದು ಕೋಟ್ಯಾಧೀಶ್ವರನಾಗಿದ್ದಾನೆ.

ಇದರಲ್ಲಿ ಅಚ್ಚರಿಯ ವಿಚಾರವೆಂದರೆ ಖೇಮ್ ಸಿಂಗ್ ಅವರು ಕ್ರಿಕೆಟ್ ಬಗ್ಗೆ ಒಂದಿಷ್ಟು ತಿಳಿದಿಲ್ಲ ಮತ್ತು ಆಸಕ್ತಿಯೂ ಇಲ್ಲವಂತೆ. ಗೆಳೆಯರೆಲ್ಲ ಡ್ರಿಮ್ 11 ಆಡುವುದನ್ನು ನೋಡಿ ಇವರೂ ಕೂಡ ಆಡಲು ಆರಂಭಿಸಿದರು.ಇತ್ತೀಚಿಗೆ ಚೆನ್ನೈ ವರ್ಸಸ್ ಹೈದರಾಬಾದ್ ಪಂದ್ಯದ ವೇಳೆ ಡ್ರಿಮ್ 11 ರಲ್ಲಿ 49 ರೂ.ಹೂಡಿಕೆ ಮಾಡಿ 2 ಕೋಟಿ ರೂಪಾಯಿ ಗೆದ್ದಿದ್ದಾರೆ. ಇದರಿಂದ ಖೇಮ್ ಸಿಂಗ್ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅತೀವ ಸಂತಸ ಪಟ್ಟಿದ್ದು ಅವರನ್ನು ಪೇಟ, ಶಾಲು ಹೊದಿಸಿ ಸನ್ಮಾನಿಸಿ ಸಂಭ್ರಮಿಸಿದ್ದಾರೆ.


SSLC ಫಲಿತಾಂಶ ಯಾವಾಗ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.


ಕಡುಬಡವನಿಗೆ ಒಲಿದ ಅದೃಷ್ಟ ಲಕ್ಷ್ಮೀ..

ಸದ್ಯ ಡ್ರಿಮ್ 11 ಮೂಲಕ 2 ಕೋಟಿ ಗೆದ್ದು ಕೋಟ್ಯಾಧೀಶ್ವರನಾಗಿರುವ ಖೇಮ್ ಸಿಂಗ್ ಅವರದ್ದು ಅತ್ಯಂತ ಕಡುಬಡತನದ ಕುಟುಂಬ. ಹೊಟ್ಟೆ ಪಾಡಿಗಾಗಿ ಇವರ ಮನೆಯವರು ಹರಿಯಾಣದ ಗುರ್ಗಾಂವ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಊರಿನ ಗೆಳೆಯರು ಡ್ರಿಮ್ 11 ಆಡುವುದನ್ನು ಕಂಡು ಇವರೂ ಕೂಡ ಆಡಲು ಪ್ರಾರಂಭಿಸಿದರು. ಮೊದಲ ಸಲ ಅಡಿದಾಗ ಹಣ ಬಾರದೇ ನಿರಾಸೆಗೀಡಾದ ಖೇಮ್ ಸಿಂಗ್ ಅನಂತರದ ಆಟದಲ್ಲಿ CSK v/s RR ಪಂದ್ಯದ ವೇಳೆ 49 ರೂ ಹೂಡಿಕೆ ಮಾಡಿ ೨ ಕೋಟಿ ರೂಪಾಯಿ ಗೆದ್ದಿದ್ದಾರೆ.
 

ಖೇಮ್ ಸಿಂಗ್ ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಖೇಮ್ ಸಿಂಗ್ ' ನಮ್ಮದು ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತು. ಆದರೆ ಡ್ರಿಮ್ 11 ಮೂಲಕಕೋಟಿ ಗೆದ್ದಿರುವುದು ಸಂತಸವಾಗಿದೆ. ಈಗಾಗಲೇ ಬಹುಮಾನದಲ್ಲಿ 69 ಲಕ್ಷ ಅಕೌಂಟ್ ಗೆ ಬಂದಿದೆ. ಉಳಿದ ಹಣ ಸದ್ಯದಲ್ಲೇ ಕೈ ಸೇರಲಿದೆ. ಬಂದಿರುವ ಈ ದೊಡ್ಡ ಮೊತ್ತವನ್ನು ಏನು ಮಾಡಬೇಕು  ಇನ್ನೂ ನಿರ್ಧರಿಸಿಲ್ಲ.' ಎಂದಿದ್ದಾರೆ.









ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@





















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು