ಮಲಗಿದ್ದ ನಾಯಿಯನ್ನು ರಾತ್ರೋ-ರಾತ್ರಿ ಹಿಡಿದೆಳೆದೊಯ್ದ ಚಿರತೆ :

ಮಲಗಿದ್ದ ನಾಯಿಯನ್ನು ರಾತ್ರೋ-ರಾತ್ರಿ ಹಿಡಿದೆಳೆದೊಯ್ದ ಚಿರತೆ :




ಮಹಾರಾಷ್ಟ್ರದ ಕಬ್ಬಿಣ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಆ ಮನುಷ್ಯನ ಪಕ್ಕದಲ್ಲಿ ನಾಯಿ ಇರದಿದ್ದರೆ ಮುಂದೇನಾಗುತ್ತಿತ್ತು ಊಹಿಸಿ !! ನೆಟ್ಟಿಗರು ಭಯಂಕರ ಗಾಬರಿಗೆ ಬಿದ್ದಿದ್ದಾರೆ.

ಕಾಡುಪ್ರಾಣಿಗಳು ಯಾಕೆ ನಾಡಿಗೆ ಬರುತ್ತವೆ? ಆಹಾರದ ಕೊರತೆಯಾದಾಗಲೇ ಅಲ್ಲವೇ?? ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ರಾತ್ರಿಯಾಗಿದೆ.ಕಬ್ಬು, ಬಾಳೆ ಮುಂತಾದ ಹಣ್ಣುಗಳನ್ನು ಬೆಳೆಯುವ ತೋಟದ ಬಳಿ ಹಾಕಲಾದ ಶೆಡ್ ದಿನವಿಡೀ ಕೆಲಸ ಮಾಡಿ ಹೈರಾಣಾದ ಮನುಷ್ಯರು ಗಾಡಿಗಳು ವಿಶ್ರಾಂತಿಯಲ್ಲಿ ಒಂದು ಮಂಚದ ಮೇಲೆ ಒಬ್ಬ ಮನುಷ್ಯ ಗಾಢನಿದ್ರೆಯಲ್ಲಿದ್ದಾನೆ. ಪಕ್ಕದಲ್ಲಿ ನಾಯಿಯೊಂದು ಮಲಗಿದೆ. ಆಗ ನೋಡಿ ಮುಂದೇನಾಗುತ್ತದೆ ಎಂದು ...............




ಸ್ವಲ್ಪ ಹೊತ್ತಿಗೆ ಚಿರತೆಯೊಂದು ಮನುಷ್ಯ ಮಲಗಿದಲ್ಲಿ ಬರುತ್ತದೆ. ಪಕ್ಕದಲ್ಲಿ ಮಲಗಿದ್ದ ನಾಯಿಯು ಎಚ್ಚೆತ್ತು ಒಂದೇ ಸಮನೆ ಬೊಗಳಲು ಆರಂಭಿಸುತ್ತದೆ. ಆದರೆ ಚಿರತೆ ಒಂದೇ ಏಟಿಗೆ ಅದನ್ನು ಬೇಟೆಯಾಡಿ ಎಳೆದುಕೊಂಡು ಹೋಗುತ್ತದೆ. ಈ ವಿಡಿಯೋ ನೋಡಿ ನೆಟ್ಟಿಗರು ಭಯಂಕ ಹೌಹಾರಿದ್ದಾರೆ. ಇನ್ನು ಪಕ್ಕದಲ್ಲಿ ಮಲಗಿದ್ದ ಆ ಮನುಷ್ಯನಿಗೆ ಏನು ನಡೆಯುತ್ತಿದೆ ತನ್ನ ಸುತ್ತ ಎಂದು ಅರಗಿಸಿಕೊಳ್ಳಲು ಎಷ್ಟು ಸಮಯ ಬೇಕಾಯಿತೋ ?!!! ಏನೋ 

ಈ ವಿಡಿಯೋ ಅನ್ನು ಮೇ 16 ರಂದು ಹಂಚಿಕೊಳ್ಳಲಾಗಿದೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ತಾನು ಮಲಗಿಕೊಂಡಾಗ ಏನಾಯಿತು ಎನ್ನುವುದು ಅರಿವಿಗೆ ಬರುತ್ತಿದ್ದಂತೆ ಆ ಮನುಷ್ಯನ ಫ್ಯೂಸ್ ಆಫ್ ಆಗಿರಲು ಸಾಕು ಎಂದು ಹೇಳಿದ್ದಾರೆ ಒಬ್ಬರು. ಅಯ್ಯೋ,, ನಾನು ಬಾಲ್ಯದಲ್ಲಿ ಇಂಥ ದೃಶ್ಯಗಳನ್ನು ಕಣ್ಣಾರೆ ನೋಡಿದ್ದೇನೆ. ಆಗ ಮೇಕೆಗಳನ್ನು ಚಿರತೆಗಳು ಹೀಗೆ ಎಳೆದುಕೊಂಡು ಹೋಗುತ್ತಿದ್ದವು. ಈಗಿಲ್ಲಿ ನಾಯಿಯಷ್ಟೇ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.




ಅಕಸ್ಮಾತ್ ಇಲ್ಲಿ ನಾಯಿ ಇರದಿದ್ದಲ್ಲಿ ಮಲಗಿಕೊಂಡ ಮನುಷ್ಯ ಬಲಿ  ಗ್ಯಾರಂಟಿ! ಎಂದು ಮತ್ತೊಬ್ಬರು ಹೇಳಿದ್ದಾರೆ. ಚಿರತೆಗಳು ಬುದ್ಧಿವಂತ ಜೀವಿಗಳು. ಜಿಮ್ ಕಾರ್ಬೆಟ್ ನ ಪುಸ್ತಕದಲ್ಲಿ ಚಿರತೆಗಳ ನಡೆವಳಿಕೆಯ ಬಗ್ಗೆ ಸಾಕಷ್ಟು ಒಳ್ಳೆಯ ಮಾಹಿತಿ ಇದೆ. ಅವು ಬದುಕುವ ಬಗೆಯನ್ನು ಹೇಗೆ ಕಂಡುಕೊಂಡಿವೆ ಎನ್ನುವುದನ್ನು ಈ ಪುಸ್ತಕ ಓದಿ ತಿಳಿದುಕೊಳ್ಳಬಹುದು ಎಂದು ಇನ್ನೊಬ್ಬರು ಹೇಳಿದ್ದಾರೆ.



ನೀವೇನಂತೀರಿ ಈ ವಿಡಿಯೋ ನೋಡಿದ ಮೇಲೆ ??????

👇👇👇👇👇👇👇👇👇👇👇







ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು