ಮೊದಲ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ 5 ಗ್ಯಾರೆಂಟಿಗಳ ಬಗ್ಗೆ ಘೋಷಣೆ ಮಾಡಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ:
- ಗೃಹಜ್ಯೋತಿ: ಎಲ್ಲಾ ಮನೆಗಳಿಗೆ 200 ಯುನಿಟ್ ವಿದ್ಯುತ್ ಫ್ರೀ.
- ಗೃಹ ಲಕ್ಷ್ಮೀ:ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ ಉಚಿತ.
- ಅನ್ನಭಾಗ್ಯ ಯೋಜನೆ: BPL ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು 10 Kg ಉಚಿತ ಅಕ್ಕಿ.
- ಯುವನಿಧಿ ಯೋಜನೆ: ಈ ವರ್ಷ ಪದವಿ ಆದವರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು ಉಚಿತ 3000.
- ಯುವನಿಧಿ ಯೋಜನೆ: ಡಿಪ್ಲೋಮ ಆದವರಿಗೆ 2 ವರ್ಷಗಳ ವರೆಗೆ ಪ್ರತಿ ತಿಂಗಳು ಉಚಿತ 1500.
- ಉಚಿತ ಬಸ್ ಪ್ರಯಾಣ, ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪಾಸ್.
ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರೆ, ನೂತನ ಕರ್ನಾಟಕ ಸರ್ಕಾರವು ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿಯನ್ನು ಜಾರಿಗೆ ತರಲು ಘೋಷಣೆ ಮಾಡಲಿದ್ದಾರೆ.
ರಾಜ್ಯದ ಎಲ್ಲಾ ಮಹಿಳೆಯರಿಗೂ ಇದೊಂದು ಸಂತಸದ ಸುದ್ದಿ ಎಂದು ಹೇಳಬಹುದು. ಕರ್ನಾಟಕ ಸರ್ಕಾರವು ೫ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಕೂಡ ಒಂದಾಗಿದೆ. ಎಲ್ಲಾ ಮಹಿಳೆಯರಿಗೂ ಈ ಅವಕಾಶವನ್ನು ಪಡೆಯಬೇಕಾದರೆ ಅರ್ಹತೆಗಳು ಹಾಗೂ ಆನ್ ಲೈನ್ ಅರ್ಜಿ ಸಲ್ಲಿಸಲು ದಾಖಲಾತಿಗಳು ಈ ಕೆಳಗಿನಂತೆ ಕೊಡಲಾಗಿದೆ.
ಮಹಿಳೆಯರೆಂದರೆ ಯಾರು?
ಸರ್ಕಾರವು ರಾಜ್ಯದ ಎಲ್ಲಾ ಮಹಿಳೆಯರಿಗೆ ಎಂದು ಘೋಷಣೆ ಮಾಡಿದ್ದು, ಇಲ್ಲಿ ಮಹಿಳೆಯರೆಂದರೆ ಯಾರು? ಮೇಲ್ನೋಟಕ್ಕೆ ಯಾವ ಮಹಿಳೆಯಂತ ಸೂಚಿಸಲಾಗಿಲ್ಲ.
ಇಲ್ಲಿ ನಾವು ಹೇಳುವ ಪ್ರಕಾರ ಪ್ರತಿ ಕುಟುಂಬದ ಯಜಮಾನಿಗೆ ಅಂದರೆ, ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥ ( ಯಜಮಾನಿ ) ಗೆ ಪ್ರತಿ ತಿಂಗಳು 2000 ಕೊಡಬಹುದು ಎಂದು ಹೇಳುತ್ತಾ ಇದ್ದೇವೆ. ಇನ್ನೂ ಕೆಲವು ಸೂಚನೆಗಳು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
ಮಹಿಳೆಯರು ಕಡ್ಡಾಯವಾಗಿ ಈ ದಾಖಲೆಗಳನ್ನು ಹೊಂದಿರಬೇಕು.
ಮಹಿಳೆಯರು ಪ್ರಮುಖವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಏಕೆಂದರೆ, ಸರ್ಕಾರವು ನೇರ ಬ್ಯಾಂಕ್ ಖಾತೆಗೆ ಜಮಾ ಮಾಡಲಿದ್ದಾರೆ. ಹಾಗಾಗಿ ನೀವು ಹತ್ತಿರದ ಎಸ್ ಬಿ ಐ ಗ್ರಾಹಕರ ಸೇವಾ ಕೇಂದ್ರದಲ್ಲಿ ಜೀರೋ ಅಕೌಂಟ್ ( ಜನಧನ ) ಅಕೌಂಟ್ ಮಾಡಿಸಲು ಉತ್ತಮ ಅವಕಾಶವಿದೆ. ಹಾಗಾಗಿ ಪ್ರತಿ ತಿಂಗಳು ೨೦೦೦ ರೂಪಾಯಿ ಪಡೆಯಬೇಕಾದರೆ ಬ್ಯಾಂಕ್ ಖಾತೆ ತೆರೆಯುವುದು ಅತಿ ಅವಶ್ಯವಾಗಿದೆ.
ಅರ್ಹತೆಗಳು :
👉 ಆಧಾರ್ ಕಾರ್ಡ್ ಹೊಂದಿರಬೇಕಾಗುತ್ತದೆ.
👉 ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕಾಗುತ್ತದೆ.
👉 ಬಿಪಿಎಲ್ ಕಾರ್ಡ್ ಹೊಂದಿರಬೇಕಾಗುತ್ತದೆ.
👉 ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿರಬೇಕಾಗುತ್ತದೆ.
👉 ಪ್ಯಾನ್ ಕಾರ್ಡ್ ಹೊಂದಿರಬೇಕಾಗುತ್ತದೆ.
ಆನ್ ಲೈನ್ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
👉 ಭಾವಚಿತ್ರ
👉 ಆಧಾರ್ ಕಾರ್ಡ್
👉 ಬ್ಯಾಂಕ್ ಪಾಸ್ ಬುಕ್
👉ಬಿಪಿಎಲ್ ರೇಷನ್ ಕಾರ್ಡ್
👉 ಮೊಬೈಲ್ ನಂಬರ್
👉 ಇ-ಮೇಲ್ ಐಡಿ
ಸೂಚನೆ :
ಗೃಹಲಕ್ಷ್ಮಿ ಯೋಜನೆಗೆ ಆನ್ ಲೈನ್ ಅರ್ಜಿಯು ಇನ್ನು ಆಹ್ವಾನಿಸಿರುವುದಿಲ್ಲ. ಮುಂದಿನ ದಿನಗಳಲ್ಲಿ ಆನ್ ಲೈನ್ ಅರ್ಜಿ ಕರೆದ ಬಳಿಕ ತಿಳಿಸಲಾಗುವುದು. ಇಂದಿನ ಲೇಖನದಲ್ಲಿ ಈ ಮಾಹಿತಿಗೋಸ್ಕರ ತಿಳಿದಿರಲಿ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Govt.scheme