ಒಂಟೆ ಮರಿಯನ್ನು ತಾಯಿಯೊಂದಿಗೆ ಸೇರಿಸಿದ ಹೃದಯವಂತ

 ಒಂಟೆ ಮರಿಯನ್ನು ತಾಯಿಯೊಂದಿಗೆ ಸೇರಿಸಿದ ಹೃದಯವಂತ 


ಒಂಟೆ ಮರಿಯಾ ರಕ್ಷಣೆಯ ವಿಡಿಯೋ ಈಗ ಎಲ್ಲರ ಹೃದಯ ಗೆದ್ದಿದೆ. ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಎಲ್ಲರೂ ಈ ಹೃದಯವಂತನ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.

ಆ ಪುಟಾಣಿ ಅಮ್ಮನಿಂದ ದೂರವಾಗಿ ಚಡಪಡಿಸುತ್ತಿತ್ತು... ಅಮ್ಮನೂ ಕಂದನ ರಕ್ಷಣೆ ಮಾಡಲಾಗದೆ ಆತಂಕದಲ್ಲಿದ್ದಳು...  ಆದರೆ,ಈ ಆತಂಕ ದೂರ ಮಾಡಲು ಅಲ್ಲಿಂದ ಬಂದಿದ್ದರು ಒಬ್ಬರು ಹೃದಯವಂತ. ಮರುಭೂಮಿಯ ಮಧ್ಯ ಸೆರೆಯಾದ ಈ ಹೃದಯಸ್ಪರ್ಶಿ ದೃಶ್ಯ ಈಗ ಎಲ್ಲರ ಗಮನ ಸೆಳೆದಿದೆ. ಈ ಹೃದಯವಂತನ ಕಾರ್ಯಕ್ಕೆ ಎಲ್ಲರೂ ಶಬ್ಬಾಶ್ ಎನ್ನುತ್ತಿದ್ದಾರೆ.





ಕಷ್ಟದಲ್ಲಿರುವ ಜೀವ ಜೀವಿಯ ರಕ್ಷಣೆಯ ದೃಶ್ಯಗಳನ್ನು ನೋಡುವಾಗ ಸಹಜವಾಗಿಯೇ ಹೃದಯ ತುಂಬಿ ಬರುತ್ತದೆ. ಸಕಾಲದಲ್ಲಿ ಸಹಾಯಕ್ಕೆ ಧಾವಿಸಿದವರನ್ನು ಕಂಡಾಗ ಹೆಮ್ಮೆ ಎನಿಸುತ್ತದೆ. ಇಂತಹ ಮಾನವೀಯ ಮೌಲ್ಯದ ದೃಶ್ಯಗಳು ಎಲ್ಲರಿಗೂ ಸ್ಫೂರ್ತಿ, ಮಾದರಿ ಕೂಡ ಹೌದು. ಈ ರೀತಿಯ ಸಾಕಷ್ಟು ಭಾವನಾತ್ಮಕ ದೃಶ್ಯಗಳು ಸದಾ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಅಂತೆಯೇ, ಸದ್ಯ ಇಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ.




ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದು ಒಂಟೆ ಮರಿಯಾ ರಕ್ಷಣೆಯ ದೃಶ್ಯ. ಮರುಭೂಮಿಯ ಕಂದಕಕ್ಕೆ ಒಂಟೆ ಮರಿ ಬಿದ್ದಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ಮರಿಗೆ ಮೇಲೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಕಂಡ ವ್ಯಕ್ತಿಯೊಬ್ಬರು ತಕ್ಷಣ ಆ ಕಂದಕಕ್ಕೆ ಇಳಿದು ಮರಿಯನ್ನು ಎತ್ತಿಕೊಂಡು ಮೇಲೆ ಬಂದಿದ್ದಾರೆ. ಇದು ಅಷ್ಟು ಸುಲಭದ ಪ್ರಯತ್ನವಾಗಿರಲಿಲ್ಲ. ಆದರೂ ಕಷ್ಟಪಟ್ಟು ಈ ವ್ಯಕ್ತಿ ಮರಿಯನ್ನು ಮೇಲೆ ಎತ್ತಿಕೊಂಡು ಬಂದಿದ್ದಾರೆ. ಹೀಗೆ ಕಂದಕದಿಂದ ಮೇಲೆ ಬಂಡ ಪುಟಾಣಿ ತಾಯಿಯ ಬಳಿ ಹೋಗಿ ಹಾಲು ಕುಡಿಯುವ ದೃಶ್ಯವನ್ನು ನೋಡುವಾಗಲೇ ಹೃದಯ ತುಂಬಿ ಬರುತ್ತದೆ. " ನೇಚರ್ ಇಸ್ ಅಮೇಜಿಂಗ್  " ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್  ಮಾಡಲಾಗಿದೆ.ಕಷ್ಟದಲ್ಲಿದ್ದ ಒಂಟೆ ಮರಿಯ ನ್ನು ತನ್ನ ತಾಯಿಯೊಂದಿಗೆ ಸೇರಿಸಲು ಸಹಾಯ ಮಾಡುವ ಪ್ರಯತ್ನ ನಿಜವಾದ ಹೀರೊ. ಈ ಜಗತ್ತಿನಲ್ಲಿ  ಜನರು ನಮಗೆ  ಬೇಕು. ಎಂಬ ಕ್ಯಾಪ್ಷನ್ ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.







ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@




















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು