ಮಾರುಕಟ್ಟೆಗೆ ಬಂದಾಯ್ತು ಹಾರುವ ಕಾರು - ಇದರ ಬೆಲೆ ಎಷ್ಟು? ಬುಕ್ಕಿಂಗ್ ಹೇಗೆ ಮಾಡುವುದು ? ಇದರ ವೈಶಿಷ್ಟ್ಯತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ :

ಮಾರುಕಟ್ಟೆಗೆ ಬಂದಾಯ್ತು ಹಾರುವ ಕಾರು - ಇದರ ಬೆಲೆ ಎಷ್ಟು? ಬುಕ್ಕಿಂಗ್ ಹೇಗೆ ಮಾಡುವುದು ? ಇದರ ವೈಶಿಷ್ಟ್ಯತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ :








ಸಾಕಷ್ಟು ವರ್ಷಗಳಿಂದಲೂ ಹಲವು ದೇಶಗಳು ಹಾರುವ ಕಾರನ್ನು ತಯಾರಿಸಲು ಇನ್ನಿಲ್ಲದಂತೆ ಶ್ರಮವಹಿಸುತ್ತಿತ್ತು. ಈ ಬಗ್ಗೆ ಹಲವು ವರದಿಗಳು,  ಮಾಹಿತಿಗಳನ್ನು ನಾವು-ನೀವು ಕೇಳಿರಬಹುದು. ಈಗ ಹಾರುವ ಕಾರಿನ ಬಗ್ಗೆ ಕೌತುಕಕ್ಕೆ ತೆರೆ ಎಳೆಯುವ ಸಮಯ ಬಂದಾಗಿದೆ. ಯಾಕೆಂದರೆ ಮಾರುಕಟ್ಟೆಗೆ ಅತ್ಯಾಧುನಿಕ ತಂತ್ರಜ್ಞಾನದ ಹಾರುವ ಕಾರಿನ ಆಗಮನವಾಗಿದೆ.




ಸದ್ಯ ತಯಾರಾಗಿರುವ ಹಾರುವ ಕಾರುಗಳು ಕಾರಿನಂತೆ ಕಾಣದಿದ್ದರೂ, ಅದರ ರಚನೆಯು ಹೆಲಿಕಾಪ್ಟರ್ ಗಳಿಂದ ಪ್ರೇರಿತವಾಗಿ ಕಾಣುವ ಡ್ರೋನ್ ಮಾದರಿಯನ್ನು ಹೋಲುತ್ತದೆ. ವಾಸ್ತವವಾಗಿ ಇದು ಎಲೆಕ್ರ್ಟಿಕ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವಾಹನವಾಗಿದೆ. ಕೆಲವು ನಿಮಿಷಗಳ ತರಬೇತಿ ಮತ್ತು ಕಂಪ್ಯೂಟರ್ ಸಹಾಯದಿಂದ ಯಾರಾದರೂ ಸುಲಭವಾಗಿ ಕಲಿತು, ಲೀಲಾಜಾಲವಾಗಿ ಹಾರಿಸಬಹುದು  ಎಂದು ಕಂಪನಿ ಹೇಳಿಕೆ ನೀಡಿದೆ.

           ಹಾರುವ ಕಾರು  ತಯಾರಿಕಾ ಕಂಪನಿಯು ಹೊಸ ಜೇಟ್ಸನ್ ಒನ್ ಎಲೆಕ್ಸ್ಟ್ರಿಕ್ ಫ್ಲೈಯಿಂಗ್ ಕಾರಿನ ಬೆಳೆಗಳನ್ನು ಇತ್ತೀಚಿಗೆ ಪ್ರಕಟಿಸಿದೆ.  ಗ್ರಾಹಕರು ಸುಮಾರು 6.5 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ಮನೆಗೆ ಕೊಂಡೊಯ್ಯಬಹುದು. ಈ ಎಲೆಕ್ಟ್ರಿಕ್ ಕಾರಿನ ಬೆಲೆ ಅಂದಾಜು 80.19 ಲಕ್ಷ ರೂಪಾಯಿ  ಎನ್ನಲಾಗಿದೆ.

ಕಂಪನಿಯ ಪ್ರಕಾರ, ಈ ಹಾರುವ ಕಾರನ್ನು ಹಾರಿಸುವುದು ತುಂಬಾ ಸುಲಭ. ಇದರಲ್ಲಿ ವಾಹನದ ಎತ್ತರವನ್ನು ನಿಯಂತ್ರಿಸಲು ಮತ್ತು  ಅದರ ದಿಕ್ಕನ್ನು ನಿಯಂತ್ರಿಸಲು ಜಾಯೀಟ್ಸ್ ಲಭ್ಯವಿದೆ. ಇದಕ್ಕಾಗಿ ಅದರ ಕಾಕ್ ಪಿಟ್ ನಲ್ಲಿ ಎರಡು ಜಾಯ್ ಸ್ಟಿಕ್ ಗಳನ್ನು ಅಳವಡಿಸಲಾಗಿದೆ. ಇವು ಅದರ ಹಿಡಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಮೊದಲ ಬಾರಿಗೆ ಹಾರಿಸುವವರು ಕೂಡ ಯಾವುದೇ ಭಯವಿಲ್ಲದೆ ಪ್ರಯತ್ನಿಸಬಹುದು.


ಬುಕ್ಕಿಂಗ್ ಮಾಹಿತಿ :

ಈ ಹಾರುವ ಕಾರಿನ ಬುಕ್ಕಿಂಗ್ ಬಗ್ಗೆ ನೋಡುವುದಾದರೆ, ಕಂಪನಿಯು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ. ಪ್ರಸ್ತುತ ಇದು ಪರೀಕ್ಷಾ ಹಂತದಲ್ಲಿದ್ದು, ಕಂಪನಿಯ ಯೋಜನೆಯ ಪ್ರಕಾರ ಅದರ ವಿತರಣೆಯನ್ನು ವರ್ಷದೊಳಗೆ ಪ್ರಾರಂಭಿಸಲಾಗುವುದು. ಇದುವರೆಗೆ ಗ್ರಾಹಕರಿಂದ ನೂರಾರು ಘಟಕಗಳಿಗೆ ಬುಕಿಂಗ್ ಸ್ವೀಕರಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಸದ್ಯಕ್ಕೆ ಈ ಹಾರುವ ಕಾರು USA ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವಾಗಲಿದ್ದು, ಕೆಲ ಸಮಯದ ನಂತರ ಭಾರತಕ್ಕೂ ಕಾಲಿಡಬಹುದು.


ಹಾರುವ ಕಾರಿನ ಸಾಮರ್ಥ್ಯ ?

ಇನ್ನು, ಜೇಟ್ಸನ್ ಒನ್ ನಲ್ಲಿ ಪ್ರೊಪೆಲ್ಲರ್ ಗಳು ಲಭ್ಯವಿದ್ದು, ಗಂಟೆಗೆ ಗರಿಷ್ಟ 101 ಕಿಲೋಮೀಟರ್ ವೇಗವನ್ನು ತಲುಪಬಲ್ಲದು. ಈ ಮಟ್ಟದ ಪವರ್ ಗಾಗಿ 88 ಕಿಲೋ ವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಸುಮಾರು 1,500 ಅಡಿ ಎತ್ತರಕ್ಕೆ ಹಾರುವ ಸಾಮರ್ಥ್ಯ ಇದರಲ್ಲಿದೆ. ಚಾರ್ಜ್ ಮುಗಿದಾಗ, LIDAR ಸೆನ್ಸರ್ ಗಳನ್ನು ಬಳಸಿಕೊಂಡು eVTOL ಸ್ವಯಂಚಾಲಿತವಾಗಿ ಲ್ಯಾಂಡ್ ಆಗುವುದು ಇದರ ಮತ್ತೊಂದು ವೈಶಿಷ್ಟ್ಯತೆ.

ಇನ್ನು ಈ ಹಾರುವ ಕಾರಾದ ಜೇಟ್ಸನ್ ಒನ್ ಗಾತ್ರದ ಬಗ್ಗೆ ತಿಳಿಯುವುದಾದರೆ, 2480 ಮೀ.ಮೀ ಉದ್ದ, 1,500 ಮೀ.ಮೀ ಅಗಲ, 1030 ಮೀ.ಮೀ ಎತ್ತರವಿದೆ. ಕಂಪನಿಯ ತಾನಂ ಅಧಿಕೃತ ವೆಬ್ ಸೈಟ್ ನಲ್ಲಿ ಇದರ ಹಾರುವ ಸಮಯ ಸುಮಾರು 20 ನಿಮಿಷಗಳು ಎಂದು  ಹೇಳಿದೆ. ಇದನ್ನು ಹರಿಸಲು ಪೈಲಟ್ ಲೈಸೆನ್ಸ್ ಬೇಕೇ ?
ಈ ಕಾರು ಹಾರಿಸಲು ಯಾವುದೇ ಪೈಲಟ್ ಲೈಸೆನ್ಸ್ ಅಗತ್ಯವಿರುವುದಿಲ್ಲ.

ಜೊತೆಗೆ ಜೇಟ್ಸನ್  ಒನ್ ನಲ್ಲಿ ಕೆಲವು ವಿಶೇಷ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಸಹ ಅಳವಡಿಸಲಾಗಿದೆ. ಹಾರಾಟದ ಸಮಯದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ನಮಗೆ ಸಂಭವನೀಯ ಅಪಾಯ ಎದುರಾದರೆ ತಕ್ಷಣವೇ ಪಾರಾಗಲು ಇದರಲ್ಲಿ ಬ್ಯಾಲಿಸ್ಟಿಕ್ ಪ್ಯಾರಾಚೂಟ್ ಗಳನ್ನೂ ಸಹ ನೀಡಲಾಗಿದೆ. ಆದರೆ ಕಂಪನಿಯು ಅದರ ಶ್ರೇಣಿ, ಚರ್ಗಿನ್ಗ್ ಸಮಯ ಇತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.








ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು