ಗೂಗಲ್ ಸ್ಟ್ರೀಟ್ ವ್ಯೂ ಇದೀಗ ಭಾರತದಲ್ಲಿ ಲಭ್ಯ : ಏನಿದರ ಪ್ರಯೋಜನ ???

ಗೂಗಲ್ ಸ್ಟ್ರೀಟ್ ವ್ಯೂ ಇದೀಗ ಭಾರತದಲ್ಲಿ ಲಭ್ಯ : ಏನಿದರ ಪ್ರಯೋಜನ ???




           ಕಳೆದ ವರ್ಷ ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ನಗರಗಳಲ್ಲಿ ಸಿಗುತ್ತಿತ್ತು. ಇದೀಗ ದೇಶದ ಸಣ್ಣ ಹಳ್ಳಿ, ಪಟ್ಟಣ ಸೇರಿದಂತೆ ಬಹುತೇಕ ಎಲ್ಲ ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದೆ. 

ಗೂಗಲ್ ಸ್ಟ್ರೀಟ್ ವ್ಯೂ ಫೀಚರ್ ನಾವು ನೋಡಲು ಬಯಸುವ ಸ್ಥಳದ ರಸ್ತೆಯ ಮಟ್ಟದಿಂದ ಫೋಟೋಗಳನ್ನು ಒದಗಿಸುತ್ತದೆ. ಪ್ರವಾಸಿಗರು ಮುಖ್ಯವಾಗಿ ಮೊದಲ ಬಾರಿ ಯಾವುದಾದರು ಒಂದು ಸ್ಥಳಕ್ಕೆ ಭೇಟಿ ನೀಡುವ ಸಂದರ್ಭ ಈ ಫೀಚರ್ ಉಪಯುಕ್ತವಾಗಲಿದೆ. ನಾವು ನೋಡಬಯಸುವ ಸ್ಥಳ ಮುಂಚಿತವಾಗಿಯೇ ಹೇಗೆ ಕಾಣಿಸುತ್ತದೆ ಎಂಬುದನ್ನು ನಾವು ರಸ್ತೆಯ ಮಟ್ಟದಿಂದಲೇ ನೋಡಬಹುದು. ಮಾತ್ರವಲ್ಲದೆ ಅದು ತೋರಿಸುವ ಒಂದೇ ಫೋಟೋ 360 ಡಿಗ್ರಿ ಆಂಗಲ್ ನಿಂದಲೂ ವೀಕ್ಷಿಸಬಹುದು.




ಗೂಗಲ್ ಮ್ಯಾಪ್ಸ್ ನಲ್ಲಿ ಬಹಳ ಸಮಯದಿಂದ ಕಾಯುತ್ತಿದ್ದ ಸ್ಟ್ರೀಟ್ ವ್ಯೂ ಆಯ್ಕೆ ಇದೀಗ ಭಾರತದ ಅನೇಕ ಕಡೆಗಳಲ್ಲಿ ಬಳಕೆಗೆ ಲಭ್ಯವಾಗಿದೆ. ಆರಂಭಿಕ ಹಣತದಲ್ಲಿ ಭಾರತದ 10  ಪ್ರಮುಖ ನಗರಗಳ ಬಳಕೆದಾರರು ಇದನ್ನು ಉಪಯೋಗಿಸಬಹುದಾಗಿತ್ತು. ಈ ಫೀಚರ್ 2016 ರಲ್ಲೇ ಭಾರತದಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಭಾರತ ಸರ್ಕಾರ ಈ ಫೀಚರ್ ಭದ್ರತಾ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಅದನ್ನು ಪ್ರಾರಂಭಿಸಲು ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಕಳೆದ ವರ್ಷ ಈ ಫೀಚರ್ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಹೈದರಾಬಾದ್,  ಪುಣೆ,ನಾಸಿಕ್, ವಡೋದರಾ, ಅಹಮದ್ ನಗರ ಮತ್ತು ಅಮೃತಸರ ನಗರಗಳಲ್ಲಿ ಸಿಗುತ್ತಿತ್ತು.
ಸ್ಟ್ರೀಟ್ ವ್ಯೂ ವೈಶಿಷ್ಟ್ಯದೊಂದಿಗೆ ರಸ್ತೆ ಹೇಗಿರುತ್ತದೆ? ಆ ಬೀದಿಯಲ್ಲಿ ಯಾವ ಅಂಗಡಿಗಳಿವೆ? ಎಂಬುದನ್ನು ತೋರಿಸುತ್ತದೆ.

ಇದೀಗ ದೇಶದ ಸಣ್ಣ ಹಳ್ಳಿ ಪಟ್ಟಣ ಸೇರಿದಂತೆ ಬಹುತೇಕ ಎಲ್ಲ ನಗರಗಳಲ್ಲಿ ಈ ಸೇವೆ ಲಭ್ಯವಾಗುತ್ತಿದೆ. ಗೂಗಲ್ ಈ ಸ್ಟ್ರೀಟ್ ವ್ಯೂ ಫೀಚರ್ ಮೂಲಕ ಬಳಕೆದಾರರು ಮನೆಯಲ್ಲಿ ಕುಳಿತುಕೊಂಡು ಲ್ಯಾಂಡ್ ಮಾರ್ಕ್ ಗಳನ್ನೂ ಎಕ್ಸ್ ಫ್ಲೋರ್ ಮಾಡಬಹುದು. ಅದೇ ರೀತಿ, ವರ್ಚುವಲ್ ಆಗಿ ಯಾವುದೇ ರೆಸ್ಟೋರೆಂಟ್ ಅಥವಾ ಪ್ರದೇಶಗಳನ್ನು ಸುತ್ತಾಡಬಹುದು. ಇದರ ಮೂಲಕ ಅಲ್ಲೆಲ್ಲ ಸುತ್ತಾಡಿದ ಅನುಭವವನ್ನು ಪಡೆಯಬಹುದಾಗಿದೆ. ಸ್ಥಳೀಯ ಟ್ರಾಫಿಕ್ ಅಧಿಕಾರಿಗಳ ಸಹಭಾಗಿತ್ವದಲ್ಲಿ ಆಯಾ ರಸ್ತೆಯಲ್ಲಿನ ವೇಗದ ಮಿತಿ, ರಸ್ತೆ ತಡೆ, ಮತ್ತು ಅಡ್ಡಿಗಳ ಮಾಹಿತಿ ಮತ್ತು ಉತ್ತಮ ಆಪ್ಟಿಮೈಸ್ಡ್ ಲೈಟ್ ಗಳನ್ನೂ ತೋರಿಸಲು ಗೂಗಲ್ ಮ್ಯಾಪ್ಸ್ ಈಗ ಸಹಾಯ ಮಾಡುತ್ತದೆ.




ಭಾರತದಲ್ಲಿ ಗೂಗಲ್ ಸ್ಟ್ರೀಟ್ ವ್ಯೂ ಅನುಷ್ಠಾನಗೊಳಿಸುವುದಕ್ಕಾಗಿ ಜಿನೆಸಿಸ್ ಇಂಟರ್ನ್ಯಾಷನಲ್ ಜತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.  ಪರಿಹಾರಗಳ ಕಂಪನಿ 




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು