ನಮಸ್ಕಾರ ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ 2022ರ ಡಿಸೆಂಬರ್ 11 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ನೆರೆವೇರಿತ್ತು. ಕುಟುಂಬದವರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿಯೇ ಶುಭ ಕಾರ್ಯ ನಡೆಯಿತು. ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ಜೂನ್ ೪ ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5 ರಂದು ಮಾಣಿಕ್ಯ ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ ಮದುವೆ ಸಮಾರಂಭ ನಡೆಯಲಿದೆ.
ತಂದೆಯ ಹುಟ್ಟುಹಬ್ಬದ ಏಳು ದಿನಗಳಲ್ಲೇ ಅಭಿಷೇಕ್ ಅಂಬರೀಷ್ ಹಸೆಮಣೆ ಏರಲಿದ್ದಾರೆ. ಮೇ 29 ಅಂಬರೀಶ್ ಅವರ ಹುಟ್ಟುಹಬ್ಬ. ಮಗನ ಮದುವೆ ಮತ್ತು ಸಿನಿಮಾಗಳ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಅಂಬಿ, ಮಗ ಅಂದರೆ ಅಂಬಿಗೆ ತುಂಬಾ ಇಷ್ಟ. ಅಭಿಗೂ ಕೂಡ ತಂದೆ ಅಂದ್ರೆ ಪಂಚಪ್ರಾಣ. ಅಪ್ಪನಿಲ್ಲದೆ ಮದುವೆಯಾಗುತ್ತಿರುವ ನೋವು ಅಭಿಗೆ ಕಾಡುತ್ತಿದೆ. ಅಂತ ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ.
ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನ ತ್ರಿಪುರ ವಾಸಿನಿಯಲ್ಲಿ ಅದ್ಧುರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇನ್ನು ಜೂನ್ 16 ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿಯಾಗಿರುವ ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ನಡುವೆ ಇತ್ತೀಚಿಗೆ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡರು. ಇವಾಗ ಇಬ್ಬರೂ ಮದುವೆಯಾಗುತ್ತಿದ್ದಾರೆ.
ಆದರೆ ತಂದೆ ಇಲ್ಲವೆನ್ನುವ ನೋವು ಅಭಿಷೇಕ್ ಅಂಬರೀಶ್ ಅವರಿಗೆ ಕಾಡುತ್ತಿದೆ. ಆದ್ದರಿಂದಲೇ ಅಭಿಷೇಕ್ ಮದುವೆ ದಿನ ಅಂಬರೀಶ್ ಅವರ ದೊಡ್ಡ ಪ್ರತಿಮೆ ಮಾಡಿ ಮದುವೆ ಮಂಟಪದಲ್ಲಿ ಇರಿಸಲಿದ್ದಾರಂತೆ. ಅಂಬರೀಶ್ ಅವರು ಮಗನ ಮದುವೆಯಲ್ಲಿ ಇದ್ದರು ಎನ್ನುವ ಭಾವನೆ ಮೂಡಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
News