ಕರ್ನಾಟಕಕ್ಕೆ ಮೋದಿ ಗಿಫ್ಟ್

ಕರ್ನಾಟಕಕ್ಕೆ ಮೋದಿ ಗಿಫ್ಟ್ 




ಧಾರವಾಡ - ಬೆಂಗಳೂರಿಗೆ ವಂದೇ ಭಾರತ್ 

ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ಹಳಿ ಪರಿಶೀಲನೆ ಕೆಲಸ ನಡೆಯುತ್ತಿದ್ದು, ಜೂನ್. 18 ರಂದು ಪ್ರಾಯೋಗಿಕ ಸಂಚಾರ ಆರಂಭಿಸುವ ನಿರೀಕ್ಷೆ ಇದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ನ ಪ್ರಾಯೋಗಿಕ ಸಂಚಾರ ಸಂಬಂಧ ಸೆಮಿ ಹೈಸ್ಪೀಡ್ ರೈಲು ಗುರುವಾರ ಸಂಜೆ ಚೆನ್ನೈನ ಇಂಟಿಗ್ರಿಲ್ ಕೋಚ್ ಫಾಕ್ಟರಿಯಿಂದ ಬೆಂಗಳೂರಿಗೆ ಆಗಮಿಸಿದೆ.

ಈ ಕುರಿತು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಟ್ವೀಟ್ ಮಾಡಿ " ಕೆಎಸ್ಆರ್ ಬೆಂಗಳೂರಿನಲ್ಲಿ ಹೊಚ್ಚ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಆಗಮನವು ಬೆಂಗಳೂರು ಮತ್ತು ಹುಬ್ಬಳ್ಳಿ- ಧಾರವಾಡವನ್ನು ಸಂಪರ್ಕಿಸುವ ಕರ್ನಾಟಕದ ಎರಡನೇ ಹೈಸ್ಪೀಡ್ ರೈಲಿನ ಪ್ರಾರಂಭಕ್ಕೆ ವೇದಿಕೆಯಾಗಿದೆ" ಎಂದು ತಿಳಿಸಿದ್ದಾರೆ.




ಸಂಚಾರ ಸಮಯ 

5.45 ಬೆಳಗ್ಗೆ - ಬೆಂಗಳೂರು ನಗರದಿಂದ ಹೊರಡುವುದು 

ಮಧ್ಯಾಹ್ನ 12.40 ಕ್ಕೆ ಧಾರವಾಡ ತಲುಪುವುದು.

1.15 ಮಧ್ಯಾಹ್ನ ಧಾರವಾಡದಿಂದ ಹೊರಡುವುದು 

8.10 ರಾತ್ರಿ ಬೆಂಗಳೂರು ತಲುಪುವುದು 




ಗರಿಷ್ಠ ವೇಗ 

ವಂದೇ ಭಾರತ್ ರೈಲುಗಳ ವೇಗವನ್ನು1.30 ಕಿ.ಮೀ ಗೆ ಸೀಮಿತಗೊಳಿಸಲಾಗಿದೆ.




ಮೊದಲ ರೈಲು 

2022 ರ ನವೆಂಬರ್ ನಲ್ಲಿ ಮೈಸೂರು - ಬೆಂಗಳೂರು - ಚೆನ್ನೈ ಮಾರ್ಗದಲ್ಲಿ ಕರ್ನಾಟಕದ ಮೊದಲನೇ ವಂದೇ ಭಾರತ್ ರೈಲನ್ನು ಪರಿಚಯಿಸಲಾಯಿತು.








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು