ಇನ್ಮುಂದೆ ಈ ಹಣ್ಣನ್ನು ರಸ್ತೆಯಲ್ಲಿ ಕಂಡರೆ ಕೊಂಡು ತಿನ್ನಿ... ಇಲ್ಲದಿದ್ದರೆ ಕಳೆದುಕೊಳ್ಳುತ್ತೀರಿ....!
ನೇರಳೆ ಅಥವಾ ಕಾದಂಬರಿ ಹಣ್ಣು ಭಾರತದ ಸಾಂಪ್ರದಾಯಿಕ ಹಣ್ಣುಗಳಲ್ಲಿ ಒಂದಾಗಿದೆ. ಇದು ಅತ್ಯಂತ ನೆಚ್ಚಿನ ಹಣ್ಣುಗಳಲ್ಲಿ ಒಂದಾಗಿದೆ. ಕಾದಂಬರಿ ಹಣ್ಣು ತನ್ನ ನೀಲಿ ಅಥವಾ ನೇರಳೆ ಬಣ್ಣದಿಂದ ಸುಂದರವಾಗಿ ಕಾಣುತ್ತದೆ. ಹೀಗಾಗಿ ಇದನ್ನು ನೇರಳೆ ಹಣ್ಣೇ ಎಂತಲೂ ಕರೆಯುತ್ತಾರೆ.
ಇದು ಮೇ ಮತ್ತು ಜೂನ್ ನಲ್ಲಿ ವ್ಯಾಪಕವಾಗಿ ಲಭ್ಯವಿರುವ ಹಣ್ಣಾಗಿದೆ. ಅದರ ರುಚಿಯ ಹೊರತಾಗಿ, ಕಾದಂಬರಿ ಹಣ್ಣು ಅನೇಕ ಚಿಕಿತ್ಸಕ ಮತ್ತು ಶಾರೀರಿಕ ಪ್ರಯೋಜನಗಳನ್ನು ನೀಡುತ್ತದೆ. ಮಧುಮೇಹ ಮತ್ತು ಹೊಟ್ಟೆಯ ಅಸ್ವಸ್ಥೆಗೆ ಇದು ಅತ್ಯುತ್ತಮ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ.
ಈ ಹಣ್ಣು ವಾಯು ಮತ್ತು ಅತಿಸಾರ ಸೇರಿದಂತೆ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಹೀಗೆ ನಿಮಗೆ ತಿಳಿದಿಲ್ಲದ ಕಾದಂಬರಿ ಹಣ್ಣಿನ ಅದ್ಭುತ ಪ್ರಯೋಜನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಬಹುದು.
ಹಿಮೋಗ್ಲೋಬಿನ್ ಸುಧಾರಣೆ :
ವಿಟಮಿನ್ ಸಿ ಮತ್ತು ಕಬ್ಬಿಣದ ಸಮೃದ್ಧವಾಗಿರುವ ಕಾದಂಬರಿ ಹಣ್ಣು ಅಥವಾ ನೇರಳೆ ಹಣ್ಣು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಹಿಮೋಗ್ಲೋಬಿನ್ ಅಧಿಕವಾಗಿದ್ದಾಗ, ನಿಮ್ಮ ರಕ್ತವು ಹೆಚ್ಚಿನ ಆಮ್ಲಜನಕವನ್ನು ಅಂಗಗಳಿಗೆ ಒಯ್ಯುತ್ತದೆ. ಮತ್ತು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಈ ಹಣ್ಣಿನಲ್ಲಿರುವ ಕಬ್ಬಿಣದ ಅಂಶವು ನಿಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ.
ಚರ್ಮದ ಅರೋಗ್ಯ :
ನೇರಳೆ ಹಣ್ಣು ಸಂಕೋಚಕ ರುಚಿಯನ್ನು ಹೊಂದಿದ್ದು ಅದು ಚರ್ಮವನ್ನು ಮೊಡವೆ ಮುಕ್ತವಾಗಿಡುತ್ತದೆ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದಾರೆ ಕಾದಂಬರಿ ಹಣ್ಣನ್ನು ತಿನ್ನುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಏಕೆಂದರೆ ನೇರಳೆ ನಿಮ್ಮ ಚರ್ಮವನ್ನು ತಾಜಾ ಮತ್ತು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.
ಕಣ್ಣಿನ ಅರೋಗ್ಯ ಸುಧಾರಣೆ :
ಕಾದಂಬರಿ ಹಣ್ಣು ಹಿಮೋಗ್ಲೋಬಿನ್ ಸಂಖ್ಯೆಯನ್ನು ಸುಧಾರಿಸುತ್ತದೆ ಮತ್ತು ಹಣ್ಣಿನಲ್ಲಿರುವ ಕಬ್ಬಿಣ ರಕ್ತ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮ ಮತ್ತು ಕಣ್ಣುಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಅನೇಕ ಖನಿಜಗಳು ಮತ್ತು ವಿಟಮಿನ್ ಸಿ ಮತ್ತು ಎ ನಲ್ಲಿ ಸಮೃದ್ಧವಾಗಿದೆ.
ಹೃದಯದ ರಕ್ಷಣೆ :
ಪೊಟ್ಯಾಶಿಯಂ ನಲ್ಲಿ ಸಮೃದ್ಧವಾಗಿರುವ ನೇರಳೆ ಹಣ್ಣು ನಿಮ್ಮ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. 100 ಗ್ರಾಂ ನೇರಳೆ ಹಣ್ಣು ಸುಮಾರು 55 ಮಿಲಿಗ್ರಾಮ್ ಪೊಟ್ಯಾಶಿಯಂ ಅನ್ನು ಹೊಂದಿರುತ್ತದೆ. ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಹಣ್ಣು ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ಅಪಧಮನಿಗಳನ್ನು ಆರೋಗ್ಯಕರವಾಗಿರಿಸುತ್ತದೆ.
ಹಲ್ಲು ಮತ್ತು ಒಸಡುಗಳನ್ನು ಬಲಪಡಿಸುವುದು:
ನೇರಳೆ ಹಣ್ಣು ಹಣ್ಣು ಒಸಡು ಮತ್ತು ಹಲ್ಲುಗಳಿಗೆ ಪ್ರಯೋಜನಕಾರಿಯಾಗಿದೆ. ಇನ್ನು ನೇರಳೆ ಹಣ್ಣಿನ ಮರದ ಎಳೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಹೀಗಾಗಿ ಇದನ್ನು ಒಸಡುಗಳಲ್ಲಿ ರಕ್ತಸ್ರಾವವನ್ನು ತಡೆಯಲು ಬಳಸಬಹುದು. ಈ ಎಲೆಯನ್ನು ಒಣಗಿಸಿ ನಂತರ ಪುಡಿ ಮಾಡಿ ಹಲ್ಲು ಉಜ್ಜುವ ಪುಡಿಯಾಗಿದೆ ಬಳಸಲಾಗುತ್ತದೆ. ಇದು ವಸಡು ರಕ್ತಸ್ರಾವ ಮತ್ತು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಮರದ ತೊಗಟೆಯಲ್ಲಿ ಸ್ನಾಕೋಚಕ ಗುಣವಿದ್ದು ಇದನ್ನು ಬಳಸಿ ಮಾಡಿದ ಕಷಾಯ ಬಾಯಿ ಹಣ್ಣುಗಳನ್ನು ನಿವಾರಿಸುತ್ತದೆ,.
ಸೋಂಕು ನಿವಾರಣೆ:
ನೇರಳೆ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಸೋಂಕು ನಿವಾರಕ ಮತ್ತು ಮಲೇರಿಯಾ ವಿರೋಧಿ ಗುಣಗಳಿವೆ. ಇದು ಮ್ಯಾಲಿಕ್ ಆಸಿಡ್, ಟ್ಯಾನಿನ್, ಗ್ಯಾಲಿಕ್ ಆಸಿಡ್, ಆಕ್ಸಲಿಕ್ ಆಸಿಡ್ ಮತ್ತು ಬೇಟುಲಿಕ್ ಆಸಿಡ್ ಅನ್ನು ಸಹ ಒಳಗೊಂಡಿದೆ. ಅನೇಕ ಸಾಮಾನ್ಯ ಸೋಂಕುಗಳನ್ನು ತಡೆಗಟ್ಟುವಲ್ಲಿ ಈ ಹಣ್ಣು ಉಪಯುಕ್ತವಾಗಿದೆ.
ಅತಿಯಾದ ಮೂತ್ರ ವಿಸರ್ಜನೆ ಮತ್ತು ತೀವ್ರವಾದ ಬಾಯಾರಿಕೆ ಸೇರಿದಂತೆ ಮಧುಮೇಹದ ಲಕ್ಷಣಗಳನ್ನು ನೇರಳೆ ಹಣ್ಣು ಗುಣಪಡಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನ ಬೀಜಗಳು, ತೊಗಟೆ ಮತ್ತು ಎಲೆಗಳನ್ನು ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸಬಹುದು.
Tags
Social