ರೀಲ್ಸ್ ಚಟಕ್ಕೆ ಎಂಟು ತಿಂಗಳ ಕಂದ ಮಾರಾಟ !! ಐಫೋನ್ - 14 ಖರೀದಿ ಮಾಡಲು ಬಂಗಾಳದ ದಂಪತಿಯ ಅಮಾನವೀಯ ಕೃತ್ಯ :

ರೀಲ್ಸ್  ಚಟಕ್ಕೆ ಎಂಟು ತಿಂಗಳ ಕಂದ ಮಾರಾಟ !!

ಐಫೋನ್ - 14 ಖರೀದಿ ಮಾಡಲು ಬಂಗಾಳದ ದಂಪತಿಯ ಅಮಾನವೀಯ ಕೃತ್ಯ :




                ಯಾವುದೇ ವಯೋಮಾನದವರು ಇರಲಿ, ಮೊಬೈಲ್ ಒಂದಿದ್ದರೆ ಏನೂ ಬೇಡ ಎನ್ನುವ ಪರಿಸ್ಥಿತಿ ಬಂದಿದೆ. ಮಕ್ಕಳೂ ಕೂಡ ಮೊಬೈಲ್ ಗೇಮ್ಸ್ ಗಳಿಗೆ ಬಿದ್ದಿದ್ದಾರೆ. ಕರೋನಾ ಲಾಕ್ ಡೌನ್ ಕಾಲದಲ್ಲಿ ಆರಂಭವಾದ ಆನ್ಲೈನ್ ತರಗತಿ ಪರಿಣಾಮ ಮಕ್ಕಳಲ್ಲೂ ಮೊಬೈಲ್ ಬಳಕೆ ಇತಿಮಿತಿ ದಾಟಿದೆ. ಗೃಹಿಣಿಯರು ರೀಲ್ಸ್  ಚಟಕ್ಕೆ ಬಿದ್ದಿದ್ದಾರೆ. ಇದೆಲ್ಲಾ ಪೀಠಿಕೆ ಏಕೆ ಎಂಬ ಪ್ರಶ್ನೆಯಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ...............

ಈ ದಂಪತಿಗೆ ಮೊಬೈಲ್ ರೀಲ್ಸ್  ನ ಹುಚ್ಚಾಟ. ಹೇಗಾದರೂ ಸರಿ ಐಫೋನ್-14 ಖರೀದಿಸಬೇಕು ಎಂಬ ಆಸೆ ಚಿಗುರಿತು. ಆದರೆ ಐಫೋನ್ ಖರೀದಿಗೆ ಬೇಕಾಗಿದ್ದ ದುಡ್ಡು ಅವರ ಬಳಿ ಇರಲಿಲ್ಲ. ಹೀಗಿಯೇ ಯೋಚನೆ ಮಾಡುತ್ತ ಕುಳಿತಿದ್ದಾಗ ತಮ್ಮ ಎಂಟು ತಿಂಗಳ ಕಂದಮ್ಮ ಕಣ್ಣೆದುರು ಬಂತು. ಆಗಲೇ ಅವರಿಗೆ ಐಫೋನ್ ಖರೀದಿಗೆ ಬೇಕಾದ ಹಣ ಹೊಂದಿಸುವ ಕೆಟ್ಟ ಐಡಿಯಾ ಕೂಡ ಹೊಳೆಯಿತು. ಐಫೋನ್ ಮುಂದೆ ಕಂದಮ್ಮ ನಗಣ್ಯವಾಯಿತು. 8 ತಿಂಗಳ ಕಂದನನ್ನೇ ಮಾರಾಟ ಮಾಡಿ ಮೊಬೈಲ್ ಖರೀದಿಸಿದರು. ಮುಂದೇನಾಯ್ತು ಎಂದರೆ ಪ್ರವಾಸ ತೆರಳಿ ರೀಲ್ಸ್  ಮಾಡುವ ಮುನ್ನವೇ ಪೊಲೀಸರು ಮನೆಗೆ ಬಂದರು. ಈ ಸುಳಿವು ಅರಿತ ಅಪ್ಪ ಪರಾರಿಯಾಗಿದ್ದಾನೆ. ಹೆತ್ತಮ್ಮನ್ನನ್ನು ಕೃಷ್ಣನ ಜನ್ಮಸ್ಥಾನಕ್ಕೆ ಕರೆದೊಯ್ದರು. ಮಗುವನ್ನು ಖರೀದಿಸಿದವರೂ ಕೂಡ ಕೃಷ್ಣನ ಜನ್ಮಸ್ಥಾನಕ್ಕೆ ಹೋಗಿದ್ದಾರೆ. 

ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ!!!

           ಎಂಟು ತಿಂಗಳ ಮಗು ವಾರಗಟ್ಟಲೆ ಮನೆಯಲ್ಲಿ ಕಾಣಿಸದ ಹಿನ್ನಲೆಯಲ್ಲಿ ದಂಪತಿ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದರು. ವಿಚಾರಣೆ ವೇಳೆ ಪೊಲೀಸರನ್ನೇ ದಾರಿತಪ್ಪಿಸಲು ಈ ದಂಪತಿ ಹರಸಾಹಸ ಮಾಡಿದ್ದರು. ಆದರೆ ಪೊಲೀಸರು ಇಂಥವರನ್ನು ಎಷ್ಟು ಜನ ನೋಡಿಲ್ಲ. ಪೋಲೀಸರ ಟ್ರೀಟ್ ಮೆಂಟ್ ಗೆ ಬಾಯಿಬಿಟ್ಟ ದಂಪತಿ, ರೀಲ್ಸ್ ಚಿತ್ರೀಕರಿಸಲು ಐಫೋನ್-14 ಖರೀದಿಗಾಗಿ ಮಗುವನ್ನು ಮಾರಾಟ ಮಾಡಿದ್ದೇವೆ ಎಂದು ಒಪ್ಪಿಕೊಂಡರು. ಈ ಮೊದಲು ಏಳು ವರ್ಷದ ಮಗಳನ್ನು ಮಾರಾಟ ಮಾಡಲು ತಂದೆ ಯತ್ನಿಸಿದ್ದ ಎಂಬ ಅಂಶ ಕೂಡ ಇದೇ ಸಂದರ್ಭದಲ್ಲಿ ಬಹಿರಂಗವಾಗಿದೆ. ಮಾನವ ಖರೀದಿಸಿದವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು