ಗೃಹಜ್ಯೋತಿ ಅರ್ಜಿ ಸಲ್ಲಿಸದವರಿಗೆಲ್ಲಾ ಉಚಿತ ವಿದ್ಯುತ್ ಬರುತ್ತಾ? ಬರಲ್ವಾ? ಹೇಗೆ ತಿಳಿಯಬೇಕು ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ :
ಗೃಹಜ್ಯೋತಿಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡು 24 ದಿನ ಕಳೆದಿದೆ. ಆರಂಭದಲ್ಲಿ ನಿತ್ಯ 6 ರಿಂದ 8 ಲಕ್ಷ ಜನ ಅರ್ಜಿ ಸಲ್ಲಿಸುತ್ತಿದ್ದರು. ಆದರೆ ಕಳೆದೊಂದು ವಾರದಿಂದ ಈ ಸಂಖ್ಯೆ 1.5 ರಿಂದ 2 ಲಕ್ಷಕ್ಕೆ ಇಳಿಕೆಯಾಗಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಈ ಸಂಖ್ಯೆ ಕುಸಿತ ಕಂಡಿದ್ದು, ಗ್ರಾಹಕರ ಬಳಿಯೇ ತೆರಳಿ ನೋಂದಣಿ ಮಾಡುವ ಚಿಂತನೆ ನಡೆದಿದೆ, ಗ್ರಾಮೀಣ ಭಾಗಗಲ್ಲಿ ಇದರ ಬಗ್ಗೆ ಅರಿವಿಲ್ಲದ, ಗೊತ್ತಿದ್ದರೂ ನೋಂದಣಿ ಮಾಡಿಕೊಳ್ಳಲಾಗದ ಅಥವಾ ಸಾಧ್ಯವಾಗದ ವರ್ಗಗಳನ್ನು ತಲುಪುವ ಅವಶ್ಯಕತೆ ಇದೆ. ಅಗತ್ಯ ಬಿದ್ದರೆ ಗ್ರಾಹಕರಿದ್ದಲ್ಲಿಯೇ ನಮ್ಮ ಮೀಟರ್ ರೀಡರ್ ಗಳು ಅಥವಾ ಗ್ರಾಮ ವಿದ್ಯುತ್ ಪ್ರತಿನಿಧಿಗಳು ತೆರಳಿ, ನೋಂದಣಿ ಮಾಡಿಸಿ ಕೊಳ್ಳಲಿದ್ದಾರೆ ಎಂದು ಬೆಸ್ಕಾಂ ನಿರ್ದೇಶಕರು ತಿಳಿಸಿದ್ದಾರೆ.
ಗೃಹಜ್ಯೋತಿ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವ ಲಿಂಕ್ 👇👇
Tags
Govt.scheme