ಮನೆ ಯಜಮಾನಿಗೆ ಮಾಸಿಕ ರೂಪಾಯಿ 2,000/- ನೀಡುವ ಯೋಜನೆ ಗೃಹಲಕ್ಷ್ಮಿಗೆ ಇಂದು ಚಾಲನೆ :

ಮನೆ ಯಜಮಾನಿಗೆ ಮಾಸಿಕ ರೂಪಾಯಿ 2,000/- ನೀಡುವ ಯೋಜನೆ ಗೃಹಲಕ್ಷ್ಮಿಗೆ ಇಂದು ಚಾಲನೆ :



   
ರಾಜ್ಯಾದ್ಯಂತ ಏಕಕಾಲಕ್ಕೆ ಕಾಂಗ್ರೆಸ್ ೪ನೇ ಗ್ಯಾರಂಟಿ ಉದ್ಘಾಟನೆ ಮೈಸೂರಿನಲ್ಲಿ ಪ್ರಧಾನ ಕಾರ್ಯಕ್ರಮ । ರಾಹುಲ್, ಖರ್ಗೆ ಭಾಗಿ ........


                 ದೇಶದ ಇತಿಹಾಸದಲ್ಲೆ ಅತಿ ದೊಡ್ಡ ಕಲ್ಯಾಣಕಾರ್ಯಕ್ರಮ ಎನ್ನಲಾಗ್ತುತ್ತಿರುವ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ನಾಲ್ಕನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಅದ್ಧುರಿ ಚಾಲನೆ ಸಿಗಲಿದೆ.
ಮೈಸೂರಿನ ಮಹಾರಾಜಾ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11:30 ಕ್ಕೆ ನಡೆಯಲಿರುವ ಈ ಯೋಜನೆಯ ವೇದಿಕೆ ಕಾರ್ಯ ಕ್ರಮವನ್ನು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ರಾಜ್ಯಸಭಾ ಪ್ರತಿಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಡಾ.ಎಚ್ ಸಿ ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಕೆ ಎಚ್ ಮುನಿಯಪ್ಪ, ಕೆ ವೆಂಕಟೇಶ್, ಏನ್ ಚಲುವರಾಯಸ್ವಾಮಿ, ಕೆ ಎನ್ ರಾಜಣ್ಣ, SS ಬೋಸರಾಜು, ಮೇಯರ್ ಶಿವಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಂದ ಸುಮಾರು 1.30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ. 


whatss


1.11 ಕೋಟಿ ಮಂದಿಗೆ ಅನುಕೂಲ :

ಗೃಹಲಕ್ಷ್ಮಿ ಯೋಜನೆಯಡಿ ಮೊದಲ ತಿಂಗಳು ಬರೋಬ್ಬರಿ 1.11 ಕೋಟಿ ಪಡಿತರ  ಕುಟುಂಬಗಳ ಮನೆಯೊಡತಿಯರಿಗೆ ತಲಾ 2000 ರು ನಂತೆ ಒಟ್ಟು ನಗದು ಪಾವತಿಯಾಗುವ ನಿರೀಕ್ಷೆ ಇದೆ. 

ದೇಶದಲ್ಲೇ ಅತಿದೊಡ್ಡ ಯೋಜನೆ ಗೃಹಲಕ್ಷ್ಮಿ :

ಗೃಹಲಕ್ಷ್ಮಿ ಗೆ ವಾರ್ಷಿಕ ರೂ 32000 ಕೋಟಿ ಖರ್ಚಾಗುತ್ತದೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆಗೆ ಇಷ್ಟು ದೊಡ್ಡ ಪ್ರಮಾಣದ ಹಣ ಖರ್ಚು ಮಾಡುತ್ತಿರುವುದು ಇದೆ ಮೊದಲು. ಗ್ಯಾರಂಟಿ ಯೋಜನೆಗಳ ಜಾರಿ ನಮಗೆ ಸವಾಲು ಅನಿಸಲಿಲ್ಲ. ಗ್ಯಾರಂಟಿ ವಿಚಾರದಲ್ಲಿ ನಮಗೆ ಬದ್ಧತೆ ಇದೆ.

ನಾವು ನುಡಿದಂತೆ ನಡೆದುಕೊಂಡಿದ್ದೇವೆ:

ಮೈಸೂರಿನ ಭಾಗದ ಜನತೆ ನಮ್ಮ ಸರ್ಕಾರ ರಚನೆಗೆ ಹೆಚ್ಚಿನ ಶಕ್ತಿ ಕೊಟ್ಟಿದ್ದಾರೆ. ರಾಜ್ಯದ ಮಹಿಳೆಯರಿಗೆ ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಇರಲಿ ಎಂದು ಗೃಹಲಕ್ಷ್ಮಿ ಯನ್ನು ಇಲ್ಲೇ ಆರಂಭಿಸುತ್ತಿದ್ದೇವೆ. ಚುನಾವಣೆಗೂ ಮುನ್ನದೇವಿ ಸನ್ನಿಧಾನದಲ್ಲಿ ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆದಿದೆ. ನುಡಿದಂತೆ ನಡೆದಿರುವುದು ಈ ಸರ್ಕಾರದ ಸಾಧನೆ.


whatss


32000 ಕೋಟಿ ರೂಪಾಯಿ  : ಗೃಹಲಕ್ಷ್ಮಿ ಸ್ಕೀಮ್ ಜಾರಿಯಿಂದ ಪ್ರತಿ ವರ್ಷ ಆಗುವ ವೆಚ್ಚ.
20000 ಕೋಟಿ ರೂಪಾಯಿ : ಈ ವರ್ಷ 8 ತಿಂಗಳು ಯೋಜನೆ ಜಾರಿಗೆ ಬೇಕಾದ ಹಣ.
2220  ರೂಪಾಯಿ : ಈ ತಿಂಗಳು ಮಹಿಳೆಯರ ಖಾತೆಗೆ ಜಮೆ ಆಗುವ ಹಣ.
1.11  ಕೋಟಿ ರೂಪಾಯಿ : ಸ್ತ್ರೀಯರು ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆವ ಮಹಿಳೆಯರು.
1.30  ಲಕ್ಷ  ರೂಪಾಯಿ : ಮೈಸೂರಿನಲ್ಲಿ ನಡೆವ ಕಾರ್ಯಕ್ರಮಕ್ಕೆ ಬರಲಿರುವ ಫಲಾನುಭವಿಗಳು.
2000 ಬಸ್ ಮೈಸೂರು ಕಾರ್ಯಕ್ರಮಕ್ಕೆ ಜನ ಕರೆತರಲು ನಿಯೋಜನೆ.
10400 ಸ್ಥಳ : ಮೈಸೂರು ಕಾರ್ಯಕ್ರಮ ರಾಜ್ಯದ ವಿವಿಧೆಡೆ ನೇರಪ್ರಸಾರ.

   


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು