ರಕ್ಷಾ ಬಂಧನಕ್ಕೆ ಮೋದಿ ಗಿಫ್ಟ್ !! ಗ್ಯಾಸ್ ಸಿಲಿಂಡರ್ ಬೆಲೆ ರೂಪಾಯಿ 200 ಅಗ್ಗ ....

ರಕ್ಷಾ ಬಂಧನಕ್ಕೆ ಮೋದಿ ಗಿಫ್ಟ್ !!
ಗ್ಯಾಸ್ ಸಿಲಿಂಡರ್ ಬೆಲೆ ರೂಪಾಯಿ 200 ಅಗ್ಗ....




   
ಕೇಂದ್ರ ಸಂಪುಟ ನಿರ್ಧಾರ : ಇಂದಿನಿಂದ ಜಾರಿ ಉಜ್ವಲಾ ಫಲಾನುಭವಿಗಳಿಗೆ ರೂಪಾಯಿ 400 ಸೋವಿ ಸಬ್ಸಿಡಿ ನಿಲ್ಲಿಸಿದ 3 ವರ್ಷದ ಬಳಿಕ ದರ ಇಳಿಕೆ......


            ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ದೇಶದ ಜನರಿಗೆ ಕೊಂಚ ನಿರಾಳತೆ ಉಂಟುಮಾಡುವ ಹಾಗೂ ಬೆಳವಣಿಗೆಯೊಂದರಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಗ್ರಹ ಬಳಕೆ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 200 ರೂಪಾಯಿ ಕಡಿತ ಮಾಡಿದೆ. ವರ್ಷಾಂತರಕ್ಕೆ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ನರೇಂದ್ರ ಮೋದಿ ಸರ್ಕಾರ ಈ ಉಡುಗೊರೆ ನೀಡಿದೆ. ಉಜ್ವಲಾ ಯೋಜನೆಯಡಿ ಎಲ್ ಪಿಜಿ ಸಂಪರ್ಕ ಪಡೆದ ಬಡವರಿಗೆ ಈಗಾಗಲೇ ಇದ್ದ 200 ರೂಪಾಯಿ ಸಬ್ಸಿಡಿಗೆ ಈಗ ಮತ್ತೆ 299 ರೂ ಸೇರಿಸಿದೆ. ಹೀಗಾಗಿ ಅವರಿಗೆ ಒಟ್ಟು 400 ರೂ ಸಬ್ಸಿಡಿ ಸಿಗಲಿದೆ. ಕರ್ನಾಟಕದಲ್ಲಿ 14.2 ಕೆಜಿ ತೂಕದ ಎಲ್ ಪಿಜಿ ಸಿಲಿಂಡರ್ ಬೆಲೆ 1105 ರು ಇದೆ. ಅದು ಬುಧವಾರದಿಂದ ಸಾಮಾನ್ಯ ಗ್ರಾಹಕರಿಗೆ 905 ರು ಗೆ ಹಾಗೂ ಉಜ್ವಲಾ ಫಲಾನುಭವಿಗಳಿಗೆ 705 ರು ಗೆ ಆಗಲಿದೆ. ಬೆಲೆ ಕಡಿತದಿಂದಾಗಿ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 10,000 ಕೋಟಿ ಹೊರೆ ಬೀಳಲಿದೆ ಎಂದು ಹೇಳಲಾಗಿದೆ.
 ಆಗಸ್ಟ್ 30 ರಿಂದಲೇ ಹೊಸ ದರ ಜಾರಿಗೆ ಬರಲಿದೆ. 2020 ರ ಜೂನ್ ನಲ್ಲಿ ಕೇಂದ್ರ ಸರ್ಕಾರ LPG ಸಬ್ಸಿಡಿ ಸ್ಥಗಿತಗೊಳಿಸಿದ ಬಳಿಕ ಮೊದಲ ಬಾರಿಗೆ ಜನರಿಗೆ ಈ ದರ ಇಳಿಕೆಯ ಲಾಭ ನೀಡಲಾಗಿದೆ.


whatss


ಸಹೋದರಿಯರ ಜೀವನ ಸುಲಭ :
        ರಕ್ಷಾ ಬಂಧನ ಕುಟುಂಬದಲ್ಲಿ ಸಂತೋಷ ಹೆಚ್ಚಿಸುವ ಹಬ್ಬವಾಗಿದೆ. ಎಲ್ ಪಿ ಜಿ ಬೆಲೆ ಇಳಿಕೆಯು ನನ್ನ ಕುಟುಂಬದ ಸಹೋದರಿಯರಿಗೆ ಹೆಚ್ಚಿನ ಆರಾಮದಾಯಕ ಮತ್ತು ಜೀವನವನ್ನು ಸುಲಭಗೊಳಿಸುತ್ತದೆ. ನನ್ನ ಪ್ರತಿಯೊಬ್ಬ ಸಹೋದರಿಯು ಸಂತೋಷದಿಂದ ಮತ್ತು ಅರೋಗ್ಯವಾಗಿರಲಿ. ಇದು ದೇವರಲ್ಲಿ ನನ್ನ ಹರಕೆಯಾಗಿದೆ. (ಪ್ರಧಾನ ಮಂತ್ರಿ ನರೇಂದ್ರ ಮೋದಿ)..............

ಡಿಬಿಟಿ ಇಲ್ಲ, ತೈಲ ಕಂಪನಿಗಳಿಗೆ ಸಬ್ಸಿಡಿ:

          ಈ ಹಿಂದೆ ನೇರ ಹಣ ವರ್ಗಾವಣೆ ಮೂಲಕ ಗ್ರಾಹಕರಿಗೆ LPG ಸಿಲಿಂಡರ್ ನ ಸಬ್ಸಿಡಿ ಹಣ ಪಾವತಿಸಲಾಗುತ್ತಿತ್ತು. ಆದರೆ ಈಗ ಕಡಿತಗೊಂಡ ಬೆಲೆಯನ್ನೇ ಸರ್ಕಾರಿ ಸ್ವಾಮ್ಯದ ಎಚ್ ಪಿ, ಬಿಪಿಸಿಎಲ್ ಹಾಗೂ ಇಂಡಿಯನ್ ಆಯಿಲ್ ಕಂಪನಿಗಳು ಗ್ರಾಹಕರಿಗೆ ಸಿಲಿಂಡರ್ ಪೂರೈಸಲಿವೆ. ಆ ಕಂಪನಿಗಳಿಗೆ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರ ಮರುಪಾವತಿ ಮಾಡಲಿದೆ. 

   

ಚುನಾವಣೆ ಕೊಡುಗೆ ಅಲ್ಲ-ಕೇಂದ್ರ:

          ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಸಚಿವ ಅನುರಾಗ್ ಠಾಕೂರ್, ಎಲ್ ಪಿಜಿ ಬೆಲೆ ಇಳಿಕೆಗೂ ಮುಂಬರುವ ಚುನಾವಣೆಗಳಿಗೂ ಸಂಬಂಧವಿಲ್ಲ. ಇದು ರಕ್ಷಾ ಬಂಧನ ಹಾಗೂ ಓಣಂಗೆ ಸರ್ಕಾರ ನೀಡಿರುವ ಉಡುಗೊರೆ ಎಂದರು.

ಕಾಂಗ್ರಸ್ ನ ಉಚಿತ ಕೊಡುಗೆಗಳಿಗೆ ಸಡ್ಡು :

         ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ ನೀಡುವುದನ್ನು 2020 ರ ಜೂನ್ ನಿಂದ್ ನಿಲ್ಲಿಸಿತ್ತು. ಅಲ್ಲಿಂದ ಮೊದಲ್ಗೊಂಡು ಈವರೆಗೆ ಎಲ್ ಪಿಜಿ ಸಿಲಿಂಡರ್ ಬೆಲೆ ದುಪ್ಪಟ್ಟಾಗಿದೆ. ಹೀಗಾಗಿ ಅಡುಗೆ ಅನುಲದ ದರ ಪ್ರಮುಖ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ರಾಜಸ್ಥಾನ ಸರ್ಕಾರ 500 ರು ಗೆ ಎಲ್ ಪಿಜಿ ಸಿಲಿಂಡರ್  ನೀಡುತ್ತಿದೆ.
ಮದ್ಯ ಪ್ರದೇಶ ದಲ್ಲೂ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ 500 ರುಪಾಯಿಗೆ ಸಿಲಿಂಡರ್ ನೀಡುವುದಾಗಿ ಪ್ರಕಟಿಸಿದೆ. ಕರ್ನಾಟಕದಲ್ಲಿ ಈಗಾಗಲೇ ಉಚಿತ ಕೊಡುಗೆಗಳನ್ನು ಘೋಷಿಸಿ ಮತದಾರರನ್ನು ಸೆಳೆದು ಗೆದ್ದಿದೆ. ಹೀಗಾಗಿ ಚುನಾವಣಾ ತಂತ್ರಗಾರಿಕೆಯ ಭಾಗವಾಗಿಯೂ ಕೇಂದ್ರವು ಸಿಲಿಂಡರ್ ಬೆಲೆ ಇಳಿಸಿದೆ ಎಂದು ಹೇಳಲಾಗಿದೆ.



whatss


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು