ಮೈಕ್ರೋ ಇನ್ಶೂರೆನ್ಸ್ ಸೇರಿ ಹಲವು ಸೌಲಭ್ಯ :
ಮಹಿಳೆಯರೇ ಹೆಚ್ಚು :
ಒಟ್ಟು ಜನ-ಧನ್ ಖಾತೆದಾರರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಸುಮಾರು ಶೇ 55.5 ರಷ್ಟು ಖಾತೆಗಳು ಮಹಿಳೆಯರ ಹೆಸರಿನಲ್ಲಿವೆ. ಅಲ್ಲದೆ, ಶೇ 67 ರಷ್ಟು ಖಾತೆಗಳನ್ನು ಗ್ರಾಮೀಣ ಮತ್ತು ಅರೆ-ಗ್ರಾಮೀಣ ಪ್ರದೇಶಗಳಲ್ಲಿ ತೆರೆಯಲಾಗಿದೆ. ಈ ಖಾತೆಗಳಲ್ಲಿನ ಒಟ್ಟು ಠೇವಣಿ ಮೊತ್ತ ರೂಪಾಯಿ 2 ಲಕ್ಷ ಕೋಟಿ ದಾಟಿದೆ. ಈ ಖಾತೆಗಳನ್ನು ಹೊಂದಿದವರಿಗೆ ಸುಮಾರು 34 ಕೋಟಿ ರೂಪೇ ಕಾರ್ಡ್ ಗಳನ್ನೂ ಯಾವುದೇ ಶುಲ್ಕವಿಲ್ಲದೆ ನೀಡಲಾಗಿದೆ. ಕಾರ್ಡ್ ದಾರರಿಗೆ ರೂಪಾಯಿ 2 ಲಕ್ಷ ವಿಮೆ ಸೌಲಭ್ಯ ಒದಗಿಸಲಾಗುತ್ತದೆ.
ಪ್ರಧಾನ ಮಂತ್ರಿ ಜನ-ಧನ್ ಯೋಜನೆ ಎಂದೇ ಖ್ಯಾತವಾದ ರಾಷ್ಟೀಯ ಆರ್ಥಿಕ ಒಳಗೊಳ್ಳುವಿಕೆ ಮಿಷನ್ ಯಶಸ್ವಿಯಾಗಿ ಅನುಷ್ಠಾನಗೊಂಡು ಸೋಮವಾರ ಒಂಬತ್ತು ವರ್ಷ ತುಂಬಿದ್ದು ದಶಕದತ್ತ ದಾಪುಗಾಲಿಟ್ಟಿರುವ ಸಂದರ್ಭದಲ್ಲಿ ಖಾತೆದಾರರಿಗೆ ಮೈಕ್ರೋ ಇನ್ಶೂರೆನ್ಸ್ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಕಿರು ವಿಮಾ ಯೋಜನೆಗಳ ಅಡಿಯಲ್ಲಿ ಪಿಎಂಜೆಡಿವೈ ಖಾತೆದಾರರ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಸಿದ್ಧತೆ ನಡೆದಿದ್ದು ಪಿಎಂಜೆಜೆಬಿಐ ಮತ್ತು ಪಿಎಂಎಸ್ ಬಿಐ ವ್ಯಾಪ್ತಿಗೆ ಜನ-ಧನ್ ಖಾತೆದಾರರನ್ನು ತರಲು ಪ್ರಯತ್ನಿಸಲಾಗುತ್ತಿದೆ. ಈ ಕುರಿತು ಬ್ಯಾಂಕ್ ಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ-ಧನ್ ಖಾತೆದಾರರಿಗೆ ಕಿರು-ಸಾಲಗಳು, ಫ್ಲೆಕ್ಸಿ-ರಿಕವರಿಂಗ್ ಡೆಪಾಸಿಟ್ ಮೊದಲಾದ ಸೌಲಭ್ಯಗಳನ್ನು ವಿಸ್ತರಿಸುವ ಚಿಂತನೆಯಿದೆ.
2014ರ ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಯೋಜನೆ ಪ್ರಕಟಿಸಿದ್ದರು. ಅದೇ ತಿಂಗಳ 24 ರಂದು ಯೋಜನೆಗೆ ಚಾಲನೆ ನೀಡಿದ ಮೋದಿ, ಇದು ಬಡಜನರನ್ನು ವಿಷವೃತ್ತದಿಂದ ಬಿಡುಗಡೆಗೊಳಿಸಿದ ಸಂಭ್ರಮವಾಗಿ ಆಚರಿಸುವ ಘಳಿಗೆಯಾಗಿದೆ ಎಂದು ವರ್ಣಿಸಿದ್ದರು. ಇಡೀ ಜಗತ್ತಿನಲ್ಲೇ ಅತಿ ದೊಡ್ಡ ಹಣಕಾಸು ಒಳಗೊಳ್ಳುವಿಕೆ ಯೋಜನೆಯಾದ ಪಿಎಂಜೆಡಿವೈ, ಅಂಚೆಗೆ ತಳ್ಳಲ್ಪಟ್ಟ ಹಾಗೂ ಆರ್ಥಿಕವಾಗಿ ಹಿಂದುಳಿದ ವಿಭಾಗಗಳಿಗೆ ಹಣಕಾಸು ಒಳಗೊಳ್ಳುವಿಕೆ ಯೋಜನೆಯಾದ ಪಿಎಂಜೆಡಿವೈ, ಅಂಚೆಗೆ ತಳ್ಳಲ್ಪಟ್ಟ ಹಾಗೂ ಆರ್ಥಿಕವಾಗಿ ಹಿಂದುಳಿದ ವಿಭಾಗಗಳಿಗೆ ಹಣಕಾಸು ಒಳಗೊಳ್ಳುವಿಕೆ ಹಾಗೂ ಬೆಂಬಲ ನೀಡುವ ಉದ್ದೇಶ ಹೊಂದಿದೆ. ಎಲ್ಲ ಜನವಿಭಾಗಗಳಿಗೆ ಬ್ಯಾಂಕಿಂಗ್ ಸೇವೆ ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ.
ಹಣಕಾಸು ಒಳಗೊಳ್ಳುವಿಕೆಯು ಬಡಜನರ ಉಳಿತಾಯದ ಹಣವನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ತರಲು ಹಾಗೂ ಹಳ್ಳಿಗಳಲ್ಲಿರುವ ತಮ್ಮ ಕುಟುಂಬಗಳಿಗೆ ಹಣ ಕಲಿಸಲು ನೆರವಾಗುತ್ತದೆ. ಅಲ್ಲದೆ ಜೀವ ಹಿಂಡುವ ದುಬಾರಿ ಬಡ್ಡಿ ವಿಧಿಸುವ ಲೇವಾದೇವಿದಾರರ ಹಿಡಿತದಿಂದ ಅವರನ್ನು ಪಾರು ಮಾಡಲು ಸಹಾಯಕವಾಗುತ್ತದೆ.
1.5 ಕೋಟಿಗೂ ಹೆಚ್ಚು ಉದ್ಯೋಗ :
ಪ್ರಧಾನಿ ಮೋದಿ ನೇತೃತ್ವದ ಒಂಬತ್ತು ವರ್ಷಗಳ ಆಡಳಿತಾವಧಿಯಲ್ಲಿ ಕೃಷಿ ಜತೆಗೆ ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ವ್ಯಾಪಾರ, ಸಾರಿಗೆ, ಶಿಕ್ಷಣ, ಆತಿಥ್ಯ ಮತ್ತು ವೈದ್ಯಕೀಯ ಕ್ಷೇತ್ರ ಸೇರಿದಂತೆ ಒಂಬತ್ತು ಸಂಘಟಿತ ವಲಯಗಳಲ್ಲಿ 1.5 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸಲಾಗಿದೆ. ಉತ್ಪಾದನಾ ಸಾಮರ್ಥ್ಯಗಳ ವಿಸ್ತರಣೆಯೊಂದಿಗೆ, ಹೊಸ ಕೈಗಾರಿಕೆಗಳ ನೋಂದಣಿ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಹೊಸ ಸದಸ್ಯರ ದಾಖಲಾತಿ ಹೆಚ್ಚಾಗಿದ್ದು, ಇದು ಉದ್ಯೋಗದ ಧನಾತ್ಮಕ ಬೆಳವಣಿಗೆ ತೋರಿಸುತ್ತದೆ. ಸರ್ಕಾರದ ಇ-ಶ್ರಮ ಪೋರ್ಟಲ್ ನಲ್ಲಿ 29 ಕೋಟಿ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರನ್ನು ಔಪಚಾರಿಕ ಆರ್ಥಿಕತೆಗೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ.
ಕ್ರಾಂತಿಕಾರಕ ಪ್ರಕ್ರಿಯೆ :
9 ವರ್ಷಗಳಿಂದ ಪಿಎಂಜೆಡಿವೈ-ಪ್ರೇರಿತ ಮಧ್ಯಪ್ರದೇಶಗಳು ಮತ್ತು ಡಿಜಿಟಲ್ ಪರಿವರ್ತನೆಗಳಿಂದಾಗಿ ಭಾರತದಲ್ಲಿ ಹಣಕಾಸು ಒಳಗೊಳ್ಳುವಿಕೆ ಕ್ರಾಂತಿಕಾರಿಯಾಗಿದೆ ಎಂದು ಯೋಜನೆಯ 9 ನೇ ವಾರ್ಷಿಕೋತ್ಸವದ ಸಂದರ್ಭ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ಜನ-ಧನ್ ಖಾತೆಗಳನ್ನು ತೆರೆಯುವ ಮೂಲಕ 50 ಕೋಟಿಗೂ ಹೆಚ್ಚು ಜನರನ್ನು ಔಪಚಾರಿಕ ಬ್ಯಾಂಕಿಂಗ್ ವಲಯದ ವ್ಯಾಪ್ತಿಗೆ ತರಲಾಗಿದೆ ಎಂದವರು ಹೇಳಿದ್ದಾರೆ. ಪಿಎಂಜೆಡಿವೈ ಜನಕೇಂದ್ರಿತ ಆರ್ಥಿಕ ಚಟುವಟಿಕೆಗಳಿಗೆ ಆಧಾರ ಸ್ತಂಭವಾಗಿದೆ. ನೇರ ಲಾಭ ವರ್ಗಾವಣೆ(ಡಿಬಿಟಿ), ಕೋವಿಡ್-19 ಹಣಕಾಸು ನೆರವು, ಪಿಎಂ ಕಿಸಾನ್, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಕೂಲಿ, ಜೀವ ಮತ್ತು ಅರೋಗ್ಯ ವಿಮೆ ಕವರ್ ಮೊದಲಾದವುಗಳ ಅನುಕೂಲ ಪಡೆಯಲಿಕ್ಕಾಗಿ ಮೊದಲು ಪ್ರತಿಯೊಬ್ಬ ವಯಸ್ಕರು ಬ್ಯಾಂಕ್ ಖಾತೆ ಹೊಂದುವುದು ಅಗತ್ಯ. ಪಿಎಂಜೆಡಿವೈ ಆ ಗುರಿಯನ್ನು ಬಹುತೇಕ ಪೂರ್ಣಗೊಳಿಸಿದೆ.
Tags
Govt.scheme