25 ಲಕ್ಷ ಹೊಸ ಫಲಾನುಭವಿಗಳಿಗೆ ಅನ್ನಭಾಗ್ಯ ಹಣ :

25 ಲಕ್ಷ ಹೊಸ ಫಲಾನುಭವಿಗಳಿಗೆ ಅನ್ನಭಾಗ್ಯ ಹಣ :



7 ಲಕ್ಷ ಕಾರ್ಡ್ ಗಳ ಸಮಸ್ಯೆ ಬಗೆಹರಿಸಿದ ಆಹಾರ ಇಲಾಖೆ: 606 ಕೋಟಿ ರೂ ಜಮೆ.


   

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರ ಖಾತೆಗೆ ಆಗಸ್ಟ್ ತಿಂಗಳಿನ 2ನೇ ಕಂತು ಹಣ ಜಮೆ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ 1.03 ಕೋಟಿ ಕಾರ್ಡ್ ಗಳ 3.69 ಕೋಟಿ ಫಲಾನುಭವಿಗಳಿಗೆ 606 ಕೋಟಿ ರೂ ಜಮೆಯಾಗಲಿದೆ. 

ಜುಲೈ ನಲ್ಲಿ 97,27,160 ಕಾರ್ಡ್ ಗಾಲ 3.45 ಕೋಟಿ ಫಲಾನುಭವಿಗಳಿಗೆ 566 ಕೋಟಿ ರೂ ಹಾಕಲಾಗಿತ್ತು. ಆಗಸ್ಟ್ ನಲ್ಲಿ 25 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಣ ಜಮೆ ಮಾಡಲಾಗಿದ್ದು, ಒಟ್ಟು ಶೇ 87 ಫಲಾನುಭವಿಗಳಿಗೆ ಯೋಜನೆಯಡಿ ಹಣ ಸಿಗುತ್ತಿದೆ.
           ಕುಟುಂಬದ ಮುಖ್ಯಸ್ಥರನ್ನು ಆಯ್ಕೆ ಮಾಡದಿರುವುದು, ಬ್ಯಾಂಕ್ ಖಾತೆ ಇಲ್ಲದಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದಿರುವುದು ಹಾಗೂ ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸದಿರುವುದು ಸೇರಿ ಇತರ ಕಾರಣಗಳಿಂದ ಅಂದಾಜು 22 ಲಕ್ಷ ಬಿಪಿಎಲ್ ಕಾರ್ಡ್ ಗಳು ಯೋಜನೆಯಿಂದ ಹೊರಗುಳಿದಿದ್ದವು. ಈ ಪಾಕಿ 7 ಲಕ್ಷ ಕಾರ್ಡ್ ಗಳ ಸಮಸ್ಯೆಗಳು ಆಹಾರ ಇಲಾಖೆಯ ಮುತುವರ್ಜಿಯಿಂದ ಬಗೆಹರಿದಿದ್ದು, ಆಗಸ್ಟ್ ನಲ್ಲಿ 25 ಲಕ್ಷಕ್ಕೂ ಅಧಿಕ ಹೊಸ ಫಲಾನುಭವಿಗಳಿಗೆ ಸೌಲಭ್ಯ ಸಿಕ್ಕಿದೆ. ಉಳಿದ 15 ಲಕ್ಷ ಕಾರ್ಡ್ ಗಳ ಸಮಸ್ಯೆಯನ್ನು ಸೆಪ್ಟೆಂಬರ್ ವೇಳೆಗೆ ಬಗೆಹರಿಸಲು ಇಲಾಖೆ ಮುಂದಾಗಿದೆ.


whatss

8.72 ಲಕ್ಷ ಕಾರ್ಡ್ ಗಿಲ್ಲ ಹಣ :

       ರಾಜ್ಯ ಸರ್ಕಾರ ಹೊರಡಿಸಿದ್ದ ಕೆಲ ನಿಬಂಧನೆಗಳಿಂದ ಒಟ್ಟು 8.72 ಲಕ್ಷ ಕಾರ್ಡ್ ಗಳಿಗೆ ಹಣ ಸಿಗದಂತಾಗಿದೆ. ಮೂರೂ ತಿಂಗಳಿಂದ ರೇಷನ್ ತೆಗೆದುಕೊಳ್ಳದ ಕಾರ್ಡ್ ದಾರರು ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹರು ಎಂದು ಈಗಾಗಲೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈ ಹಿನ್ನಲೆ 5.32 ಲಕ್ಷ ಬಿಪಿಎಲ್ ಕಾರ್ಡ್ ಗಳು ಯೋಜನೆಯಿಂದ ಹೊರಗುಳಿದಿವೆ. ಅದೇ ರೀತಿ, ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿರುವ 3.40 ಲಕ್ಷ ಅಂತ್ಯೋದಯ ಕಾರ್ಡ್ ದಾರರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್ ಗಳಿವೆ.
ರಾಷ್ಟೀಯ ಮಾಹಿತಿ ಕೇಂದ್ರ (ಎನ್ ಐಸಿ), ಇ-ಆಡಳಿತ ಹಾಗೂ ಖಜಾನೆ ಇಲಾಖೆ ಸಹಯೋಗದಲ್ಲಿ ಆಹಾರ ಇಲಾಖೆ ವತಿಯಿಂದ ಡಿಬಿಟಿ ಮುಖೇನ ಕಾರ್ಡ್ ದಾರರಿಗೆ ಯಶಸ್ವಿಯಾಗಿ 2ನೇ ಕಂತಿನ ಹಣ ಹಾಕಲಾಗುತ್ತಿದೆ. ವಿವಿಧ ತಾಂತ್ರಿಕ ಸಮಸ್ಯೆ ಬಗೆಹರಿದ ಪರಿಣಾಮ ಆಗಸ್ಟ್ ನಲ್ಲಿ ಹೊಸದಾಗಿ 25 ಲಕ್ಷ ಫಲಾನುಭವಿಗಳನ್ನು ಯೋಜನೆಗೆ ಸೇರಿಸಲಾಗಿದೆ. ಸೆಪ್ಟೆಂಬರ್ ವೇಳೆಗೆ ಉಳಿದ ಕಾರ್ಡ್ ಗಳ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ.



   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು