ಈ ತಿಂಗಳು ಅಕ್ಕಿಯ ಹಣ ಖಾತೆಗೆ ಬಂದಿದೆಯೇ? ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಈ ತಿಂಗಳು ಅಕ್ಕಿಯ ಹಣ ಖಾತೆಗೆ ಬಂದಿದೆಯೇ? ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?



   
ನಮಸ್ಕಾರ ಸ್ನೇಹಿತರೆ,,,,,,,,

ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಈ ತಿಂಗಳು ಅಂದರೆ ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೇಯ ಹಣ ಜಮೆ ಆಗಿದಿಯ ಎಂಬುದನ್ನು ಹೇಗೆ ಚೆಕ್ ಮಾಡುವುದರ ಕುರಿತಾಗಿ. ನಿಮ್ಮ ಖಾತೆಗೆ ಹಣ ಜಮೆ ಆಗಿದೀಯಾ ಚೆಕ್ ಮಾಡಿಕೊಳ್ಳಿ.
           ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು. ಆದರೆ ಈಗ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಉಳಿದ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಐದು ಕೆಜಿ ಅಕ್ಕಿಗೆ ಒಟ್ಟು 170 ರೂಪಾಯಿಯನ್ನು ನೇರವಾಗಿ ಖಾತೆಗೆ ಜಮೆ  ಮಾಡಲಾಗುತ್ತಿದೆ.ಇದನ್ನು ಹೊರತುಪಡಿಸಿ ಗೃಹಲಕ್ಷ್ಮಿ ಯೋಜನೆಗೂ ಕೂಡ ರೇಷನ್ ಕಾರ್ಡ್ ಮುಖ್ಯವಾಗುತ್ತದೆ. 
ಈ ತಿಂಗಳು ಅಕ್ಕಿಯ ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎಂದು ಮೊಬೈಲ್ ಮೂಲಕವೇ ಚೆಕ್ ಮಾಡಬಹುದು. ರೇಷನ್ ಕಾರ್ಡ್ ಸ್ಟೇಟಸ್ ಅನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗಾಗಿ ನೇರ ಲಾಭ ವರ್ಗಾವಣೆ ಯೋಜನೆಯನ್ನು ಪ್ರಾರಂಭಿಸಿದೆ. ಇದು ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು  ಒದಗಿಸುತ್ತಎ.ಹಣವನನು ಆಧಾರ್ ಸಂಖ್ಯೆಗಳಿಗೆ ಲಿಂಕ್ ಮಡಿದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

whatss


ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವ ವಿಧಾನ:

⛤ ಕರ್ನಾಟಕ ಸರ್ಕಾರದ ವೆಬ್ ಸೈಟ್ www.karnataka.gov.in ಗೆ ಭೇಟಿ ನೀಡಿ.

⛤ E-Services ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

⛤ ನಂತರ DBT ಸ್ಟೇಟಸ್ ಲಿಂಕ್ ಅನ್ನು ಕ್ಲಿಕ್ ಮಾಡಿಕೊಳ್ಳಿ 

⛤ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವ ಸಮಯದ ಸ್ಟೇಟಸ್ ಚೆಕ್ ಮಾಡಲು ಬಯಸುತ್ತೀರಿ ಎಂದು ಆಯ್ಕೆಮಾಡಿಕೊಳ್ಳಿ.

⛤ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ, continue ಮೇಲೆ ಕ್ಲಿಕ್ ಮಾಡಿ.

⛤ ಅನ್ನಭಾಗ್ಯ ಯೋಜನೆಯಡಿಯಲ್ಲಿ ನಿಮ್ಮ ಸ್ಟೇಟಸ್ ಹೇಗಿದೆಎಂದು ಸ್ಕ್ರೀನ್ ನಲ್ಲಿ ತೋರಿಸಲಾಗುತ್ತದೆ. 

   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು