ಭಾರತದ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಯಶಸ್ವಿಯಾಗುವ ಮೂಲಕ ಭಾರತೀಯ ಸಂಶೋಧನಾ ಕೇಂದ್ರ ವಿಜ್ಞಾನಿಗಳ ಶ್ರಮ ಹಾಗೂ ದೇಶದ ಜನರ ಪ್ರಾರ್ಥನೆಗೆ ಫಲ ಸಿಕ್ಕಿದೆ. ವಿಕ್ರಂ ಲ್ಯಾಂಡರ್ ಅನ್ನು ಸಾಫ್ಟ್ ಆಗಿ ಲ್ಯಾಂಡ್ ಮಾಡುವ ಮೂಲಕ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಗಳಿಸಿದ್ದಲ್ಲದೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಸಾಧನೆಗೆ ಭಾರತ ಭಾಜನವಾಗಿದೆ.
ಚಂದ್ರಯಾನ ಯಶಸ್ಸಿನಿಂದ ಇಡೀ ರಾಷ್ಟ್ರವೇ ಸಂತಸದ ಅಲೆಯಲ್ಲಿ ತೇಲುತ್ತಿದೆ. ವಿದೇಶದ ಗಣ್ಯರು ಕೂಡ ಭಾರತಕ್ಕೆ ಶುಭ ಹಾರೈಸಿದ್ದಾರೆ. ಇದರ ನಡುವೆ ಪಾಕಿಸ್ತಾನದ ನಟಿ ಸೆಹರ್ ಶಿನ್ವರಿ, ಚಂದ್ರಯಾನ ಯಶಸ್ಸಿಗೆ ಅಭಿನಂದನೆ ಸಲ್ಲಿಸಿರುವ ಶಿನ್ವರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರದಲ್ಲಿ ಭಾರತಕ್ಕಿಂತ ತಮಮ್ ದೇಶ ಎಷ್ಟು ಹಿಂದೆ ಬಿದ್ದಿದೆ ಎಂಬುದನ್ನು ಈ ಚಂದ್ರಯಾನ-೩ ಯಶಸ್ಸು ತೋರಿಸಿದೆ ಎಂದು ಒಪ್ಪಿಕೊಂಡಿದ್ದಾರೆ.
ಎರಡರಿಂದ ಮೂರು ದಶಕಗಳು ಬೇಕು.
ಉಭಯ ದೇಶಗಳ ನಡುವಿನ ಹಗೆತನವನ್ನು ಹೊರತುಪಡಿಸಿ, ಚಂದ್ರಯಾನ-೩ ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಇತಿಹಾಸ ಬರೆದ ಇಸ್ರೋಗೆ ನಾನು ನಿಜವಾಗಿಯೂ ಅಭಿನಂದನೆ ಸಲ್ಲಿಸುತ್ತೇನೆ. ಪಾಕಿಸ್ತಾನ ಮತ್ತು ಭಾರತ ನಡುವೆ ಇರುವ ಎಲ್ಲ ಅಂತರವು ಎಲ್ಲ ಅಂಶಗಳಲ್ಲಿ ಎಷ್ಟು ಮಟ್ಟಕ್ಕೆ ವಿಸ್ತರಿಸಿದೆ ಎಂದರೆ ಭಾರತದ ಸರಿಸಮಾನಕ್ಕೆ ಬರಲು ಪಾಕಿಸ್ತಾನಕ್ಕೆ ಎರಡರಿಂದ ಮೂರು ದಶಕಗಳನ್ನೇ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ತಲೆಗಳು ನಾಚಿಕೆಯಿಂದ ಬಾಗಿವೆ.
ದುರದೃಷ್ಟವಶಾತ್, ನಮ್ಮ ಇಂದಿನ ದುಸ್ಥಿತಿಗೆ ನಾವೇ ಕಾರಣ ಹೊರತು ಬೇರೆ ಯಾರೂ ಅಲ್ಲ. ಮೌಲ್ವಿ ತಮಿಜುದ್ದಿನ್ ಅವರ ಅಸೆಮ್ಬಲಿಯನ್ನು ಅಕ್ರಮವಾಗಿ ವಿಸರ್ಜಿಸಿದಾಗಿನಿಂದ ನಾವು ದೇಶದಲ್ಲಿ ಕಾನೂನು ಮತ್ತು ಸಂವಿಧಾನದ ಪರಮಾಧಿಕಾರಕ್ಕಾಗಿ ಶ್ರಮಿಸುತ್ತಿದ್ದೇವೆ. ಇದರ ನಡುವೆ ಇಂದು ಭಾರತ ಎಲ್ಲಿಗೆ ತಲುಪಿದೆ ಎಂಬುದನ್ನು ನೋಡಿ ನಮ್ಮ ತಲೆಗಳು ನಿಜವಾಗಿಯೂ ನಾಚಿಕೆಯಿಂದ ಇಂದು ಬಾಗುತ್ತಿವೆ. ಇಂದು ನಮ್ಮ ನಡುವೆ ಪ್ರಾರಂಭದ ಅಂತರವು ಎಷ್ಟರಮಟ್ಟಿಗೆ ಬೆಳೆದಿದೆ ಎಂಬುದನ್ನು ಭಾರತ ಸಾಬೀತುಪಡಿಸಿದೆ. ಇದನ್ನು ನೋಡಿ ನಮಗೆ ನಾಚಿಕೆಯಾಗಬೇಕು. ಆದರೆ ಅದನ್ನು ತಲುಪುವುದು ನಮಗೆ ದೊಡ್ಡ ವಿಷಯವೇ ಎಲ್ಲ ಎಂದು ಹೇಳಿದ್ದಾರೆ.
ಯಾರು ಈ ಸೆಹರ್ ಶಿನ್ವರಿ ?
ಅಂದಹಾಗೆ ಸೆಹರ್ ಶಿನ್ವರಿ ಹುಟ್ಟಿದ್ದು ಪಾಕಿಸ್ತಾನದ ಹೈದರಾಬಾದ್ ನಲಿ. ಖೈಬರ್ ನಲ್ಲಿ 'ಸೈರ್ ಸಾವಾ ಸೈರ್' ಎಂಬ ಹಾಸ್ಯ ಸರಣಿಯೊಂದಿಗೆ 2014 ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದಳು. 2015ರಲ್ಲಿ ಕರಾಚಿ ಸ್ಟೇಷನ್ ಮಾಧ್ಯಮದಲ್ಲಿ ಬೆಳಗಿನ ಕಾರ್ಯಕ್ರಮದ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ನಟನೆ ಮತ್ತು ವೈರಲ್ ವಿಡಿಯೋಗಳಿಂದ ಸೆಹರ್ ಹೆಸರುವಾಸಿಯಾಗಿದ್ದಾಳೆ. ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸೆಹರ್ ತುಂಬಾ ಸಕ್ರಿಯಳಾಗಿದ್ದಾಳೆ. ಇನ್ಸ್ಟಾಗ್ರಾಂ ನಲ್ಲಿ 33,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾಳೆ. ಆಕೆಯ ಟ್ವೀಟ್ ಗಳು ಈ ಹಿಂದೆ ಮಾಧ್ಯಮಗಳ ಗಮನವನ್ನು ಸೆಳೆದಿದ್ದವು.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾದಾಗ ದೇಶಾದ್ಯಂತ ಭುಗಿಲೆದ್ದಿದ್ದ ಹಿಂಸಾಚಾರಕ್ಕೆ ಪ್ರಧಾನಿ ಮೋದಿ ಅವರೇ ಕಾರಣ ಎಂದು ಹೇಳಿ ಶಿನ್ವರಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಳು. ನನ್ನ ದೇಶ ಪಾಕಿಸ್ತಾನದಲ್ಲಿ ಈಗ ಉಂಟಾಗಿರುವ ಅವ್ಯವಸ್ಥೆ ಮತ್ತು ಭಯೋತ್ಪಾದನೆಯನ್ನು ಹರಡುತ್ತಿರುವ ಭಾರತದ ಪ್ರಧಾನಿ ಮತ್ತು ಭಾರತೀಯ ಗುಪ್ತಚರ RAW ವಿರುದ್ಧ ನಾನು ದೂರು ದಾಖಲಿಸಬೇಕಾಗಿದೆ, ಯಾರಾದರೂ ದೆಹಲಿ ಪೋಲೀಸರ ವೆಬ್ ಸೈಟ್ ಲಿಂಕ್ ಇದ್ದರೆ ಕಳುಹಿಸಿಕೊಡಿ ಎಂದು ಕೇಳಿದ್ದಳು. ಭಾರತೀಯ ನ್ಯಾಯಾಲಯಗಳು ಸ್ವತಂತ್ರವಾಗಿದ್ದರೆ ಅಲ್ಲಿನ ಸುಪ್ರೀಂ ಕೋರ್ಟ್ ನನಗೆ ನ್ಯಾಯವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಟ್ವೀಟ್ ಮಾಡಿದ್ದಳು.
ಜಾಲತಾಣದಲ್ಲಿ ಮುಖಭಂಗ :
ನಟಿಯ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ದೆಹಲಿ ಪೊಲೀಸರು ನಮ್ಮ ಕಾರ್ಯವ್ಯಾಪ್ತಿ ಪಾಕಿಸ್ತಾನಕ್ಕೆ ಒಳಪಡುವುದಿಲ್ಲ. ನಿಮ್ಮ ದೇಶದಲ್ಲಿ ಇಂಟೆರ್ ನೆಟ್ ಸೌಲಭ್ಯ ಕಡಿತಗೊಂಡಿದ್ದರು ನೀವು ಹೇಗೆ ಟ್ವೀಟ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಟಾಂಗ್ ಕೊಟ್ಟಿದ್ದರು. ಇದೆ ವಿಚಾರ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಯಾರು ಈ ಸೆಹರ್ ಶಿನ್ವರಿ ಎಂದು ಅನೇಕರು ಪ್ರಶ್ನಿಸಿದ್ದರು. ಅಲ್ಲದೆ, ಆಕೆ ತನ್ನ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಕ್ರೋಶ ಹೊರಹಾಕುವ ಮೂಲಕ ನೆಟ್ಟಿಗರು ಶಿನ್ವರಿಗೆ ಮಹಾ ಮಂಗಳಾರತಿ ಮಾಡಿದ್ದರು.
Tags
VIRAL VIDEO

WhatsApp Group