ಅನ್ನಭಾಗ್ಯ : ಆಗಸ್ಟ್ ತಿಂಗಳ ಹಣ ಬಿಡುಗಡೆ, DBT Status ಚೆಕ್ ಮಾಡಿ !


ಅನ್ನಭಾಗ್ಯ : ಆಗಸ್ಟ್ ತಿಂಗಳ ಹಣ ಬಿಡುಗಡೆ, DBT Status ಚೆಕ್ ಮಾಡಿ !




    

ಆಗಸ್ಟ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಮಾಡಲಾಗಿದೆ. ನಿಮ್ಮ ರೇಷನ್ ಕಾರ್ಡ್ ಗೆ ಹಣ ವರ್ಗಾವಣೆ ಆಗಿದೆಯಾ? ಅಥವಾ ಇಲ್ಲ ಎಂಬುದನ್ನು ಚೆಕ್ ಮಾಡುವ ಸುಲಭ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಓದಿ ನಿಮ್ಮ ರೇಷನ್ ಕಾರ್ಡ್ ಬಗ್ಗೆ ಮಾಹಿತಿ ತಿಳಿಯಿರಿ.

ಕರ್ನಾಟಕ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿದೆ ಒಂದು ಕೆಜಿಗೆ 34 ರೂ ಅಂತೆ BPL ಕಾರ್ಡ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡುತ್ತಿದೆ. ಅದರಂತೆ ಜುಲೈ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗಿದೆ.

BPL ಕಾರ್ಡ್ ಕುಟುಂಬದ ಲೆಕ್ಕ :

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಎಷ್ಟು ಜನರು ಇರುತ್ತಾರೆ ಪ್ರತಿಯೊಬ್ಬರಿಗೆ ಪ್ರತಿ ಸದಸ್ಯರಿಗೆ 170 ರೂ. ರಂತೆ ಈ ಕೆಳಗಿನಂತೆ ಮೊತ್ತವನ್ನು ನೀಡುತ್ತಾರೆ.

ಒಬ್ಬ ಸದಸ್ಯರಿದ್ದರೆ - 170 ರೂ.
ಇಬ್ಬರಿಗೆ - 340 ರೂ.
ಮೂವರಿಗೆ - 510 ರೂ.
ನಾಲ್ಕು ಜನ ಸದಸ್ಯರಿದ್ದರೆ - 680 ರೂ.
ಐದು ಜನ ಸದಸ್ಯರಿದ್ದರೆ - 850 ರೂ.
ಆರು ಜನ ಸದಸ್ಯರಿದ್ದರೆ - 1020 ರೂ.

ಈ ರೀತಿಯಾಗಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರೆಂದು ಗುರುತಿಸಿಕೊಂಡವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಾರೆ.

whatss

ರೇಷನ್ ಕಾರ್ಡ್ ಅಮೌಂಟ್ ಲೆಕ್ಕಾಚಾರ :

ಕಾಂಗ್ರೆಸ್ ಪಕ್ಷ ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಕುಟುಂಬದ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಹೆಚ್ಚುವರಿ ಅಕ್ಕಿ ಲಭ್ಯವಾಗದ ಕಾರಣ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವ ನಿರ್ಧಾರ ಸರ್ಕಾರ ಮಾಡಿದೆ. ಅದರಂತೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 170 ರೂ. ರಂತೆ ದುಡ್ಡು ಕೊಡಲಾಗುತ್ತದೆ.

August Month Annabhagya DBT Stetus Check Onine

ಅನ್ನಭಾಗ್ಯ ಯೋಜನೆಯ ( ahara kar nic in dbt stetus ) ಆಗಸ್ಟ್ ತಿಂಗಳ ದುಡ್ಡು ನಿಮ್ಮ ಖಾತೆಗೆ ಬಂದಿದೆಯಾ ಅಥವಾ ಎಷ್ಟು ಬರಲಿದೆ ಎಂಬುದನ್ನು ತಿಳಿಯಲಿ ಈ ಸುಲಭ ವಿಧಾನವನ್ನು ಫಾಲೋ ಮಾಡಿ.
➨ Step 1: ಮೊದಲಿಗೆ ಕೆಳಗೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬಸೈಟ್ ( ahara.kar.nic.in/pg) ಮೇಲೆ ಕ್ಲಿಕ್ ಮಾಡಿ.

➨ Step 2 : ಅಲ್ಲಿ ಮೂರು ಲಿಂಕ್ ಗಳಿರುವ ಇಂದು ಪೇಜ್ ಓಪನ್ ಆಗುತ್ತದೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಉದಾ. ONLY FOR BENGALURU DISTRICTS CLICK HERE ಎಂದಿರುತ್ತದೆ.


➨ Step 3 : ನೇರ ನಗದು ವರ್ಗಾವಣೆಯ ಸ್ಥಿತಿ ( STETUS OF DBT ) ಎಂಬ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ( ಕೆಳಗಿನ ಚಿತ್ರದಲ್ಲಿ ಕೊನೆಯ Option ಇದೆ ಗಮನಿಸಿ.)

➨ Step 4 : Status of DBT ಪುಟ ಓಪನ್ ಆಗುತ್ತದೆ. ಅದರಲ್ಲಿ select year, select month ಅಂತ ಇರುತ್ತದೆ. 2023 ಆಗಸ್ಟ್ ಎಂದು ಆಯ್ಕೆ ಮಾಡಿ. ನಂತರ Enter RC Number ಎಂದಿರುತ್ತದೆ. ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟರ್ ಮಾಡಿ. Go ಬಟನ್ ಮೇಲೆ ಕ್ಲಿಕ್ ಮಾಡಿ.

 
➨ Step 5 : ಅಂತಿಮವಾಗಿ ನಿಮ್ಮ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಅಲ್ಲಿ ಕಾಣುತ್ತದೆ. ಮುಖ್ಯಸ್ಥರ ಹೆಸರು ಅಲ್ಲಿ ಕಾಣುತ್ತದೆ. ಅವರ ಆಧಾರ ಸಂಖ್ಯೆಯ ಕೊನೆಯ ೪ ಸಂಖ್ಯೆ ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ ಅಕ್ಕಿ ಸಿಗುವ ಪ್ರಮಾಣ ಮತ್ತು ನಿಮ್ಮ ಖಾತೆಗೆ ಜಮಾ ಆಗುವ ಮೊತ್ತದ ವಿವರ ಅಲ್ಲಿ ಇರುತ್ತದೆ. ನೀವು Annabhagya DBT Status Check ಮಾಡಿಕೊಂಡು ನಿಮ್ಮ ಖಾತೆಗೆ ಎಷ್ಟು ಹಣ ಬರಲಿದೆ ನೋಡಬಹುದು.


➨ Step 6 : ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಮುಖ್ಯಸ್ಥರ ಆಧಾರ್ ಕಾರ್ಡ್ ಲಿಂಕ್ ಇರುವ ಅವರ ಬ್ಯಾಂಕ್ ಖಾತೆಗೆ ಸರ್ಕಾರ ಹಣ ವರ್ಗಾವಣೆ ಮಾಡಿರುವ ಮಾಹಿತಿ ಈ ಕೆಳಗಿನಂತೆ ಲಭ್ಯವಾಗುತ್ತದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು