ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ, ಸಂಪೂರ್ಣ ವಿವರ ಲಭ್ಯ :
ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡಲಾಗುವ "ಗೃಹಲಕ್ಷ್ಮಿ" ಯೋಜನೆಯ ಫಲಾನುಭವಾಗಿಗಳಿಗೆ ಕ್ಯೂ ಆರ್ ಕೋಡ್ ಇರುವ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ರಾಜೀವ ಗಾಂಧಿ, ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಗುಲಾಬಿ ವರ್ಣದ ಕಾರ್ಡ್ ಪ್ರದರ್ಶಿಸಿ ಮಾತನಾಡಿದ ಅವರು, ಈ ಸ್ಮಾರ್ಟ್ ಕಾರ್ಡ್ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ತಮ್ಮ ಭಾವಚಿತ್ರ ಇರಲಿದೆ. ಜೊತೆಗೆ ರೂ 2000 ಎಂದು ಬರೆದಿರಲಿದೆ. ಹಿಂಭಾಗದಲ್ಲಿ ಫಲಾನುಭವಿ ಮಹಿಳೆಯ ಭಾವಚಿತ್ರ ಹಾಗೂ ಕ್ಯೂ ಆರ್ ಕೋಡ್ ಇರಲಿದೆ. ಇದನ್ನು ಸ್ಕ್ಯಾನ್ ಮಾಡಿದರೆ ಫಲಾನುಭವಿಯ ಸಂಪೂರ್ಣ ವಿವರ ಯಾವಾಗ ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿಯು ಲಭ್ಯವಾಗಲಿದೆ ಎಂದು ವಿವರಿಸಿದರು.
"ಶಕ್ತಿ" ಗೂ ಸ್ಮಾರ್ಟ್ ಕಾರ್ಡ್ !
'ಶಕ್ತಿ' ಯೋಜನೆಯಡಿಯೂ ಗೃಹಲಕ್ಷ್ಮಿಯ ಸ್ಮಾರ್ಟ್ ಕಾರ್ಡ್ ಮಾಡಲಾಗುತ್ತಿದೆ. ಇದನ್ನು ಸ್ವೈಪ್ ಮಾಡಿ, ಹತ್ತಬೇಕಾಗುತ್ತದೆ. ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಲು ಈ ವ್ಯವಸ್ಥೆ ಅನುಕೂಲವಾಗಲಿದೆ. ಜೊತೆಗೆ ಸುಳ್ಳು ಮಾಹಿತಿ ರವಾನೆ ಆಗುವುದಕ್ಕೆ ತಡೆ ಬೀಳಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
Tags
Govt.scheme