ಆತ್ಮೀಯ ವೀಕ್ಷಕರೇ ನಿಮಗೆಲ್ಲ ಒಂದು ಸಂತಸದ ಸುದ್ಧಿ. ಕರ್ನಾಟಕ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದ್ದೂ, ಅದನ್ನು ಈಗ ನಿಮ್ಮ ಮೊಬೈಲ್ ನಲ್ಲೆ ನೋಡಲು ಅವಕಾಶ ಮಾಡಿಕೊಡಲಾಗಿದೆ. ಹೇಗೆ ಎಂಬುದು ಇವತ್ತಿನ ಈ ಲೇಖನದ ಮುಖಾಂತರ ತಿಳಿಸಲಾಗಿದೆ.
ಈಗಾಗಲೇ ಶೇ 80 ರಷ್ಟು ಅರ್ಜಿ ಸಲ್ಲಿಕೆ ಸಂಪೂರ್ಣ :
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡು ಇದುವರೆಗೂ ರಾಜ್ಯದ ಶೇಕಡಾ 75 ರಿಂದ 80 ರಷ್ಟು ಪ್ರತಿಶತ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈಗಲೂ ಕೂಡ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿದ್ದು, ತಾಂತ್ರಿಕ ದೋಷದಿಂದ ಇನ್ನೂ ಕೆಲವರು ಅರ್ಜಿ ಸಲ್ಲಿಸದೆ ಇರುವವರು ಅರ್ಜಿ ಸಲ್ಲಿಸಬಹುದು. ಈ ಕಾರಣಕ್ಕಾಗಿ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಲಾಗಿಲ್ಲ.
ಇದೆ ತಿಂಗಳ ಆಗಸ್ಟ್ 31ನೇ ತಾರೀಖಿನಂದು ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಬಿಡುಗಡೆ ಮಾಡುವುದಾಗಿ ಮಾನ್ಯ ಸಿದ್ಧರಾಮಯ್ಯನವರು ತಿಳಿಸಿದ್ದು, ಅದರ ಫಲಾನುಭವಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಗೃಹಲಕ್ಷ್ಮಿ ಲಿಸ್ಟ್ ಪಡೆಯುವುದು ಹೇಗೆ?
ಗೃಹಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಈ ಕೆಳಗಿನ ಮಾಹಿತಿಯೊಂದಿಗೆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದೀಯ ಇಲ್ಲವ ಎಂದು ತಿಳಿಯಬಹುದು.
ನೀವು ಕೊಟ್ಟಿರುವ ಜಾಲತಾಣದಲ್ಲಿ ಲಿಂಕ್ ಮುಖಾಂತರ ಅಧಿಕೃತ ವೆಬ್ ಸೈಟ್ ಭೇಟಿ ನೀಡಬೇಕು.
https://ahara.kar.nic.in/home/eservices ಅಲ್ಲಿ ನಿಮಗೆ ಈ ಸರ್ವಿಸ್ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಮೂರೂ ಗೆರೆಯ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಮತ್ತೊಂದು ಪುಟ ತೆರೆಯುತ್ತದೆ.
ಅಲ್ಲಿ ನಿಮಗೆ ಈ ರೇಷನ್ ಕಾರ್ಡ್ ಮತ್ತು ಶೋ ವಿಲೇಜ್ ಲಿಸ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಮುಂದೆ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಮತ್ತು ನಿಮ್ಮ ಗ್ರಾಮದ ಮಾಹಿತಿಯನ್ನು ತುಂಬುವ ಖಾನೆಗಳು ಕಾಣಿಸುತ್ತದೆ.
ಎಲ್ಲಾ ಮಾಹಿತಿಯನ್ನು ತುಂಬಿ ಗೋ ಎಂದು ಕ್ಲಿಕ್ ಮಾಡಿ, ನಿಮಗೆ ಗೃಹಲಕ್ಷ್ಮಿ ಫಲಾನುಭವಿ ಲಿಸ್ಟ್ ದೊರೆಯುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ.
Tags
Govt.scheme