ಮಂಗಳ ಗ್ರಹದ ಮೇಲೆ 54 ನೇ ಬಾರಿ ಹೆಲಿಕಾಪ್ಟರ್ ಹಾರಿಸಿದ ನಾಸಾ !!

ಮಂಗಳ ಗ್ರಹದ ಮೇಲೆ 54 ನೇ ಬಾರಿ ಹೆಲಿಕಾಪ್ಟರ್ ಹಾರಿಸಿದ ನಾಸಾ !!



            

   

ಬನ್ನಿ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಮಂಗಳ ಗ್ರಹದ ಮೇಲೆ ಹೆಲಿಕಾಪ್ಟರ್ ಹಾರಿಸಿದ ನಾಸಾದ ಬಗ್ಗೆ .....

         ಭಾರತ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ ಆದ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಅಮೇರಿಕಾದ ನ್ಯಾಷನಲ್ ಏರೋನೋಟಿಕಲ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಕೂಡ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ. ದಾಖಲೆಯ 54 ನೇ ಬಾರಿಗೆ ಮಂಗಳ ಗ್ರಹದ ಮೇಲೆ ನಾಸಾದ ಹೆಲಿಕಾಪ್ಟರ್ ಹಾರಾಟ ನಡೆಸಿದೆ.

whatss

ನಾಸಾದ ಕಾರಿನ ಗಾತ್ರದ ಪಾರ್ಸೆವೆರನ್ಸ್ ರೋವರ್ ಇತ್ತೀಚಿಗೆ ಆಗಸ್ಟ್ ಆರಂಭದಲ್ಲಿ ಹೆಲಿಕಾಪ್ಟರ್ ನ 54 ನೇ ಹಾರಾಟದ ತುಣುಕನ್ನು ಸೆರೆಹಿಡಿದೆ. ಐಐಎಚ್ ಹಾರಾಟದ ವೇಳೆ ಕೊಂಚ ಸಮಸ್ಯೆಯನ್ನು ಎದುರಿಸಿದ ಕಾರಣ ತಕ್ಷಣವೇ ಅದು ಕೆಳಗೆ ಇಳಿಸಿದೆ. ತನ್ನ ನ್ಯಾವಿಗೇಷನ್ ಸಿಸ್ಟಮ್ ಇನ್ನು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ ನಾಸಾ ಇಂಥ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡುತ್ತಲೇ ಇರುತ್ತದೆ. 
ಕೇವಲ 46 ಸೆಕೆಂಡ್ ನ ವಿಡಿಯೋ ಇದಾಗಿದ್ದು, ಇದರಲ್ಲಿ ಸೆಕೆಂಡ್ ಮಾತ್ರವೇ ಹೆಲಿಕಾಪ್ಟರ್ ತನ್ನ ರೋಟರಿ ಗಳನ್ನು ಬಳಸಿಕೊಂಡು ಹಾರಾಟ ನಡೆಸಿದೆ. ವಿಡಿಯೋ ಆರಂಭವಾದ 15 ಸೆಕೆಂಡ್ ಬಳಿಕ ಐಐಎಚ್ ಟೇಕ್ ಆಫ್ ಆಗಿ 16 ಫೀಟ್ ಎತ್ತರಕ್ಕೆ ಹಾರುತ್ತದೆ. ಬಳಿಕ ವಾಪಾಸ್ ಮಂಗಳ ಗ್ರಹಕ್ಕೆ ಇಳಿಯುತ್ತದೆ.

ಭೂಮಿಯಿಂದ ಅಂದಾಜು 4 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಚಂದ್ರನಲ್ಲಿ ವಿಕ್ರಂ ಲ್ಯಾಂಡರ್ ಅನ್ನು ಇಳಿಸುವ ಮೂಲಕ, ಚಂದ್ರನ ದಕ್ಷಿಣ ಶೃವದಲ್ಲಿ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶ ಎನ್ನುವ ಕೀರ್ತಿಗೆ ಭಾರತ ಭಾಜನವಾಗಿದೆ. ಇದರ ನಡುವೆ ಅಮೇರಿಕಾದ ನಾಸಾ ಅಂದರೆ ನ್ಯಾಷನಲ್ ಏರೊನಾಟಿಕಲ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಮಂಗಳ ಗ್ರಹದ ಮೇಲೆ ಮತ್ತೊಂದು ಸಾಧನೆ ಮಾಡಿದೆ. ಹೌದು ಭೂಮಿಯಿಂದ 225 ಮಿಲಿಯನ್ ಕಿಲೋಮೀಟರು ದೂರದಲ್ಲಿರುವ ಮಂಗಳ ಗ್ರಹದಲ್ಲಿ ನಾಸಾ ದಾಖಲೆಯ ೫೪ನೇ ಬಾರಿಗೆ ತನ್ನ ಎಕ್ಸ್ ಪಿರಿಮೆಂಟಲ್ ಇಂಜೆಗ್ನುಟಿ ಹೆಲಿಕಾಪ್ಟರ್ ನ ಹಾರಾಟ ನಡೆಸಿದೆ. ನಿಮಗೆ ನೆನಪಿರಲಿ ಮಂಗಳ ಗ್ರಹದಲ್ಲಿ ಹಾರಾಟ  ಸುಲಭದ ಮಾತಲ್ಲ,    
  

whatss

                      ಏಕೆಂದರೆ  ಮೇಲ್ಮೈ ಗಾಳಿಯ ಸಾಂದ್ರತೆಯು ಭೂಮಿಯ ಶೇಕಡಾ ಒಂದು ಶೇಕಡಾ ಮಾತ್ರ ಹಾರಲು ಅಗತ್ಯವಾದ ಲಿಫ್ಟ್ ಅನ್ನು ಉತ್ಪಾದಿಸಲು ಹೆಲಿಕಾಪ್ಟರ್ ಗೆ ಇಲ್ಲಿ ಕಷ್ಟವಾಗುತ್ತದೆ. ಆದರೆ ನಾಸಾದ ಐಐಎಚ್ ಅನ್ನು ಹೇಗೆ ಅಭಿವೃದ್ಧಿ ಮಾಡಿದೆ ಎಂದರೆ, ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಅದರ ರೋಟರ್ ಗಳ ಮೂಲಕ ಲಿಫ್ಟ್ ಆಗುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ತನ್ನ ನಾಲ್ಕು ಅಡಿಯ ರೆಕ್ಕೆಗಳನ್ನು ಬಳಸಿಕೊಂಡು ಈಗಾಗಲೇ ೫೦ ಕ್ಕೂ ಅಧಿಕ ಬಾರಿ ಐಐಎಚ್ ಹಾರಾಟ ನಡೆಸಿದೆ. ನಾಸಾ ಇದನ್ನು ಮಂಗಳ ಗ್ರಹಕ್ಕೆ ಕಳಿಸಿದಾಗ ಗರಿಷ್ಟ ಎಂದರೆ ಐದು ಹಾರಾಟ ಮಾಡಲಿದೆ ಎಂದು ಅಂದಾಜು ಮಾಡಿತ್ತು.
 ಪಾರ್ಸೆವೆರೆನ್ಸ್ ರೋವರ್ 180 ಅಡಿ ದೂರದಿಂದ ಈ ಸ್ಪಷ್ಟ ದೃಶ್ಯವನ್ನು ಸೆರೆಹಿಡಿದಿದೆ. ಅದರ ವಿಶ್ವಾಸಾರ್ಹ ಸೈಡ್ ಕಿಕ್, ಜಾಣ್ಮೆಯ ಜೊತೆಗೆ, ರೋವರ್ ಬಯೊಸಿಗ್ನೇಚರ್ ಗಳಿಗಾಗಿ ಬಂಡೆಗಳು ಮತ್ತು ಮಣ್ಣನ್ನು ಹುಡುಕುತ್ತಿದೆ.-"ಒಂದು ವಸ್ತು, ವಸ್ತು, ಮತ್ತು ಅದರ ಮೂಲಕ್ಕೆ ನಿರ್ದಿಷ್ಟವಾಗಿ ಜೈವಿಕ ಏಜೆಂಟ್ ಅಗತ್ಯವಿರುತ್ತದೆ". ಎಂದು ಬಾಹ್ಯಾಕಾಶ ಸಂಸ್ಥೆ ವಿವರಿಸಿದೆ. "ಪ್ರಾಚೀನ ಸೂಕ್ಷ್ಮ ಜೀವಿಯ ಜೀವನದ ಚಿಹ್ನೆಗಳ ಹುಡುಕಾಟ ಸೇರಿದಂತೆ ಮಂಗಳ ಗ್ರಹದ ಮೇಲೆ ಪಾರ್ಸೆವೆರೆನ್ಸ್ ಕಾರ್ಯಾಚರಣೆಯ ಪ್ರಮುಖ ಉದ್ದೇಶವೆಂದರೆ ಖಗೋಳ ಜೀವಶಾಸ್ತ್ರ " ಎಂದು ನಾಸಾ ತಿಳಿಸಿದೆ.

ಮಂಗಳ ಗ್ರಹದಲ್ಲಿ ಜೀವವು ಅಸ್ತಿತ್ವದಲ್ಲಿದೆ ಎಂಬುದಕ್ಕೆ ಇಲ್ಲಿಯವರೆಗೂ ಹಸೂನ್ಯ ಪುರಾವೆಗಳು ಸಿಕ್ಕಿವೆ. ಆದರೆ ಪ್ರಾಚೀನ ಜೀವನವು ಮಂಗಳದ ಗುಹೆಗಳಲ್ಲಿ ಅಸ್ತಿತ್ವದಲ್ಲಿದ್ದಲಿರಬಹುದು ಅಥವಾ ಬಹುಶಃ ಮಣ್ಣಿನಲ್ಲಿ ಹೆಚ್ಚು ಆಳವಾಗಿರಬಹುದು. ಮತ್ತು ಮಂಗಳ ಗ್ರಹದ ಆಚೆಗೆ, ಆಳವಾದ ಬಾಹ್ಯಾಕಾಶ ದಲ್ಲಿ ಇದು ನೆಲೆಸಿರಬಹುದು ಎಂದು ಅಂದಾಜಿಸಲಾಗಿದೆ.

    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು