ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ ಅವಧಿ ವಿಸ್ತರಣೆ..!

ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ ಅವಧಿ ವಿಸ್ತರಣೆ..!





             ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ವರ್ಗಾಯಿಸಬೇಕೇ? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್. ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಕುಟುಂಬದ ಯಜಮಾನಿಯ ಸ್ಥಾನ ಬದಲಾಯಿಸುವ ಮಾಹಿತಿ ಈ ಲೇಖನದಲ್ಲಿ.

ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯಲ್ಲಿ ತಿದ್ದುಪಡಿ ಅಥವಾ ಸೇರ್ಪಡೆಗೆ ಅವಕಾಶ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಕುಟುಂಬದ ಯಜಮಾನಿಯ ಸ್ಥಾನ ಬದಲಾಯಿಸುವ ಅವಶ್ಯಕತೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು.

ಯಾವ ಸಂದರ್ಭಗಳಲ್ಲಿ ಬದಲಾಯಿಸಬಹುದು...?

1.  ಯಜಮಾನಿಯ ಸ್ಥಾನದಲ್ಲಿರುವ ಮಹಿಳೆ ನಿಧನರಾಗಿದ್ದರೆ,
2.  ಪಡಿತರ ಚೀಟಿಯಲ್ಲಿ ಪುರುಷ ಕುಟುಂಬದ ಮುಖ್ಯಸ್ಥನಾಗಿದ್ದರೆ,
3.  ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಅತ್ತೆಗೆ ಅರ್ಗಾಯಿಸಬೇಕಾಗಿದ್ದರೆ,

ಸೂಚನೆಗಳು:

✔ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ ನೋಂದಾಯಿಸದೆ ಇರುವವರು ಯಜಮಾನಿಯ ಬದಲಾವಣೆ ಮಾಡಿಕೊಳ್ಳಬಹುದು.

 ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ನೋಂದಾಯಿಸಿ ಯಜಮಾನಿಯ ಬದಲಾವಣೆಗೆ ಅರ್ಜಿ ಸಲ್ಲಿಸಿದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿ ಯೋಜನೆಯ ಲಾಭ ತಡೆಹಿಡಿಯಲಾಗುತ್ತದೆ.

ತಿದ್ದುಪಡಿ ದಿನಾಂಕ ವಿಸ್ತರಣೆ:

ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಸೇರ್ಪಡೆ ಮಾಡಲು ಸೋಮವಾರದವರೆಗೆ ಮಾತ್ರ ಅವಕಾಶ ನೀಡಿದ್ದರು ಆದರೆ ಇವಾಗ ಸಾರ್ವಜನಿಕರ ಒತ್ತಾಯದ ಮೇರೆಗೆ ತಿದ್ದುಪಡಿ, ಸೇರ್ಪಡೆ ಮಾಡುವ ಅವಧಿಯನ್ನು ಮತ್ತಷ್ಟು ದಿನಗಳವರೆಗೆ ವಿಸ್ತರಣೆ ಮಾಡಲಾಗುವುದು. ಆನ್ಲೈನ್ ಅಥವಾ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬಡಾವಣೆಯ ಸೇವೆ ಪಡೆಯಬಹುದು," ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಾರ್ವಜನಿಕ ವಿತರಣೆ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರಕುಮಾರ್ ಗಂಗ್ವಾರ್ ಅವರು ಮಾಹಿತಿ ನೀಡಿದ್ದಾರೆ.
whatss

                ಹಾಲಿಯಿರುವ ಪಡಿತರ ಚೀಟಿಯಲ್ಲಿನ ಯಾವುದೇ ಮಾಹಿತಿ ಬದಲಾವಣೆ ಹಾಗೂ ಸದಸ್ಯರ ಸೇರ್ಪಡೆಗಾಗಿ ಈ ಕೆಳಗಿನ ಕಾರ್ಯವಿಧಾನವನ್ನು ಅನುಸರಿಸಬೇಕು.

★ಹತ್ತಿರದ ಯಾವುದೇ ಬಯೋ-ಫೋಟೋ (ಗ್ರಾಮ ಒನ್,ಕರ್ನಾಟಕ ಒನ್,ಬೆಂಗಳೂರು ಒನ್, CSC ಕೇಂದ್ರ ಅಥವಾ ಇತರೆ ಮಾನ್ಯತೆ ಪಡೆದ ಕೇಂದ್ರ) ಸೇವಾ ಕೇಂದ್ರಕ್ಕೆ ಹೋಗಿ ನಿಮಮ್ ರೇಷನ್ ಕಾರ್ಡ್ ನ ಸ್ಥಿತಿಯನ್ನು ಪರಿಶೀಲಿಸಿ. (ಗ್ರಾಮಾಂತರ ಪ್ರದೇಶದವರು ಅವರ ಗ್ರಾಮ ಪಂಚಾಯತಿ ಕಚೇರಿಗೆ ಹೋಗುವುದು).

ನಿಮ್ಮ ಪಡಿತರ ಚೀಟಿ ಚಾಲ್ತಿಯಲ್ಲಿದ್ದಲ್ಲಿ ತಮಗೆ ಈ ಕೆಳಗಿನ ಯಾವುದೇ ಬದಲಾವಣೆಗೆ ಅವಕಾಶವಿದೆ.

★ವಿಳಾಸ ಬದಲಾವಣೆ, ಸದಸ್ಯರ ಹೆಸರು ಸೇರ್ಪಡೆ/ಬೇರ್ಪಡೆ, ಫೋಟೋ ಮತ್ತು ಬೈಯೋಮ್ಯಾಟ್ರಿಕ್ ಸೇರಿಸುವುದು, ಸದಸ್ಯರ ವಿವರದಲ್ಲಿ ಯಾವುದೇ ತಿದ್ದುಪಡಿ ಇವುಗಳ ಅಗತ್ಯವಿದ್ದಲ್ಲಿ 

★ತಾವು ಈಗ ವಾಸಿಸುವ ಮನೆಯ ಇತ್ತೀಚಿನ ವಿದ್ಯುತ್ ಬಿಲ್ ಮತ್ತು ಅಗತ್ಯ ಬದಲಾವಣೆಗಾಗಿ ಹೋಲಿಕೆ ದಾಖಲೆಗಳೊಂದಿಗೆ ಸೇವಾ ಕೇಂದ್ರದಲ್ಲಿಯೇ ಬದಲಾವಣೆಗಳನ್ನು ಮಾಡಿಸಿಕೊಂಡು ಕಂಪ್ಯೂಟರ್ ಮುದ್ರಿತ ಸ್ವೀಕೃತಿಯನ್ನು ಪಡೆಯಿರಿ.

ಈ ರೀತಿ ಬದಲಾಯಿಸುವಾಗ ನಿಮ್ಮ ಪಡಿತರ ಚೀಟಿ ತಾತ್ಕಾಲಿಕವೇ ಅಥವಾ "ಖಾಯಂ"ಪಡಿತರ ಚೀಟಿಯೇ ಎಂದು ತಿಳಿದುಕೊಳ್ಳಿ.
ಖಾಯಂ ಪಡಿತರ ಚೀಟಿಯಾಗಿದ್ದಲ್ಲಿ ತಿದ್ದುಪಡಿಗಳ ನಂತರ ಸೇವಾ ಕೇಂದ್ರದಲ್ಲಿ ಪಡೆದ ಸ್ವೀಕೃತಿ ಮತ್ತು ಹಾಲಿ ಪಡಿತರ ಚೀಟಿಯೊಂದಿಗೆ ಆಹಾರ ಕಚೇರಿಗೆ ಕುಟುಂಬದ ಮುಖ್ಯಸ್ಥರು ಹೋಗಿ ಪರಿಷ್ಕೃತ ಪಡಿತರ ಚೀಟಿ ಪಡೆಯಿರಿ.

ತಾತ್ಕಾಲಿಕ ಪಡಿತರ ಚೀಟಿಯಾಗಿದ್ದಲ್ಲಿ, ಆಹಾರ ಕಚೇರಿಯಿಂದಲೇ ಪಡಿತರ ಚೀಟಿ ಪಡೆದುಕೊಳ್ಳಲು ತಿಳಿಸಿ ನಿಮಗೆ SMS ಮೂಲಕ ಸಂದೇಶ ಬರುವವರೆಗೂ ಕಾರ್ಯುವುದು.

★ತಾತ್ಕಾಲಿಕ ಪಡಿತರ ಚೀಟಿ ಹೊಂದಿರುವವರು ಖಾಯಂ ಪಡಿತರ ಚೀಟಿ ಪಡೆಯಲು SMS ಸಂದೇಶ ಬಂದ ನಂತರ ಕುಟುಂಬದ ಮುಖ್ಯಸ್ಥರು ಮಾತ್ರ ಈಗ ನಿಮ್ಮ ಬಳಿ ಇರುವ ಪಡಿತರ ಚೀಟಿಯೊಂದಿಗೆ ಕಚೇರಿಗೆ ಹೋಗಿ, ನಿಮಮ್ ಬಯೋಮೆಟ್ರಿಕ್ ಹೊಂದಾಣಿಕೆ ಮಾಡಿ, ಈಗಿನ ಪಡಿತರ ಚೀಟಿ ವಾಪಸ್ಸು ನೀಡಿ, ಹೊಸ ಪಡಿತರ ಚೀಟಿ ಶುಲ್ಕ 20 ರೂ ಪಾವತಿಸಿ ಹೊಸ ಪರಿಷ್ಕೃತ ಪಡಿತರ ಚೀಟಿ ಪಡೆಯುವಿರಿ.

ನಿಮ್ಮ ಪಡಿತರ ಚೀಟಿ ರದ್ದಾಗಿದ್ದಲ್ಲಿ, ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ನೀವು ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ಅರ್ಜಿ ಸಲ್ಲಿಸಬೇಕು.

ನಿಮ್ಮ ಕುಟುಂಬವು ಈಗಿರುವ ತಾಲೂಕು / ವಲಯದಿಂದ ಬೇರೆ ತಾಲೂಕು/ವಲಯಕ್ಕೆ ವರ್ಗಾವಣೆಯಾಗಬೇಕಿದ್ದಲ್ಲಿ ಪಡಿತರ ಚೀಟಿಯನ್ನು ವರ್ಗಾಯಿಸುವ ವಿಧಾನ :



ನಿಮ್ಮದು ಹಾಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಯಾಗಿರಬೇಕು.

★ನಿಮ್ಮ ಪಡಿತರ ಚೀಟಿ ವಿತರಣೆಯಾಗಿರುವ ಆಹಾರ ಕಚೇರಿಗೆ ಭೇಟಿ ನೀಡಿ, ಹಾಲಿ ಪಡಿತರ ಚೀಟಿಯೊಂದಿಗೆ ವರ್ಗಾವಣೆಗಾಗಿ ಕೋರಿಕೆ ಸಲ್ಲಿಸಿ, ಆನ್ಲೈನ್ ವರ್ಗಾವಣೆ ಸ್ಥಳದಲ್ಲೇ ಮಾಡಿಸಿ, ಸರೆಂಡರ್ ಸರ್ಟಿಫಿಕೇಟ್ ಪಡೆಯಿರಿ.

★ಸರೆಂಡರ್ ಸರ್ಟಿಫಿಕೇಟ್ ನೊಂದಿಗೆ ನೀವೀಗ ವಾಸವಿರುವ ಹೊಸ ತಾಲೂಕು / ವಲಯ ವ್ಯಾಪ್ತಿಯು ಯಾವುದೇ "ಸೇವಾಕೇಂದ್ರ"ಕ್ಕೆ ಹೋಗಿ, ನಿಮ್ಮ ಮೊಬೈಲ್ ನಂಬರ್ ಮನೆಯ ವಿದ್ಯುತ್ ಆರ್ ಆರ್ ನಂಬರ್ ಅಡಿಗ ಅನಿಲ ವಿವರಗಳೊಂದಿಗೆ ನಿಮ್ಮ ರೇಷನ್ ಕಾರ್ಡ್ ವಿವರ  ತೆರೆದು,ಅದರಲ್ಲಿ ಈಗಿನ ವಿಳಾಸ ಕುಟುಂಬದ ಸದಸ್ಯರ ವಿವರ ಫೋಟೋ, ಬಯೋಮೆಟ್ರಿಕ್ ಇತ್ಯಾದಿ ವಿವರಗಳನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಮಾಡಿಸಿ ಆನ್ಲೈನ್ ಅಪ್ಲೋಡ್ ಮಾಡಿಸಿ. ಹಾಗೂ ಈ ಬಗ್ಗೆ ಕಂಪ್ಯೂಟರ್ ಮುದ್ರಿತ ಸ್ವೀಕೃತಿ ಪಡೆಯಿರಿ 

ಸ್ವೀಕೃತಿಯೊಂದಿಗೆ ಸಂಬಂಧಪಟ್ಟ ಆಹಾರ ಕಚೇರಿಗೆ ಭೇಟಿ ನೀಡಿ, ಹೊಸ ರೇಷನ್ ಕಾರ್ಡ್ ಪಡೆಯಿರಿ.

ವಿಶೇಷ ಸೂಚನೆ : ಹೊರ ರಾಜ್ಯದಿಂದ ಸರಂಡರ್ ಅಥವಾ ಡೀಲಿಷನ್ ಪತ್ರ ಪಡೆದವರು ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ಅರ್ಜಿಯನ್ನೇ ಸಲ್ಲಿಸಬೇಕು.

★ಪಡಿತರ ಚೀಟಿದಾರರ ಬಳಿ ಬರುವುದು ತಾತ್ಕಾಲಿಕ ಅಪೀಡಿತರ ಚೀಟಿ ಆಗಿದ್ದಲ್ಲಿ, ಅದನ್ನು ಖಾಯಂಗೊಳಿಸುವ ನಂತರವೇ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು