ರಾಜ್ಯ ಸರ್ಕಾರದ ಬಹು ಮುಖ್ಯವಾದ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈಗಾಗಲೇ ಈ ಯೋಜನೆಗೆ ಹಲವಾರು ಮಹಿಯರು ಅರ್ಜಿ ಸಲ್ಲಿಸಿದ್ದಾರೆ, ಪ್ರತಿ ಮಹಿಳೆಯ ಖಾತೆಗೆ ಎರಡು ಸಾವಿರ ರೂಪಾಯಿ ಜಮೆಯಾಗಲಿದ್ದು, ಆಗಸ್ಟ್ 27ರಂದು ಚಾಲನೆ ಸಿಗಲಿದೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಮನೆಯ ಯಜಮಾನಿ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಮಾಡುವ ಕಾಂಗ್ರೆಸ್ ಸರ್ಕಾರದ ಮುಖ್ಯ ಯೋಜನೆಯಾದ ಗೃಹಲಕ್ಷಿಗೆ ಅರ್ಜಿ ಸಲ್ಲಿಕೆ ಜುಲೈ 19ರಿಂದ ಆರಂಭವಾಗಿದ್ದು ಇನ್ನು ಕೊನೆಯ ದಿನ ಯಾವಾಗ ಎಂದು ಮಾಹಿತಿ ನೀಡಿಲ್ಲ.
ಬೆಳಗಾವಿಯಲ್ಲಿ ಚಾಲನೆ :
ಬೆಳಗಾವಿಯಲ್ಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದ್ದು, ಆಗಸ್ಟ್ 27ರಂದು ಚಾಲನೆ ಸಿಗಲಿದೆ, ಈ ಮೂಲಕ ಆಗಸ್ಟ್ ನಲ್ಲಿಯೇ ಮಹಿಳೆಯರಿಗೆ ಸಿಹಿ ಸುದ್ಧಿ ಸಿಕ್ಕಿದಂತಾಗಿದೆ, ಆಗಸ್ಟ್ 20ರಂದು ಗೃಹಲಕ್ಷ್ಮಿ ಯೋಜನೆ ನೀಡುವುದಾಗಿ ಭರವಸೆ ನೀಡಿತ್ತು ಆದ್ರೆ ಆಗಸ್ಟ್ 27ರಂದು ರಾಜ್ಯದ 11 ಸಾವಿರ ಕಡೆಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಆಗಸ್ಟ್ ತಿಂಗಳ ಹಣ ಖಾತೆಗೆ ಜಮೆ ಆಗಲಿದೆ ಎಂದು ಡಿ ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ನೇಮಕ :
ಗ್ರಾಮ ಪಂಚಾಯತಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಪ್ರತಿ ಭಾಗದಲ್ಲಿ ಸಂಭ್ರಮದಿಂದ ಆಚರಣೆ ಮಾಡುವಂತೆ ಸೂಚನೆ ನೀಡಿದ್ದೇವೆ, ಈ ಯೋಜನೆಗೆ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಇಲ್ಲ, ಕೆಲವರ ಬಳಿ ಪಡಿತರ ಕಾರ್ಡ್ ಇಲ್ಲ. ಅಂತಹವರು ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಅವರು ಕಾರ್ಡ್ ಆದ ಬಳಿಕ ಅರ್ಜಿ ಸಲ್ಲಿಸಬಹುದು.
ಕೂಡಲೇ ಅರ್ಜಿ ಸಲ್ಲಿಸಿ:
ಬಾಕಿ ಇದ್ದ ಮಹಿಳೆಯರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ರೇಷನ್ ಕಾರ್ಡ್ ನಲ್ಲಿ ಮೊದಲ ಹೆಸರಿದ್ದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
ಎಷ್ಟು ಮಹಿಳೆಯರು ನೋಂದಣಿ :
ಈಗಾಗಲೇ ಈ ಯೋಜನೆಗೆ ಹಲವಾರು ಮಹಿಳೆಯರು ಉತ್ತಮ ಪ್ರತಿಕ್ರಿಯೆ ಮಾಡಿದ್ದಾರೆ, ಈಗಾಗಲೇ 1 ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಅನ್ನು ನೋಂದಾಯಿಸಿಕೊಂಡಿದ್ದಾರೆ, ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಇನ್ನು ಕೂಡ ನಡೆಯುತ್ತಿದೆ. ಮಹಿಳೆಯರು ಯಾವುದೇ ಹಣ ನೀಡದೆ ಅರ್ಜಿ ಹಾಕಿಸಿಕೊಳ್ಳಬಹುದಾಗಿದೆ.
Tags
Govt.scheme