ವಿದ್ಯಾರ್ಥಿಗಳಿಗೆ 20,000 ರೂ ಪ್ರೋತ್ಸಾಹಧನ ಸಹಾಯಕ್ಕಾಗಿ ಅರ್ಜಿ ಅಹ್ವಾನ!!

ವಿದ್ಯಾರ್ಥಿಗಳಿಗೆ 20,000 ರೂ ಪ್ರೋತ್ಸಾಹಧನ ಸಹಾಯಕ್ಕಾಗಿ ಅರ್ಜಿ ಅಹ್ವಾನ!!



ಅರ್ಜಿ  ಸಲ್ಲಿಸಲು ಬೇಕಾದ ಅರ್ಹತೆ ಹಾಗೂ ದಾಖಲಾತಿಗಳು ಹೀಗಿವೆ:

 

ನಮಸ್ಕಾರ ಸ್ನೇಹಿತರೆ....

                 ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ನೆರವಾಗಲು ಕರ್ನಾಟಕ ರಾಜ್ಯ ಸರ್ಕಾರ ನೀಡುವ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯದ ಮಾಹಿತಿಯನು ಈ ಲೇಖನದಲ್ಲಿ ನೀಡಲಾಗಿದೆ. 

ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗೆ ಯಾರು ಅರ್ಹರು? ಅರ್ಜಿ ಸಲ್ಲಿಕೆ ವಿಧಾನ, ಎಷ್ಟು ಪ್ರೋತ್ಸಾಹಧನ? ಈ ಕುರಿತು ಮಾಹಿತಿ ಇಲ್ಲಿದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳಿಂದ (ಪ್ರೌಢ ಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೆ ಹಾಗೂ ವೈದ್ಯಕೀಯ/ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ) 2023-24 ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನ ಸಹಾಯಕ್ಕಾಗಿ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಪ್ರೋತ್ಸಾಹ ಧನ ಮೊತ್ತ 

ಪ್ರೌಢಶಾಲೆಯ 8 ರಿಂದ 10 ನೇ ತರಗತಿಯವರಿಗಿನ ವಿದ್ಯಾರ್ಥಿಗಳ್ಗಿಯೇ 6,000 ರೂ ಪ್ರೋತ್ಸಾಹಧನ 

ಪಿಯುಸಿ, ಡಿಪ್ಲೋಮ, ಐಟಿಐ, ಟಿಸಿಹೆಚ್ ಇತ್ಯಾದಿ ವಿದ್ಯಾರ್ಥಿಗಳಿಗೆ 8,000 ರೂ 

ಪದವಿ ತರಗತಿ ವಿದ್ಯಾರ್ಥಿಗಳಿಗೆ 10,000 ರೂ 

ಸ್ನಾತಕೋತ್ತರ ಪದವಿ ತರಗತಿ ವಿದ್ಯಾರ್ಥಿಗಳಿಗೆ 12,000 ರೂ 

ಇಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ 20,000 ರೂ ಗಳ ಪ್ರೋತ್ಸಾಹಧನ.

whatss


ಅರ್ಹತೆ :

🔯  ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರ ಮಕ್ಕಳು ಅರ್ಜಿ ಸಲ್ಲಿಸಬಹುದು.

🔯  ಹಿಂದಿನ ವರ್ಷದಲ್ಲಿ ಸಾಮಾನ್ಯ ವರ್ಗ ವಿದ್ಯಾರ್ಥಿಯು ಶೇ 50% ಅಂಕ ಹಾಗೂ 
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಯು 45% ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು.

🔯  ಕಾರ್ಮಿಕ ಮಾಸಿಕ ವೇತನ ರೂ 35,000 ಮೀರಿರಬಾರದು.

🔯  ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/01/2024 ಆಗಿರುತ್ತದೆ.


 

ಅಧಿಕೃತ ವೆಬ್ ಸೈಟ್ ಲಿಂಕ್ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು