ಗೃಹಲಕ್ಷ್ಮೀ ಹಣ ಇನ್ನೂ ಜಮೆ ಆಗದವರಿಗೆ ಒಟ್ಟಿಗೆ ಬರಲಿದೆ ರೂಪಾಯಿ 4000/- ದಿನಾಂಕ ಫಿಕ್ಸ್....
ನಮಸ್ಕಾರ ಸ್ನೇಹಿತರೆ.....
ಬನ್ನಿ ಇವತ್ತಿನ ಲೇಖನದಲ್ಲಿ ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ಅದುವೇ ಕರ್ನಾಟಕ ರಾಜ್ಯದಾದ್ಯಂತ ಸಖತ್ ಸುದ್ಧಿ ಮಾಡಿದ್ದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇದುವರೆಗೂ ಯಾರಿಗೆಲ್ಲ ಖಾತೆಗೆ ಹಣ ಜಮೆ ಆಗಿಲ್ಲವೋ ಅವರಿಗೆ ಸಂತಸದ ಸುದ್ಧಿ. ೪೦೦೦ ಹಣ ಒಟ್ಟಿಗೆ ಜಮೆ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಅರೆ!! ನಿಮಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ವ ?
ನಿಮ ಅಕ್ಕಪಕ್ಕದ ಮನೆಯವರ ಖಾತೆಗೆಲ್ಲ 2000 ರೂ ಜಮೆ ಆಯ್ತಾ? ಆದರೆ ನಿಮ್ಮ ಖಾತೆಗೆ ಮಾತ್ರ ಹಣ ಬಂದಿಲ್ಲ ಅಂತ ಬೇಸರ ಆಗ್ತಿದ್ಯಾ? ಚಿಂತೆ ಮಾಡ್ಬೇಡಿ ಸ್ನೇಹಿತರೆ,,,, ಇದೀಗ ನಿಮ್ಮ ಖಾತೆಯಲ್ಲಿ ಎಲ್ಲವೂ ಸರಿಯಾಗಿದ್ದು ನಿಮ್ಮ ಅರ್ಜಿ ಕೂಡ ಸ್ವೀಕರವಾಗಿದ್ರೆ ಎರಡಲ್ಲ ಒಟ್ಟಿಗೆ ನಾಲ್ಕು ಸಾವಿರ ಹಣ ಒಟ್ಟಿಗೆ ಖಾತೆಗೆ ಜಮೆ ಆಗುತ್ತೆ!!!
ಹೌದು 2000 ಗಳನ್ನು ಉಚಿತವಾಗಿ ನೀಡುವ ಗೃಹಲಕ್ಷ್ಮಿ ಯೋಜನೆ ರಾಜ್ಯದಲ್ಲಿಸಾಕಷ್ಟು ಯಶಸ್ಸನ್ನು ಗಳಿಸಿದೆ. ಲಕ್ಷಾಂತರ ಜನರು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000 ರೂಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆದರೆ ದುರದೃಷ್ಟವಶಾತ್ ಇನ್ನೂ ಸಾಕಷ್ಟು ಜನರಿಗೆ ಹಣ ಬರುವುದಕ್ಕೆ ಇದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವಂತೆ ಅರ್ಜಿ ಸಲ್ಲಿಸಿರುವವರ ಪೈಕಿ ಶೇಕಡಾ 45% ರಷ್ಟು ಮಹಿಳೆಯರಿಗೆ ಇನ್ನೂ ಹಣ ವರ್ಗಾವಣೆ ಆಗಿಲ್ಲ.
ಇದಕ್ಕೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸಮಸ್ಯೆ ಅಥವಾ ಆಧಾರ್ ಕಾರ್ಡ್ ಸೀಡಿಂಗ್ ಸಮಸ್ಯೆ ಕಾರಣವಾಗಿದ್ದರೆ ಸರ್ಕಾರದ ಸರ್ವರ್ ಡೌನ್ ಆಗಿರುವುದು ಹಾಗೂ RBI ನಿಂದ ಹಂತ ಹಂತವಾಗಿ ಹಣ ಬಿಡುಗಡೆ ಆಗುತ್ತಿರುವುದು ಕೂಡ ಒಂದು ಕಾರಣ.
ಸರ್ಕಾರದ ಹೊಸ ದಿನಾಂಕ ಬಿಡುಗಡೆ......!
ಹೌದು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಲವರ ಖಾತೆಗೆ ಬರಲಿಲ್ಲ ಎನ್ನುವುದು ಸತ್ಯ. ಆದರೆ ಇದರ ಜೊತೆಗೆ ಸರ್ಕಾರ ಇನ್ನೊಂದು ಗುಡ್ ನ್ಯೂಸ್ ನೀಡಿದ್ದು ಮೊದಲಿನ ಕಂತಿನ ಹಣ ಬಿಡುಗಡೆಯಾಗುವ ಪ್ರಕ್ರಿಯೆ ಮುಂದುವರೆಯುತ್ತಿದೆ ಅದರ ಜೊತೆಗೆ ಎರಡನೇ ಕಂತು ಬಿಡುಗಡೆಯ ಬಗ್ಗೆಯೂ ಕೂಡ ಸರ್ಕಾರ ದೊಡ್ಡ ಅಪ್ಡೇಟ್ ನೀಡಿದೆ.
ಎರಡನೇ ಕಂತಿನ ಹಣ ಅಂದರೆ ಗೃಹಲಕ್ಷ್ಮಿ ಯೋಜನೆಯ ಎರರು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳಿಗೆ ಕೊಡುವ ಪ್ರಕ್ರಿಯೆ ಮುಂದುವರೆದಿದೆ. ಜೊತೆಗೆ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಲಿದೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 15 ರಿಂದ ಫಲಾನುಭವಿಗಳ ಖಾತೆಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗುತ್ತದೆ.
ಯಾರಿಗೆಲ್ಲ 2000 ರೂ ಇನ್ನೂ ಬಂದಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದೀರೋ ಅಂತವರು ಟೆನ್ಷನ್ ಆಗುವುದು ಬೇಡ, ನಿಮಗೆ ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡು ತಿಂಗಳ ನಾಲ್ಕು ಸಾವಿರ ಹಣ ಒಟ್ಟಿಗೆ ಬರಬಹುದು.
ಸೆಪ್ಟೆಂಬರ್ 15 ರಿಂದ ಎರಡನೇ ಕಂತಿನ ಹಣ ಹಾಕುವ ಪ್ರೋಸೆಸ್ ಕೂಡ ಆರಂಭವಾಗುತ್ತದೆ. ಇದು ಅಕ್ಟೋಬರ್ 15ರೊಳಗೆ ಎರಡನೇ ಕಂತಿನ ಹಣ ಕೂಡ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ.
ಆಗಸ್ಟ್ ತಿಂಗಳ ಹಣ ಸೆಪ್ಟೆಂಬರ್ ನಲ್ಲಿ ಹಾಗೂ ಸೆಪ್ಟೆಂಬರ್ ನ ಹಣ ಅಕ್ಟೋಬರ್ ನಲ್ಲಿ 15 ರೊಳಗೆ ಪ್ರತಿಯೊಬ್ಬ ಫಲಾನುಭವಿ ಖಾತೆಗೂ ಕೂಡ ನೇರ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಇನ್ನು ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಬಾಕಿ, ಇದೆ ಹಾಗಾಗಿ ಪ್ರತಿಯೊಬ್ಬರ ಮನೆಗೂ ಅಂಗನವಾಡಿ ಸಹಾಯಕರು ಅಥವಾ ಆಶಾ ಕಾರ್ಯಕರ್ತೆಯರನ್ನು ಕಳುಹಿಸಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ನೀಡುವುದು ಹಾಗೂ ಯಾರಿಗೆಲ್ಲ ಹಣ ಬಂದಿಲ್ಲವೋ ಅಂತವರ ಖಾತೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ತಕ್ಷಣವೇ ಪರಿಹರಿಸಿ ಅವರಿಗೂ ಕೂಡ ಹಣ ಸಿಗುವಂತೆ ಮಾಡುವುದು ಸರ್ಕಾರದ ಮುಂದಿರುವ ಗುರಿ.
ಇದರ ಜೊತೆಗೆ ಸಹಾಯವಾಣಿ ಹಾಗೂ ವಿಶೇಷ ಸೇವಾ ಕೇಂದ್ರಗಳನ್ನು ಕೂಡ ಸರ್ಕಾರ ತೆರೆಯಲು ಮುಂದಾಗಿದ್ದು, ಈ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಯಾವುದೇ ದೂರನ್ನು ಕೂಡ ಗೃಹಿಣಿಯರು ದಾಖಲಿಸಬಹುದಾಗಿದೆ.
Tags
Govt.scheme
Y still not came the August month amount
ಪ್ರತ್ಯುತ್ತರಅಳಿಸಿ