ಸರ್ವರ್ ಸಮಸ್ಯೆ : ನೂರಾರು ಪಡಿತರ ಅರ್ಜಿ ನೋಂದಣಿ ಅಪೂರ್ಣ..
ಪಡಿತರ ಚೀಟಿಗಳಿಗೆ ಸಮಂಧಿಸಿದಂತೆ ಬಹಳ ಸಮಯದ ನಂತರ ತಿದ್ದುಪಡಿಗೆ ಕೊಟ್ಟಿದ್ದ ಮೂರು ದಿನಗಳ ಕಾಲಾವಕಾಶ ಮುಗಿದುಹೋಗಿದೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಜನ ಮೂರೂ ದಿನವೂ ಗ್ರಾಮ ಒನ್, ಗ್ರಾಹಕ ಸೇವಾ ಕೇಂದ್ರಗಳಲ್ಲಿ ಕ್ಯೂ ನಿಂತು ಕೆಲಸವೂ ಆಗದೆ ಮನೆಗೆ ಬರಿಕೈಯಲ್ಲಿ ವಾಪಸು ಹೋಗುವಂತೆ ಆಗಿದೆ. ಹೀಗಾಗಿ ಪಡಿತರ ತಿದ್ದುಪಡಿಗೆ ಮತ್ತಷ್ಟು ಕಾಲಾವಕಾಶ ಕೊಡುವಂತೆ ಜನರು ಮನವಿ ಮಾಡಿದ್ದಾರೆ.
ಬೆಂಬಿಡದ ಸರ್ವರ್ ಭೂತ !!
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಸರಕಾರಿ ಸೇವೆಗಳು ಆನ್ಲೈನ್ ಮೂಲಕವೇ ನಡೆಯುತ್ತಿದ್ದು, ಪ್ರತಿ ಬಾರಿ ಜನರಿಗೆ ಸರ್ವರ್ ನಿಧಾನಗತಿ ಸಮಸ್ಯೆ ತೀವ್ರವಾಗಿ ತಟ್ಟುತ್ತಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳ ನೋಂದಣಿ ಸಂದರ್ಭ ವ್ಯಾಪಕವಾಗಿ ಸರ್ವರ್ ಸಮಸ್ಯೆಯಿಂದಾಗಿ ಜನ ವಾರಗಟ್ಟಲೆ ಬವಣೆ ಅನುಭವಿಸಿದ್ದರು.
ಅವಧಿ ವಿಸ್ತರಣೆ ಅಗತ್ಯ :
ಪಡಿತರ ಕಾರ್ಡ್ ಗಳಿಗೆ ಸಂಬಂಧಿಸಿದ ಸುಧೀರ್ಘ ಅವಧಿಯ ಬಳಿಕ ಅವಕಾಶ ಕಲ್ಪಿಸಲಾಗಿತ್ತು. ವಿಳಾಸ ಬದಲಾವಣೆ, ಹೆಸರು ಸೇರ್ಪಡೆ, ಹೆಸರು ತೆರವು ಮುಂತಾದ ತಿದ್ದುಪಡಿಗಳಿಗಾಗಿ ನೊಂದ್ನೈ ಮಾಡಲು ಇದೊಂದು ಸುವರ್ಣಾವಕಾಶವಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ಜನರು ಗ್ರಾಹಕ ಸೇವಾ ಕೇಂದ್ರಗಳು, ಗ್ರಾಮ ಒನ್ ಗಳಲ್ಲಿ ಕ್ಯೂ ನಿಂತಿದ್ದರು. ಆದರೆ ಬಹುತೇಕ ಕಡೆ ಸರ್ವರ್ ಸಮಸ್ಯೆಯಿಂದಾಗಿ ವೆಬ್ ಸೈಟ್ ತೆರೆದುಕೊಳ್ಳದೆ ಸಮಸ್ಯೆಯಾಗಿತ್ತು.
ನನ್ನ ಮಗಳ ಹೆಸರನ್ನು ಪಡಿತರ ಕಾರ್ಡ್ ನಲ್ಲಿ ಸೇರಿಸಲು ಮೂರೂ ಡೈನವು ಬಂದು ಸರ್ವರ್ ಸಮಸ್ಯೆಯಿಂದಾಗಿ ಬಳಲುವಂತಾಯಿತು ಎಂದು ಪುತ್ತೂರಿನ ಗೃಹಿಣಿ ಹೇಳಿಕೊಂಡರು. ಇಂಥದೇ ದೂರು ಪ್ರತಿ ತಾಲೂಕುಗಳಲ್ಲಿ ನೂರಾರು ಜನರಲ್ಲಿದ್ದು, ಪಡಿತರ ತಿದ್ದುಪಡಿಗಾಗಿ ಸದ್ಯವೇ ಮತ್ತೊಂದು ಅವಕಾಶ ನೀಡುವಂತೆ ಆಗ್ರಹ ಕೇಳಿಬಂದಿತು.
ಪಡಿತರ ತಿದ್ದುಪಡಿ ಆಗದೆ ಗ್ಯಾರಂಟಿಗಳ ಜಾರಿಯೂ ವಿಳಂಬ :
ಇನ್ನು ಬಹಳಷ್ಟು ಕಡೆ, ಪಡಿತರ ತಿದ್ದುಪಡಿ ಆಗದೆ, ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಕೈತಪ್ಪಿದೆ. ಮನೆ ಯಜಮಾನಿ ಎಂದು ಹೆಸರಿಲ್ಲದ ಕಾರಣ, ತಿದ್ದುಪಡಿಗೆ ನೀಡಿದ್ದರೂ ಸರ್ವರ್ ಸಮಸ್ಯೆಯಾದ ಕಾರಣ ತಿದ್ದುಪಡಿಯಾಗದೆ ಗೃಹಲಕ್ಷ್ಮಿ ಯೋಜನೆಯು ಜಾರಿಯಾಗಿಲ್ಲ.
ವಿಲೇವಾರಿಗೆ ಪ್ರತ್ಯೇಕ ಅವಕಾಶ:
ಮೂರೂ ದಿನಗಳ ಅವಕ್ಷದಲ್ಲಿ ಸಾಕಷ್ಟು ಅರ್ಜಿಗಳು ನೋಂದಣಿಯಾಗಿವೆ. ಅರ್ಜಿಗಳ ಪರಿಶೀಲನೆ ಮಾಡಿ ವಿಲೇವಾರಿ ಮಾಡಲು ನಮಗೆ ಇನ್ನೂ ಅವಕಾಶ ನೀಡಿಲ್ಲ. ಅದಕ್ಕಾಗಿ ಇಲಾಖೆ ಪ್ರತ್ಯೇಕ ದಿನ ನಿಗದಿ ಮಾಡಲಿದ್ದು, ಆ ಸಂದರ್ಭ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದೂ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Tags
Govt.scheme