ಈಗಿನ ಕಾಲದಲ್ಲಿ ಸ್ವಂತ ಮನೆ ಹೊಂದಿರುವುದು ಬಹಳ ಮುಖ್ಯ. ಆದರೆ ಸ್ವಂತ ಮನೆ ಕಟ್ಟಿಸುವುದು ಅಷ್ಟು ಸುಲಭದ ಕೆಲಸ ಅಲ್ಲ. ಒಂದು ಜಾಗ ಖರೀದಿ ಮಾಡಿ, ಮನೆ ಕಟ್ಟಿಸುವದು ಎಲ್ಲರ ಕನಸು. ಕೆಲವರು ಅದಕ್ಕಾಗಿ ಗೃಹ ಸಾಲ ಮಾಡಿ ಮನೆ ಕಟ್ಟಿಕೊಳ್ಳುತ್ತಾರೆ. ಆದರೆ ಅದಕ್ಕೂ ಅರ್ಹತೆ ಇಲ್ಲದವರು ಏನು ಮಾಡಲು ಸಾಧ್ಯ?
ಅದಕ್ಕಾಗಿ ಕೆಲವರು ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಮನೆ ಕಟ್ಟಿಸಿರುತ್ತಾರೆ. ಇದೀಗ ಈ ರೀತಿಯಾಗಿ ಸರ್ಕಾರದ ಜಾಗದಲ್ಲಿ ಮನೆ ಕಟ್ಟಿಸುತ್ತಿರುವವರಿಗೆ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ. ಅಕ್ರಮ ಸಕ್ರಮ ಎನ್ನುವ ಯೋಜನೆಯ ಮೂಲಕ ಸರ್ಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ.
ರಾಜ್ಯ ಸರ್ಕಾರದ ಹೊಸ ನಿರ್ಧಾರ ಇದಾಗಿದೆ!!
ಈಗ ಬಂದಿರುವ ಹೊಸ ಸರ್ಕಾರ ಇಂಥ ತೀರ್ಮಾನ ಮಾಡಿದ್ದೂ, ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಬಡತನದಲ್ಲಿ ಇರುವ ಜನರಿಗೆ ಹಕ್ಕು ಪತ್ರ ನೀಡಿ ಆ ಜಾಗವನ್ನು ಅವರಿಗೆ ಸೂಕ್ತ ಎನ್ನುವ ಹಾಗೆ ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದೆ.
ಹಕುಪತ್ರ ನೀಡಲು ಒಂದೇ ಒಂದು ಕಂಡೀಶನ್ ಇಟ್ಟಿದೆ ಸರ್ಕಾರ, ಆ ವ್ಯಕ್ತಿಯ ವಾರ್ಷಿಕ ಆದಾಯ ಎಷ್ಟಿದೆ ಎಂದು ಪರಿಶೀಲಿಸಿ, ಅವರು ಬಡವರು ಎಂದು ಗೊತ್ತಾದರೆ ಅಂಥವರಿಗೆ ಹಕ್ಕುಪತ್ರ ನೀಡಲಾಗುತ್ತದೆಯಂತೆ. ಸರ್ಕಾರೀ ಜಮೀನಿನಲ್ಲಿ 30 ವರ್ಷಗಳ ಹಿಂದಿನಿಂದ ಮನೆ ಕಟ್ಟಿರುವವರು ಅಕ್ರಮ ಸಕ್ರಮ ಯೋಜನೆಗೆ ಅರ್ಹತೆ ಹೊಂದುತ್ತಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹಕ್ಕುಪತ್ರ ಪಡೆಯಲು ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಈ ವೇಳೆ 20*30 ಜಾಗದಲ್ಲಿ ಮನೆ ಕಟ್ಟಿರುವವರು, SC / ST ಜನರಿಗೆ 2500 ರೂಪಾಯಿ ನೋಂದಣಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯ ವರ್ಗದ ಜನರು 5000 ನೋಂದಣಿ ಶುಲ್ಕ ಕಟ್ಟಬೇಕಾಗುತ್ತದೆ. ಇಷ್ಟು ಹಣ ಪಾವತಿ ಮಾಡಿದರೆ, ನೀವು ಮನೆ ಕಟ್ಟಿಕೊಂಡಿರುವ ಜಾಗವನ್ನು ನಿಮ್ಮ ಹೆಸರಿಗೆ ಸರ್ಕಾರವೇ ರಿಜಿಸ್ಟರ್ ಮಾಡಿಸಿಕೊಡುತ್ತದೆ ಎಂದು ಹೇಳಲಾಗುತ್ತಿದೆ. ಈ ಸೌಕರ್ಯ ಪಡೆಯಲು ನೀವು ಮನೆ ಕಟ್ಟಿಸಿ 10 ವರ್ಷಗಳಿಂದ 30 ವರ್ಷಗಳ ಸಮಯ ಆಗಿರಬೇಕು. 10 ಸಾವಿರ ಜನರಿಗೆ ಈ ರೀತಿ ಹಕ್ಕು ಪತ್ರಗಳನ್ನು ನೀಡಲು ಸರ್ಕಾರ ತೀರ್ಮಾನ ಮಾಡಲಾಗಿದ್ದು, ಬಡಜನರಿಗೆ ಇದು ನಿಜಕ್ಕೂ ಒಳ್ಳೆಯ ವಿಷಯವಾಗಿದೆ.
Tags
Govt.scheme
ಜೈ ಸಿದ್ರಾಮೈಯ
ಪ್ರತ್ಯುತ್ತರಅಳಿಸಿ