ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮಿ ಯೋಜನೆ. ಈಗಾಗಲೇ ಒಂದು ಕಂತನ್ನು ಪಡೆದಿರುವ ರಾಜ್ಯದ ಯಜಮಾನಿಯರು ಎರಡನೇ ಕಂತಿನ ಬಗ್ಗೆ ಯೋಚಿಸುತ್ತಿದ್ದಾರೆ. ತಮ್ಮ ಮೊಬೈಲ್ ಗಳನ್ನು ಹಿಡಿದು ಹಣ ಕ್ರೆಡಿಟ್ ಆಗುವ ಮೆಸೇಜ್ ಗಾಗಿ ಕಾಯುತ್ತಿದ್ದಾರೆ. ಇನ್ನು ಕೆಲವರು, ತಾಂತ್ರಿಕ ದೋಷದಿಂದ, ಸರ್ವರ್ ಸಮಸ್ಯೆಗಳಿಂದ, ಕೆವೈಸಿ ಆಗದಿರುವ ಕಾರಣಗಳಿಂದಾಗಿ ಗೃಹಲಕ್ಷ್ಮಿಯ ಮೊದಲ ಕಂತಿನ ಹಣದಿಂದಲೇ ವಂಚಿತರಾಗಿದ್ದಾರೆ. ಎಲ್ಲರಿಗು ಸಿಗುತ್ತಿದ್ದು ನಮಗ್ಯಾಕೆ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡನೇ ಕಂತು ಯಾವಾಗ ಜಮೆ ಆಗುತ್ತೆ?
ಇನ್ನು ಮೊದಲನೇ ಕಂತು ಯಶಸ್ವಿಯಾಗಿ ಪಡೆದಿರುವ ಅಕೌಂಟ್ ಓನರ್ಸ್ ಎರಡನೇ ಕಂತಿಗಾಗಿ ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ. ಆದರೆ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಅಂದರೆ ಸೆಪ್ಟೆಂಬರ್ 30ರೊಳಗೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ 2000 ರೂಪಾಯಿ ಅಕೌಂಟ್ ಗೆ ಬೀಳುವ ಸಾಧ್ಯತೆ ಇದೆ.
ಈ ಹಿಂದೆ ಸರ್ಕಾರ ಪ್ರತಿ ತಿಂಗಳ 26ನೇ ತಾರೀಖಿನಂದು ಗೃಹಲಕ್ಷ್ಮಿ ಹಣ ಖಾತೆಗೆ ಸೇರಲಿದೆ ಎಂದು ಹೇಳಿತ್ತು ಮೊದಲ ಕಂತಿನ ಹಣ ಆಗಸ್ಟ್ 30ರಿಂದ ಬಿಡುಗಡೆ ಮಾಡಲಾಗಿತ್ತು. ಇಡೀ ರಾಜ್ಯದಿಂದ ಈ ಯೋಜನೆಗಾಗಿ 1 ಕೋಟಿಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದರೂ, 82 ಲಕ್ಷ ಜನರ ಖಾತೆಗೆ ಮಾತ್ರ ಜಮೆಯಾಗಿದೆ. ಯಾರಿಗೆಲ್ಲ ಹಣ ಬಂದಿಲ್ಲವೋ, ಎಲ್ಲರಿಗು ಸೆಪ್ಟೆಂಬರ್ ತಿಂಗಳ ಒಳಗಾಗಿ ಜಮೆ ಮಾಡಲಾಗುವುದು, ಮೊದಲ ಕಂತಿನ ಹಣವೂ ಸೇರಿ ಒಟ್ಟು 4 ಸಾವಿರ ಹಣ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದರು.
ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆ ಅಬಲೆಯಲ್ಲ, ಸಬಲೆ ಎನ್ನುವಂತಾಗಿದ್ದು, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆ ತರಲಾಗಿದೆ. ಮಹಿಳೆಯರು ಪರಾವಲಂಬಿಗಳಾಗಬಾರದು, ಯಾರ ಬಳಿಯೂ ಕೈಚಾಚಿ ನಿಲ್ಲುವಂತಾಗಬಾರದು ಎನ್ನುವ ಉದ್ದೇಶದಿಂದ ವಾರ್ಷಿಕ ೩೦ ಸಾವಿರ ಕೋಟಿ ವ್ಯಯವಾಗುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ.
Tags
Govt.scheme
Wondarful thankyou sooo much😍🙏🙏
ಪ್ರತ್ಯುತ್ತರಅಳಿಸಿ9844161099
ಪ್ರತ್ಯುತ್ತರಅಳಿಸಿ