ಈ ಲೇಖನದಲ್ಲಿ ನೀವು ತಿಳಿಯಬಹುದಾಗಿದೆ ವಿದ್ಯಾರ್ಥಿವೇತನದ ಗುರಿತದ ಸಂಪೂರ್ಣ ಮಾಹಿತಿಯನ್ನು. ಆರ್ಥಿಕವಾಗಿ ದುರ್ಬಲವಾಗಿದ್ದರೆ ನಿಮಗಾಗಿ ಒಂದು ಒಳ್ಳೆಯ ಸುದ್ಧಿ. ಗುಣಮಟ್ಟ ಮತ್ತು ಹೆಚ್ಚಿನ ಅಧ್ಯಯನಕ್ಕಾಗಿ ಈ ಹಣವನ್ನು ಬಳಸಬಹುದು.
ಅರ್ಜಿ ಸಲ್ಲಿಕೆ ವಿಧಾನ :
ಈ ವಿದ್ಯಾರ್ಥಿವೇತನವನ್ನು ಟಾಟಾ ಕ್ಯಾಪಿಟಲ್ ಅಧಿಕೃತ ವೆಬ್ ಸೈಟ್ ಗೆ ತೆರಳಿ ಆನ್ಲೈನ್ ಅಲ್ಲಿ ಸಲ್ಲಿಸಬೇಕು.
ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ:
ಅರ್ಹತೆ :
✔ ಈ ಯೋಜನೆಯ ಪ್ರಯೋಜನವು ಭಾರತೀಯ ನಾಗರಿಕರಿಗೆ ಮಾತ್ರ ತೆರೆದಿರುತ್ತದೆ.
✔ ಭಾರತದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 11 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
✔ ಪ್ರಸ್ತುತ ಭಾರತದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪದವಿಪೂರ್ವ ಪದವಿ ಕಾರ್ಯಕ್ರಮಗಳ್ನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು : ಬಿಕಾಂ , BSC , BA ಇತ್ಯಾದಿ.
✔ ಡಿಪ್ಲೋಮ/ಪಾಲಿಟೆಕ್ಣಿಕ್ ಕೋರ್ಸ್ ಗಳನ್ನು ಮತ್ತು/ ಅಥವಾ ಡಿಪ್ಲೋಮ/ ಪಾಲಿಟೆಕ್ನಿಕ್ ಕೋರ್ಸ್ ಗಳಿಗೆ ದಾಖಲಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
✔ ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
✔ ಎಲ್ಲಾ ಮೂಲಗಳಿಂದ ಅರ್ಜಿದಾರ ಕುಟುಂಬದ ವಾರ್ಷಿಕ ವರಮಾನ ರೂ 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
✔ ಟಾಟಾ ಕ್ಯಾಪಿಟಲ್ ಮತ್ತು buddy4Study ಉದ್ಯೋಗಿ ಮಕ್ಕಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗುವುದಿಲ್ಲ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
1. ಆಧಾರ್ ಕಾರ್ಡ್ ಅಥವಾ ಇತರ ಫೋಟೋ
2. ಗುರುತಿನ ಪ್ರಮಾಣಪತ್ರ
3. ಪಾಸ್ಪೋರ್ಟ್ ಗಾತ್ರದ ಫೋಟೋ
4. ಜಾತಿ ಪ್ರಮಾಣಪತ್ರ
5. ವಿಳಾಸ ಪುರಾವೆ
6. ಪ್ರವೇಶ ಪ್ರಮಾಣಪತ್ರ
7. ಪ್ರಸಕ್ತ ಶೈಕ್ಷಣಿಕ್ ವರ್ಷದ ಶುಲ್ಕ ರಶೀದಿ
8. ಬ್ಯಾಂಕ್ ಖಾತೆ ವಿವರಗಳು
9. ಹಿಂದಿನ ವರ್ಗದ ಮಾರ್ಕ್ ಶಿಟ್
10. ಮೊಬೈಲ್ ನಂಬರ್
11. ಇ ಮೇಲ್ ಐಡಿ
Tags
Scholarship