ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳ ಪಡೆಯಬಹುದಾದ ಇಂಜಿನಿಯರಿಂಗ್ ಜಾಬ್ ಗಳು ಯಾವುವು ಗೊತ್ತಾ?
ನೀವು ಅತಿ ಹೆಚ್ಚು ಸಂಬಳ ಪಡೆಯಬಹುದಾದ ಇಂಜಿನಿಯರಿಂಗ್ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಿದ್ರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ನಾವು ಇಲ್ಲಿ ಹೆಚ್ಚು ಸಂಬಳ ನೀಡಬಹುದಾದ ಕ್ಷೇತ್ರಗಳ ಉದ್ಯೋಗಗಳನ್ನು ಪರಿಶೀಲಿಸಿ ಮತ್ತು ಇಂಜಿನಿಯರ್ ಹುದ್ದೆಯ ಹೆಚ್ಚು ವೇತನಕ್ಕೆ ಕಾರಣವಾಗುವ ಸ್ಕಿಲ್ ಹಾಗೂ ಶಿಕ್ಷನ ಕುರಿತು ತಿಳಿಸಿದ್ದೇವೆ.
ಬಿಇ, ಬಿ.ಟೆಕ್, ಎಂ.ಟೆಕ್, ಎಂ.ಎಸ್ಸಿ ಪಾಸ್ ಮಾಡಿದ್ದೀರಾ?.. ಬೆಂಗಳೂರು, ಕರ್ನಾಟಕದ ಯಾವುದೇ ಭಾಗದಲ್ಲಿ ಅಥವಾ ದೇಶದಾದ್ಯಂತ ಯಾವುದೇ ನಗರದಲ್ಲಿ ಅತಿ ಹೆಚ್ಚು ಸಂಬಳ ನೀಡುವ ಇಂಜಿನಿಯರಿಂಗ್ ಉದ್ಯೋಗ ಪಡೆಯಬೇಕು ಎಂದು ಹುಡುಕಾಡುತ್ತಿದ್ದೀರಾ... ಹಾಗಿದ್ರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಈ ಲೇಖನದಲ್ಲಿ ಯಾವ ಕ್ಷೇತ್ರದಲ್ಲಿನ ಇಂಜಿನಿಯರಿಂಗ್ ಹುದ್ದೆಗೆ ಎಷ್ಟು ವೇತನ, ಹೆಚ್ಚು ವೇತನ ಪಡೆಯಲು ಯಾವೆಲ್ಲ ಸ್ಕಿಲ್ ಗಳು, ಡೊಮೇನ್ ಗಳು ಪರಿಣಾಮಕಾರಿಯಾಗಿವೆ, ಹೆಚ್ಚು ವೇತನ ನೀಡಬಹುದಾದ ಇಂಜಿನಿಯರಿಂಗ್ ಡೊಮೈನ್ / ಶಿಕ್ಷಣ ಯಾವುದು ಎಂಬೆಲ್ಲ ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.
ಇವೆ ನೋಡಿ ಅತಿ ಹೆಚ್ಚು ಸಂಬಳ ನೀಡುವ 14 ಇಂಜಿನಿಯರಿಂಗ್ ಕ್ಷೇತ್ರಗಳು
👉 ಮಷಿನ್ ಲರ್ನಿಂಗ್ ಇಂಜಿನಿಯರಿಂಗ್ / ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇಂಜಿನಿಯರಿಂಗ್
👉 ಡಾಟಾ ಸೈನ್ಟಿಸ್ಟ್
👉 ಬ್ಲಾಕ್ ಚೈನ್ ಡೆವಲಪರ್
👉 ಕ್ಲೌಡ್ ಸಲ್ಯೂಷನ್ ಆರ್ಕಿಟೆಕ್ಟ್
👉 DevOps Engineer
👉 ಫುಲ್ ಸ್ಟಾಕ್ ಡೆವಲಪರ್
👉 ಸೈಬರ್ ಸೆಕ್ಯೂರಿಟಿ ಇಂಜಿನಿಯರ್
👉 ಎಂಬೆಡೆಡ್ ಸಿಸ್ಟಮ್ ಇಂಜಿನಿಯರ್
👉 ರೊಬೊಟಿಕ್ಸ್ ಇಂಜಿನಿಯರ್
👉 ಪೆಟ್ರೋಲಿಯಂ ಇಂಜಿನಿಯರ್
👉 ಏರೋಸ್ಪೇಸ್ ಇಂಜಿನಿಯರ್
👉 ನ್ಯೂಕ್ಲಿಯರ್ ಇಂಜಿನಿಯರ್
👉 ಕಂಪ್ಯೂಟರ್ ವಿಷನ್ ಇಂಜಿನಿಯರ್
👉 ಆಟೋಮೋಟಿವ್ ಇಂಜಿನಿಯರ್
ಈ ಮೇಲಿನ ಯಾವ ಕ್ಷೇತ್ರಕ್ಕೆ ಏನು ವಿದ್ಯಾರ್ಹತೆ ಬೇಕು, ಯಾವ ಸ್ಕಿಲ್ ಬೇಕು, ವೇತನ ಎಷ್ಟು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ಮಷಿನ್ ಲರ್ನಿಂಗ್ ಇಂಜಿನಿಯರಿಂಗ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇಂಜಿನಿಯರಿಂಗ್
ಈ ಕ್ಷೇತ್ರದ ಹುದ್ದೆಗೆ ಕಂಪ್ಯೂಟರ್ ಸೈನ್ಸ್, ಡಾಟಾ ಸೈನ್ಸ್ ಅಥವಾ ಸಂಬಂಧಿಸಿದ ಡಿಗ್ರಿ ಪಡೆದಿರಬೇಕು. ಪೈಥಾನ್, ಮಷಿನ್ ಲರ್ನಿಂಗ್ ಆಲ್ಗೊರಿಧಂ, ಡೀಪ್ ಲರ್ನಿಂಗ್ ಪ್ರೇಮ್ ವರ್ಕ್ ಅರಿವು ಇರಬೇಕು. ವಾರ್ಷಿಕ ಸಂಭಾವ್ಯ ವೇತನ : ರೂ. 6-15 ಲಕ್ಷ. ಕಾರ್ಯಾನುಭವದ ಆಧಾರದಲ್ಲಿ ರೂ30,00,000 ವರೆಗೆ ಪಡೆಯಬಹುದು.
ಡಾಟಾ ಸೈನ್ಟಿಸ್ಟ್
ಸ್ಟ್ಯಾಟಿಸ್ಟಿಕ್ಸ್, ಕಂಪ್ಯೂಟರ್ ಸೈನ್ಸ್, ಡಾಟಾ ಸೈನ್ಸ್ ಪದವಿ ಜತೆಗೆ, ಅತ್ಯುತ್ತಮ ಪ್ರೋಗ್ರಾಮಿಂಗ್ ಸ್ಕಿಲ್, ಡಾಟಾ ಅನಾಲಿಸಿಸ್ ಸ್ಕಿಲ್, ಇತರೆ ಸ್ಕಿಲ್ ಗಳನ್ನೂ ಹೊಂದಿರಬೇಕು. ವಾರ್ಷಿಕ ಸಂಭಾವ್ಯ ವೇತನ ರೂ. 5-12 ಲಕ್ಷ. ಕಾರ್ಯಾನುಭವದ ಆಧಾರದಲ್ಲಿ ರೂ. 12-25 ಲಕ್ಷವರೆಗೆ ಪಡೆಯಬಹುದು.
ಬ್ಲಾಕ್ ಚೈನ್ ಡೆವಲಪರ್
ಕಂಪ್ಯೂಟರ್ ಸೈನ್ಸ್, ಸಾಫ್ಟ್ ವೇರ್ ಇಂಜಿನಿಯರಿಂಗ್, ಸಂಬಂಧಿತ ಬ್ರಾಂಚ್ ನಲ್ಲಿ ಬಿಇ ಪಾಸ್ ಮಾಡಿರಬೇಕು. ಜಾವ, ಸಿ **, ಸಿಡಿಟಿ, ಬ್ಲಾಕ್ ಚೈನ್ ಟೆಕ್ನಲಾಜಿ, ಸ್ಮಾರ್ಟ್ ಕಾಂಟ್ರಾಕ್ಟ್ ಡೆವೆಲಪಮೆಂಟ್, ಕ್ರಿಪ್ಟೋಗ್ರಫಿ, ಡಿಸೆಂಟರ್ಲೈಜ್ಡ್ ಅಪ್ಲಿಕೇಶನ್ ಗಳ ಬಳಕೆ ಅರಿವು ಇರಬೇಕು.
ವಾರ್ಷಿಕ ಸಂಭಾವ್ಯ ವೇತನ ರೂ.4-10 ಲಕ್ಷ
ಕಾರ್ಯಾನುಭವದ ಆಧಾರದಲ್ಲಿ ರೂ.25 ಲಕ್ಷ ವರೆಗೆ ವೇತನ ಪಡೆಯಬಹುದು.
ಕ್ಲೌಡ್ ಸಲ್ಯೂಷನ್ ಆರ್ಕಿಟೆಕ್ಟ್
ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ ಹಾಗೂ ಈ ಕ್ಷೇತ್ರಕ್ಕೆ ಸಂಬಂಧಿತ ವಿಷಯದಲ್ಲಿ ಶಿಕ್ಷಣ ಪಡೆದಿರಬೇಕು. AWS, Azure, Google Cloud ವೇದಿಕೆಗಳಲ್ಲಿ ಎಕ್ಸ್ಪರ್ಟ್ ಗಳಾಗಿರಬೇಕು.
ವಾರ್ಷಿಕ ವೇತನ ರೂ. 8-20 ಲಕ್ಷ
ಕಾರ್ಯನುಭವದ ಆಧಾರದಲ್ಲಿ ರೂ. 18-40 ಲಕ್ಷವರೆಗೆ ವೇತನ ಪಡೆಯಬಹುದು.
DevOps Engineer
Devops Engineer ಈ ಕ್ಷೇತ್ರದ ಹುದ್ದೆಗೆ ಸಹ ಸಾಫ್ಟ್ ವೇರ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಪೈಥಾನ್, ಬಾಶ್ ಸ್ಕ್ರಿಪ್ಟಿಂಗ್ ಲ್ಯಾಂಗ್ವೇಜ್ ತಿಳಿದಿರಬೇಕು. ಕ್ಲೌಡ್ ಸರ್ವಿಸ್, ಅಟೋಮೇಷನ್ ಟೂಲ್ಸ್ ಗಳಲ್ಲಿ ಹೊಂದಿರಬೇಕು.
ವಾರ್ಷಿಕ ಸಂಭಾವ್ಯ ವೇತನ ರೂ.6-15 ಲಕ್ಷ
ಕಾರ್ಯಾನುಭವದ ಆಧಾರದಲ್ಲಿ ಇದಕ್ಕೂ ಹೆಚ್ಚಿನ ವೇತನ ಪಡೆಯಬಹುದು.
ಫುಲ್ ಸ್ಟಾಕ್ ಡೆವಲಪರ್
ಸಾಫ್ಟ್ ವೇರ್, ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವವರು ಫ್ರನ್ಟ್ ಎಂಡ್ ಹಾಗೂ ಬ್ಯಾಕ್ ಎಂಡ್ ಡೆವಲಪಮೆಂಟ್ ತಿಳಿದು, ಸಂಪೂರ್ಣವಾಗಿ ವೆಬ್ ಅಪ್ಲಿಕೇಶನ್ ರಚಿಸಬಲ್ಲ ಕೌಶಲ್ಯಭರಿತ ಪ್ರೊಫೆಷನಲ್ ಗಳಾಗಿರಬೇಕು.
ವಾರ್ಷಿಕ ಸಂಭಾವ್ಯ ವೇತನ : ರೂ. 4-12 ಲಕ್ಷ
ಸೈಬರ್ ಸೆಕ್ಯೂರಿಟಿ ಇಂಜಿನಿಯರ್
ಸೈಬರ್ ಸೆಕ್ಯೂರಿಟಿ, ಕಂಪ್ಯೂಟರ್ ಸೈನ್ಸ್, ಡಾಟಾ ಪ್ರೊಟೆಕ್ಷನ್ ಸಂಬಂಧಿಸಿದ ತಾಂತ್ರಿಕ ಶಿಸ್ಖನ ಪಡೆದವರು ಕಂಪ್ಯೂಟರ್, ನೆಟ್ ವರ್ಕ್ ಗಳ ಭದ್ರತೆಯನ್ನು ಸೈಬರ್ ದಾಳಿಕೋರರಿಂದ ರಕ್ಷಿಸುವ ಕೆಲಸ ಮಾಡಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಲು CISSP, CISM, CEH ವಿಶೇಷ ಪ್ರಮಾಣಿತ ಕೋರ್ಸ್ ಗಳಾಗಿವೆ.
ವಾರ್ಷಿಕ ಸಂಭಾವ್ಯ ವೇತನ : ರೂ.5-15 ಲಕ್ಷ.
ಕಾರ್ಯಾನುಭವದ ಆಧಾರದಲ್ಲಿ ಹೆಚ್ಚಿನ ವೇತನ ಪಡೆಯಬಹುದು.
ಎಂಬೆಡೆಡ್ ಸಿಸ್ಟಮ್ ಇಂಜಿನಿಯರ್
ಇಲೆಕ್ಟ್ರಾನಿಕ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಇತರೆ ಸಂಬಂಧಿತ ಕೋರ್ಸ್ ಗಳನ್ನೂ ಪಡೆದಿರಬೇಕು. ಪ್ರೋಗ್ರಾಮಿಂಗ್ ಲ್ಯಾನ್ಗ್ವೇಜ್ ಗಳಾದ ಸಿ,ಸಿ **, ಮೈಕ್ರೊಕಂಟ್ರೋಲರ್, ಮೈಕ್ರೋಪ್ರೊಫೆಸರ್ ಆರ್ಕಿಟೆಕ್ಟರ್, ಹಾರ್ಡವೇರ್ ಸಾಫ್ಟ್ ವೇರ್ ಇಂಟರ್ ಫೇಸಿಂಗ್, ರಿಯಲ್ ಟೈಮ್ ಆಪರೇಟಿಂಗ್ ಸಿಸ್ಟಮ್, ಇಲೆಕ್ಟ್ರಾನಿಕ್ ಸರ್ಕ್ಯುಯಿಟಿ ಡಿಸೈಯನ್ ಸ್ಕಿಲ್ ಗಳನ್ನು ಹೊಂದಿರುವವರು ಈ ಕ್ಷೇತ್ರದಲ್ಲಿ ಕೈತುಂಬಾ ಸಂಬಳ ಪಡೆಯಬಹುದು.
ವಾರ್ಷಿಕ ಸಂಭಾವ್ಯ ವೇತನ : ರೂ.4-12 ಲಕ್ಷ
ಅನುಭವದ ಆಧಾರದಲ್ಲಿ ವೇತನ ಹೆಚ್ಚಿಸಿಕೊಳ್ಳಬಹುದು.
ರೊಬೊಟಿಕ್ಸ್ ಇಂಜಿನಿಯರ್
ರೊಬೊಟಿಕ್ಸ್ ಇಂಜಿನಿಯರ್ ಗಳು ಹಲವು ಇಂಡಸ್ಟ್ರಿಗಳಿಗೆ ರೊಬೊಟಿಕ್ಸ್ ಟೂಲ್ಸ್ ಗಳನ್ನು ವಿನ್ಯಾಸಗೊಳಿಸುವ, ಬಿಲ್ಡ್ ಮಾಡುವ, ಪ್ರೋಗ್ರಾಮಿಂಗ್ ಮಾಡುವ ಕೆಲಸ ಮಾಡಬೇಕಾಗುತ್ತದೆ. ಇದಕ್ಕಾಗಿ ರೊಬೊಟಿಕ್ಸ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಪಡೆದಿರಬೇಕು. ಸಿ **, ಪೈಥಾನ್ ಲ್ಯಾನ್ಗ್ವೇಜ್ ಸಹ ಅಗತ್ಯ ಸ್ಕಿಲ್ ಆಗಿ ಇಲ್ಲಿ ಅವಶ್ಯಕ.
ವಾರ್ಷಿಕ ಸಂಭಾವ್ಯ ವೇತನ: ರೂ.5-12 ಲಕ್ಷ.
ಕಾರ್ಯಾನುಭದ ಆಧಾರದಲ್ಲಿ ರೂ. 30 ಲಕ್ಷ ವರೆಗೆ ವೇತನ ಪಡೆಯಬಹುದು.
ಈ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಲು ಬಯಸುವವರು ಆಟೋಮೋಟಿವ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ ಪಾಸ್ ಮಾಡಿರಬೇಕು. ಜೊತೆಗೆ ವೆಹಿಕಲ್ ಡಿಸೈನ್, ಏರೋಡೈನಾಮಿಕ್ಸ್, ಮೆಕಾನಿಕಲ್ ಸಿಸ್ಟಮ್, ಮೆಟಿರಿಯಲ್ ಸೈನ್ಸ್, ಮತ್ತು ಸಿಎಡಿ ಸಾಫ್ಟ್ ವೇರ್ ಸ್ಕಿಲ್ ಗಳನ್ನೂ ಹೊಂದಿರಬೇಕು.
ವಾರ್ಷಿಕ ಸಂಭಾವ್ಯ ವೇತನ : ರೂ 4-1012 ಲಕ್ಷ.
ಕಾರ್ಯಾನುಭವದ ಆಧಾರದಲ್ಲಿ ರೂ. 30 ಲಕ್ಷವರೆಗೆ ವೇತನ ಪಡೆಯಬಹುದು.
ಏರೋಸ್ಪೇಸ್ ಇಂಜಿನಿಯರ್ ಗಳು ಏರ್ ಕ್ರಾಪ್ಫ್ಟ್, ಸ್ಪೇಸ್ ಕ್ರಾಪ್ಫ್ಟ್ ಸಂಬಂಧಿತ ಸಿಸ್ಟಮ್ ಗಳನ್ನೂ ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಕೆಲಸ ಮಾಡಲು ಏರೋಸ್ಪೇಸ್ ಇಂಜಿನಿಯರಿಂಗ್ ಮಾಸ್ಟರ್ ಡಿಗ್ರಿ ಪಡೆದಿರುವುದು ಆದ್ಯತೆಯ ಕೋರ್ಸ್. ಜೊತೆಗೆ ಏರೋಡೈನಾಮಿಕ್ಸ್ ಸ್ಟ್ರಕ್ಚರಲ್ ಅನಲೈಸ್, ಪ್ರೋಪೇಶನ್ ಸಿಸ್ಟಮ್, ಮೆಟಿರಿಯಲ್ ಸೈನ್ಸ್, ಮತ್ತು ಸಿಎಡಿ ಸಾಫ್ಫ್ ವೇರ್ ಸ್ಕಿಲ್ ಗಳನ್ನೂ ಹೊಂದಿರಬೇಕು.
ವಾರ್ಷಿಕ ಸಂಭಾವ್ಯ ವೇತನ ರೂ. 5-12 ಲಕ್ಷ.
ಕಾರ್ಯಾನುಭದ ಆಧಾರದಲ್ಲಿ ರೂ. 25 ಲಕ್ಷ ವರೆಗೆ ವೇತನ ಪಡೆಯಬಹುದು.
ನ್ಯೂಕ್ಲಿಯರ್ ಇಂಜಿನಿಯರ್
ನ್ಯೂಕ್ಲಿಯರ್ ಇಂಜಿನಿಯರ್ ಗಳು ಅಣುಶಕ್ತಿ ವ್ಯವಸ್ಥೆಯ ವಿನ್ಯಾಸ, ಅಭಿವೃದ್ಧಿ, ನಿರ್ವಹಣೆಗೆ ಸಂಬಂಧಿಸಿದ ಕೆಲಸ ಮಾಡಬೇಕಾಗುತ್ತದೆ. ಇದಕ್ಕಾಗಿ ನ್ಯೂಕ್ಲಿಯರ್ ಇಂಜಿನಿಯರ್ ಎಂ.ಟೆಕ್ ಕೋರ್ಸ್ ಅಥವಾ ಸಂಬಂಧಿಸಿದ ಕೋರ್ಸ್ ಪಾಸ್ ಮಾಡುವುದರ ಜತೆಗೆ ಅಣುಶಕ್ತಿ ಪ್ರತಿಕ್ರಿಯೆ ವಿನ್ಯಾಸ, ರೇಡಿಯೇಷನ್ ಸುರಕ್ಷತೆ, ಅಣುಶಕ್ತಿ ಇಂಧನ ತಂತ್ರಜ್ಞಾನ, ಥರ್ಮೋಡೈನಾಮಿಕ್ಸ್ ಕುರಿತ ಸ್ಕಿಲ್ ಗಳನ್ನೂ ಹೊಂದಿರಬೇಕು.
ವಾರ್ಷಿಕ ಸಂಭಾವ್ಯ ವೇತನ ರೂ 5-12 ಲಕ್ಷ.
ಕಾರ್ಯಾನುಭವದ ಆಧಾರದಲ್ಲಿ ರೂ 25 ಲಕ್ಷವರೆಗೆ ವೇತನ ಪಡೆಯಬಹುದು.
ಪೆಟ್ರೋಲಿಯಂ ಇಂಜಿನಿಯರ್
ಈ ಕ್ಷೇತ್ರದಲ್ಲಿ ಕರಿಯರ್ ರೂಪಿಸಿಕೊಳ್ಳಲು ಪೆಟ್ರೋಲಿಯಂ/ ಸ್ನಾತಕೋತ್ತರ ಪದವಿ ಅಥವಾ ಇಂಧನ/ ಆಯಿಲ್ ಇಂಡಸ್ಟ್ರಿಗೆ ಸಂಬಂಧಿಸಿದ ಪದವಿ ಕೋರ್ಸ್ ಪಡೆದಿರಬೇಕು. ಇಲ್ಲಿ ಕೆಲಸ ಮಾಡಲು ಕೊರೆಯುವ ತಂತ್ರಗಳು, ಜಲಾಯಶದ ನಿರ್ವಹಣೆ, ಉತ್ಪಾದನೆ ಆಪ್ಟಿಮೈಜೇಷನ್, ಭೂವೈಜ್ಞಾನಿಕ ಮಾಡೆಲಿಂಗ್ ಮತ್ತು ಕ್ಷೇತ್ರ ನಿರ್ವಹಣೆಯ ಜ್ಞಾನ ಹೊಂದಿರಬೇಕು.
ವಾರ್ಷಿಕ ಸಂಭಾವ್ಯ ವೇತನ ರೂ 7-14 ಲಕ್ಷ.
ಕಾರ್ಯಾನುಭದ ಆಧಾರದಲ್ಲಿ ರೂ 15-30 ಲಕ್ಷ ವರೆಗೆ ವೇತನ ಪಡೆಯಬಹುದು.
ಕಂಪ್ಯೂಟರ್ ವಿಷನ್ ಇಂಜಿನಿಯರ್
ಕಂಪ್ಯೂಟರ್ ಸೈನ್ಸ್, ರೊಬೊಟಿಕ್ಸ್ ಜೊತೆಗೆ ಇತರೆ ಸಂಬಂಧಿತ ಕೋರ್ಸ್ ಪಡೆದು, ಇಮೇಜ್ ಪ್ರೊಸೆಸಿಂಗ್, ಪ್ಯಾಟರ್ನ್ ರಿಕಾಗ್ನಿನ್ಶನ್, ಮಷಿನ್ ಲರ್ನಿಂಗ್, ಡೀಪ್ ಲರ್ನಿಂಗ್ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ಸ್ಕಿಲ್ ಗಳನ್ನೂ ಹೊಂದಿರಬೇಕು.
ವಾರ್ಷಿಕ ಸಂಭಾವ್ಯ ವೇತನ ರೂ 6-15ಲಕ್ಷ.
ಕಾರ್ಯಾನುಭವದ ಆಧಾರದಲ್ಲಿ ರೂ. 30 ಲಕ್ಷ ವರೆಗೆ ವೇತನ ಪಡೆಯಬಹುದು.
ರೊಬೊಟಿಕ್ಸ್