ಸ್ವಾಮಿ ದಯಾನಂದ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ : ಡಿಗ್ರಿ ಓದುವವರಿಗೆ ರೂ.2 ಲಕ್ಷವರೆಗೆ ವಿದ್ಯಾರ್ಥಿವೇತನ !
ಸ್ವಾಮಿ ದಯಾನಂದ ಎಜುಕೇಷನ್ ಪೌಂಡೇಶನ್ 2023-24 ನೇ ಸಾಲಿನ ಸ್ಕಾಲರಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ. ವೃತ್ತಿಪರ ಕೋರ್ಸ್, ಜೆನೆರಲ್ ಪದವಿ ಕೋರ್ಸ್ ಗಳನ್ನು ಕಲಿಯಲು ಆರ್ಥಿಕ ಸಮಸ್ಯೆ ಎದುರಿಸಿವ ವಿದ್ಯಾರ್ಥಿಗಳಿಗೆ ಮೆರಿಟ್ ಕಮ್ ಮಿನ್ಸ್ ಸ್ಕಾಲರ್ಶಿಪ್ ಇದಾಗಿದೆ. ಇಂಜಿನಿಯರಿಂಗ್, ಮೆಡಿಕಲ್, ಆರ್ಕಿಟೆಕ್ಟರ್ ಹಾಗೂ ಇತರೆ ಸರ್ಕಾರೀ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಅಂಡರ್ ಗ್ರಾಜುಯೇಟ್ ಕೋರ್ಸ್ ಗಳನ್ನು ಕಲಿಯುವವರು ಅರ್ಜಿ ಸಲ್ಲಿಸಬಹುದು. ಯಾರೆಲ್ಲ ಅರ್ಜಿ ಸಲ್ಲಿಸಬಹುದು, ಎಷ್ಟು ಸ್ಕಾಲರಶಿಪ್ ನೀಡಲಾಗುತ್ತದೆ, ಅರ್ಜಿ ಹಾಕುವುದು ಹೇಗೆ, ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ನೀಡಲಾಗುತ್ತದೆ.
ಸ್ಕಾಲರ್ ಶಿಪ್ ವಿವರ :
ಸ್ಕಾಲರ್ ಶಿಪ್ ಹೆಸರು : ಸ್ವಾಮಿ ದಯಾನಂದ ಎಜುಕೇಷನ್ ಪೌಂಡೇಶನ್ ಸ್ಕಾಲರ್ಶಿಪ್.
ಯಾವ ಕೋರ್ಸ್ ಗೆ ಸ್ಕಾಲರ್ಶಿಪ್ : ವೃತ್ತಿಪರ ಕೋರ್ಸ್ ಗಳು ಹಾಗೂ ಇತರೆ ಅಂಡರ್ ಗ್ರಾಜುಯೇಟ್ ಕೋರ್ಸ್ ಓದುವವರಿಗೆ. ( ಬಿಎ, ಬಿ.ಕಾಮ್, ಬಿ.ಎಸ್ಸಿ, ಬಿ.ಫಾರ್ಮಾ, ಬಿಇ, ಬಿ.ಟೆಕ್, ಬಿ.ಆರ್ಚ್, ಎಂಬಿಬಿಎಸ್ ಇತರೆ ೪ ವರ್ಷಗಳ ವೃತ್ತಿಪರ ಹಾಗೂ ಅಂಡರ್ ಗ್ರಾಜುಯೇಟ್ ಕೋರ್ಸ್ ಗಳು ).
ಸ್ವಾಮಿ ದಯಾನಂದ ಸ್ಕಾಲರ್ಶಿಪ್ ಹಣ ಯಾರಿಗೆ ಎಷ್ಟು ಸಿಗಲಿದೆ?
ವಿವಿಧ ಕೆಟಗೆರಿಯಲ್ಲಿ ಸ್ಕಾಲರ್ಶಿಪ್ ಅನ್ನು ಈ ಕೆಳಗಿನಂತೆ ನೀಡಲಾಗುತ್ತದೆ.
ಜೆಇಇ/ ನೀಟ್ ಅರ್ಹತೆ ಪಡೆದವರಿಗೆ Rank ಆಧಾರದಲ್ಲಿ ಕೆಳಗಿನಂತೆ ಸ್ಕಾಲರ್ಶಿಪ್ ನೀಡಲಾಗುತ್ತದೆ.
Rank 1-500 : Rs.2 Lakh / For 4 Years.
Rank 501-1500 : Rs.1.6 Lakh / For 4 Years.
Rank 1501-3000 : Rs.102 Lakh / Foe 4 Years.
ವೃತ್ತಿಪರ ಪದವಿ ಕೋರ್ಸ್ ಪಡೆಯುವವರಿಗೆ : 4 ವರ್ಷಕ್ಕೆ 80,000 ರೂ.
ಇತರೆ ಜೆನೆರಲ್ ಡಿಗ್ರಿ ಕೋರ್ಸ್ ಪಡೆಯುವವರಿಗೆ : ವರ್ಷಕ್ಕೆ ರೂ.100000
ಸೂಚನೆ : ಈ ಸ್ಕಾಲರ್ಶಿಪ್ ಹಣವನ್ನು ನೇರವಾಗಿ ಅಭ್ಯರ್ಥಿ ಪ್ರವೇಶ ಪಡೆದಿರುವ ಶಿಕ್ಷಣ ಸಂಸ್ಥೆ ಖಾತೆಗೆ ಜಮಾ ಮಾಡಲಾಗುತ್ತದೆ. ಅಲ್ಲಿ ವಿದ್ಯಾರ್ಥಿಗಳು ಪಡೆಯಬೇಕಾಗುತ್ತದೆ.
ಅರ್ಹತೆಗಳು :
ಮೇಲೆ ತಿಳಿಸಲಾದ ವೃತ್ತಿಪರ ಕೋರ್ಸ್ ಹಾಗೂ ಅಂಡರ್ ಗ್ರಾಜುಯೇಟ್ ಕೋರ್ಸ್ ಗಳಿಗೆ ಪ್ರವೇಶ ಪಡೆದಿರಬೇಕು. ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ/ 12ನೇ ತರಗತಿಯಲ್ಲಿ ಕನಿಷ್ಟ 7.5 CGPA ಅಥವಾ ಶೇಕಡಾ.75 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರಬೇಕು.
ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ ರೂ.೬ ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಮತ್ತು ಮಾಹಿತಿಗಳು :
👉 SSLC, ದ್ವಿತೀಯ ಪಿಯುಸಿ ಅಂಕಪಟ್ಟಿ.
👉 ಕೋರ್ಸ್ ನ ಸೆಮಿಸ್ಟರ್ ಗಳ ಅಂಕಪಟ್ಟಿ.
👉 ಪ್ರವೇಶಕ್ಕೆ ಸೀಟು ಹಂಚಿಕೆಯಾಗಿದ್ದಲ್ಲಿ ಪ್ರಮಾಣಪತ್ರ.
👉 ಪ್ರವೇಶಾತಿ ಪಡೆದ ರಶೀದಿ.
👉 ಪ್ರವೇಶ ಪಡೆದ ಕಾಲೇಜು / ಸಂಸ್ಥೆಯ ವಿವರಗಳು.
👉 ಇತರೆ ಸ್ಕಾಲರ್ಶಿಪ್ ಇದ್ದಲ್ಲಿ ಶಿಕ್ಷಣ ಸಾಲ ಇದ್ದಲ್ಲಿ ದಾಖಲೆ.
👉 ಅಧಿಕೃತ ಗುರುತಿನ ಚೀಟಿಗಳು.
👉 ಇತರೆ ಮಾಹಿತಿಗಳು.
ಅರ್ಜಿ ಸಲ್ಲಿಸುವುದು ಹೇಗೆ ?
ಅರ್ಜಿ ಸಲ್ಲಿಸಲು ಹಾಗೂ ಸ್ಕಾಲರ್ಶಿಪ್ ನವೀಕರಿಸಲು ಡೈರೆಕ್ಟ್ ಲಿಂಕ್ ಗಳನ್ನು ಕೆಳಗಿನಂತೆ ನೀಡಲಾಗಿದೆ. ಲಿಂಕ್ ಗಳನ್ನು ಕ್ಲಿಕ್ ಮಾಡಿ. ಓಪನ್ ಆದ ಪೇಜ್ ನಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಟೈಪಿಸಿ. ಕೇಳಲಾದ ಪೂರಕ ದಾಖಲೆಗಳನ್ನು ಅಪ್ ಲೋಡ್ ಮಾಡಿ. ಕಾಲೇಜುಗಳ ಮಾಹಿತಿ ನೀಡಬೇಕಿದ್ದು, ಸರಿಯಾಗಿ ತಿಳಿದುಕೊಂಡು ಬರೆದಿಟ್ಟುಕೊಂಡು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-10-2023
Tags
Scholarship

WhatsApp Group