ಭಾರತೀಯರು ವೀಸಾ ಇಲ್ಲದೆ 20 ದೇಶಗಳಿಗೆ ಪ್ರಯಾಣಿಸಬಹುದು... ಯಾವೆಲ್ಲ ದೇಶಗಳು ಗೊತ್ತಾ ? ಇಲ್ಲಿವೆ ನೋಡಿ ಆ ದೇಶಗಳು:

ಭಾರತೀಯರು ವೀಸಾ ಇಲ್ಲದೆ 20 ದೇಶಗಳಿಗೆ ಪ್ರಯಾಣಿಸಬಹುದು... ಯಾವೆಲ್ಲ ದೇಶಗಳು ಗೊತ್ತಾ ? ಇಲ್ಲಿವೆ ನೋಡಿ ಆ ದೇಶಗಳು:



 
                 ಬಜೆಟ್ ಸ್ನೇಹಿ ಪ್ರವಾಸದಲ್ಲಿ ಶ್ರೀಲಂಕಾ ಕೂಡ ಪಟ್ಟಿಯಲ್ಲಿದೆ ಎಂಬುದನ್ನು ಮರೆಯುವಂತಿಲ್ಲ. ಯಾರೆಲ್ಲ ಶ್ರೀಲಂಕಾ ಪ್ರವಾಸ ಮಾಡಬೇಕು ಎಂದು ಯೋಜಿಸುತ್ತಿದ್ದಾರೆಯೋ ಅಂತವರು ವೀಸಾ ಮುಕ್ತವಾಗಿ ಪ್ರಯಾಣ ಮಾಡಬಹುದು. ಇನ್ನು ಭಾರತೀಯರು ವೀಸಾ ಇಲ್ಲದೆ 20 ಕ್ಕಿಂತ ಹೆಚ್ಚು ದೇಶಗಳಿಗೆ ಪ್ರಯಾಣಿಸಬಹುದು ಗೊತ್ತಾ? ಅವುಗಳು ಯಾವ ದೇಶ ಎಂಬುದನ್ನು ತಿಳಿಯಿರಿ.

ಮಾರ್ಚ್ 31, 2024  ರವರೆಗೆ ಈ ಉಪಕ್ರಮ ಇರುತ್ತದೆ.

ಈ ಉಪಕ್ರಮವು ಮಾರ್ಚ್ 31, 2024 ರವರೆಗೆ ಇರುತ್ತದೆ. ಈ ಸಮಯದ ಒಳಗೆ ನೀವು ಶ್ರೀಲಂಕಾದ ಪ್ರವಾಸ ವೀಸಾ ಮುಕ್ತವಾಗಿ ಯೋಜಿಸಬಹದು.
ಇದೊಂದು ತಡೆರಹಿತ ಪ್ರಯಾಣವಾಗಿದ್ದು, ಹೆಚ್ಚೆಚ್ಚು ಪ್ರಯಾಣಿಕರನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಈ ಮೊದಲು, ಶ್ರೀಲಂಕಾಕ್ಕೆ ಪ್ರಯಾಣಿಸುವ ಭರತ್ಯರು ಇಲೆಕ್ಟ್ರಾನಿಕ್ ಟ್ರಾವೆಲ್ ಅಥರೈಸೇಶನ್ ದಾಖಲೆಯೊಂದಿಗೆ ಪ್ರಯಾಣಿಸಬೇಕಾಗಿತ್ತು.


ಪಯಾಣಿಕರಿಗೆ INR 2080 ವೆಚ್ಚವಾಗುತ್ತದೆ.

whatss
ಆಗಮನದ ಸಮಯದಲ್ಲಿ ಪ್ರಯಾಣಿಕರು ಈ ಡಾಕ್ಯುಮೆಂಟ್ ಅನ್ನು ಪ್ರಸ್ತುತಪಡಿಸುವ ಅಗತ್ಯವಿದೆ. ಈ ಎಲೆಕ್ಟ್ರಾನಿಕ್ ಪ್ರಯಾಣದ ಅಧಿಕೃತ ದಾಖಲೆಯು 30 ದಿನಗಳವರೆಗೆ ಮಾನ್ಯವಾಗಿದೆ ಮತ್ತು ಪ್ರಯಾಣಿಕರಿಗೆ INR 2080 ವೆಚ್ಚವಾಗುತ್ತದೆ.

ಭಾರತೀಯರಿಗೆ ವೀಸಾ ಮುಕ್ತ ಪ್ರವಾಸ :

ಹೌದು,,,,, ಶ್ರೀಲಂಕಾ ಈಗ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಮುಕ್ತವಾಗಿದೆ. ಇತ್ತೀಚಿಗೆ, ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯವು ಏಳು ದೇಶಗಳ ಪ್ರಯಾಣಿಕರು-ಅಂದರೆ ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ನ ಪ್ರಯಾಣಿಕರು ಈಗ ಶ್ರೀಲಂಕಾಕ್ಕೆ ವೀಸಾ ಮುಕ್ತ ಪ್ರವೇಶವನ್ನು ಹೊಂದಬಹುದು ಎಂದು ಘೋಷಿಸಿತು.

         ಇದರ ಮೂಲಕ ಭಾರತ ಮತ್ತು ಶ್ರೀಲಂಕಾ ನಡುವಿನ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪರ್ಕಗಳು, ಪುರಾಣದಿಂದ ನಿಜಾದ ಪುರಾತತ್ವ ಶಾಸ್ತ್ರದ ಸ್ಥಳಗಳವೆರೆಗೆ ವಿಸ್ತರಿಸುತ್ತದೆ.

ಭಾರತೀಯರು ವೀಸಾ ಇಲ್ಲದೆ 20 ಪ್ಲಸ್ ದೇಶಗಳಿಗೆ ಪ್ರಯಾಣಿಸಬಹುದು.

ಶ್ರೀಲಂಕಾ, ಬಾರ್ಬಡೋಸ್, ಭೂತಾನ್, ಡೊಮಿನಿಕಾ, L ಸಾಲ್ವಡಾರ್, ಗ್ಯಾಬೊನ್ ,  ಗ್ಯಾಂಬಿಯಾ,  ಗ್ರೆನಡಾ,  ಹೈಟಿ,  ಜಮೈಕಾ,  ಕಝಾಕಿಸ್ತಾನ್,  ಮಕಾವೋ,  ಮಾರಿಷಸ್,  ಮೈಕ್ರೋನೇಷಿಯಾ,  ನೇಪಾಳ,  ಪ್ಯಾಲೆಸ್ಟೈನ್,  ಸೆನೆಗಲ್,  ಶೀಶೆಲ್ಸ್,  ಸೆಂಟ್ ಕಿಟ್ಸ್,  ಮತ್ತು ನೆವಿಸ್,  ಸೇಂಟ್ ವಿನ್ಸೆಂಟ್,  ಮತ್ತು ಗ್ರೆನಡೈನ್ಸ್,  ಟ್ರಿನಿಡಾಡ್ ಮತ್ತು ಟೊಬಾಗೊ ಹಾಗೂ ವನವಾಟು.


 
ಒಟ್ಟಾರೆ ನೀವು ಶ್ರೀಲಂಕಾ ಪ್ರವಾಸ ಮಾಡಬೇಕು ಎಂದು ಬಹುಕಾಲದಿಂದ ಯೋಜಿಸುತ್ತಿದ್ದರೆ ಇದು ಉತ್ತಮ ಸಮಯ ಎಂದೇ ಹೇಳಬಹುದು. ಏಕೆಂದರೆ ಶ್ರೀಲಂಕಾ ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ.

 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು