ಸ್ವಾವಲಂಬಿ ಸಾರಥಿ: ವಾಹನ ಖರೀದಿಸಲು 3 ಲಕ್ಷ ಸಹಾಯಧನ
ಎಲ್ಲರಿಗು ನಮಸ್ಕಾರ, ನೀವು ವಾಹನ ಚಾಲಕರಾ? ಆಟೋ ರಿಕ್ಷಾ, ಟ್ಯಾಕ್ಸಿ ಸರಕು ವಾಹನ ಖರೀದಿಸಲು ನಿಮಗೆ ಸರ್ಕಾರದ ಸಬ್ಸಿಡಿ ಹಣ ಪಡೆಯಬೇಕೆ? ಹಾಗಿದ್ದರೆ, ನಿಮಗೆ ನಾವು ಇಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಈ ಲೇಖನವನ್ನು ಓದಿ ಹಾಗೂ ಸರ್ಕಾರದ ಸಹಾಯಧನ ಪಡೆದು ನಿಮ್ಮ ವೃತ್ತಿ ಜೀವನವನ್ನು ಯಶಸ್ವಿಯಾಗಿಸಿ.
ಆಟೋ ರಿಕ್ಷಾ, ಟ್ಯಾಕ್ಸಿ ಸರಕು ವಾಹನಗಳನ್ನು ಖರೀದಿಸಲು Svavalambi Sarathi Yojana Karnataka ಅಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ ಅರ್ಹ ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ.50 ರಷ್ಟು ಅಥವಾ ಗರಿಷ್ಠ ರೂ. 3,00,000 ರ ವರೆಗೆ ಸಹಾಯಧನವನ್ನು ನೀಡುತ್ತಾರೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪಾತ್ರವನ್ನು ಸಲ್ಲಿಸಬೇಕಾಗುತ್ತದೆ.
ಅರ್ಹತೆ :
👉 ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ-೧ ಎ, ೩ ಎ ಮತ್ತು ೩ ಬಿ ಸಮುದಾಯಗಳಿಗೆ ಸೇರಿದವರಾಗಿರಬೇಕು.
👉 ಅರ್ಜಿದಾರ ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.
👉 ಅರ್ಜಿದಾರರು 21 ರಿಂದ 45 ವರ್ಷಗಳ ನಡುವಿನ ವಯೋಮಿತಿಯವರಾಗಿರಬೇಕು.
👉 ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ ರೂ. 98000 ಗಳು ನಗರ ಪ್ರದೇಶದವರಿಗೆ ರೂ.1,20,000 ಗಳನ್ನೂ ಮೀರಿರಬಾರದು.
👉 ಅರ್ಜಿದಾರರು ಪ್ರಾದೇಶಿಕ ಸಾರಿಗೆ ( RTO) ಅಧಿಕಾರಿಯಿಂದ ನೀಡಲಾದ ಚಾಲನಾ ಪರವಾನಗಿ ಹೊಂದಿರಬೇಕು.( Driving Licence)
👉 ಈ ಹಿಂದೆ ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರೀ ಇಲಾಖೆಗಳಲ್ಲಿ ಈ ಉದ್ದೇಶಕ್ಕೆ ಯಾವುದೇ ಯೋಜನೆಗಳಿಂದ ಸೌಲಭ್ಯ ಪಡೆದಿರಬಾರದು.
👉 ಈ ಯೋಜನೆಯಲ್ಲಿ ಸವಲತ್ತು ಪಡೆಬಯಸುವ ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯುವ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆ ಹೊಂದಿರಬೇಕು.
👉 ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಸೌಲಭ್ಯ ಪಡೆಯತಕ್ಕದ್ದು.
👉 ಈ ಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದು.
👉 ಈ ಯೋಜನೆಯಲ್ಲಿ ಮಂಗಳಮುಖಿಯರಿಗೂ ಸಹ ಆದ್ಯತೆ ನೀಡುವುದು.
👉 ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಯು ಸ್ವಯಂ ಟ್ಯಾಕ್ಸಿ ಚಾಲನೆ ಉದ್ದೇಶಕ್ಕೆ ವಾಹನವನ್ನು ನೋಂದಾಯಿಸತಕ್ಕದ್ದು.
ಯೋಜನೆಯ ಹೆಸರು : ಸ್ವಾವಲಂಬಿ ಸಾರಥಿ ಯೋಜನೆ
ಸಹಾಯಧನ ಮೊತ್ತ : ವಾಹನದ ಮೌಲ್ಯದ ಶೇ. ೫೦ ರಷ್ಟು ಅಥವಾ ಗರಿಷ್ಠ ರೂ. ೩ ಲಕ್ಷದ ವರೆಗೆ
ಅರ್ಜಿದಾರರ ವಯಸ್ಸು : 21 ರಿಂದ 45 ವರ್ಷ
ದಾಖಲೆಗಳು :
⭐ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
⭐ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
⭐ ಆಧಾರ್ ಕಾರ್ಡ್ ಪ್ರತಿ ( ನಿವಾಸದ ಪುರಾವೆ)
⭐ ವಾಹನದ ಚಾಲನಾ ಪರವಾನಗಿ Driving Licence)
⭐ ಬ್ಯಾಂಕ್ ಪಾಸ್ ಬುಕ್ ಪ್ರತಿ
⭐ ವಾಹನದ ಅಂದಾಜು ದರಪಟ್ಟಿ
⭐ ಸ್ವಯಂ ಘೋಷಣೆ ಪತ್ರ
⭐ ಫಲಾನುಭವಿಯ ಇತ್ತೀಚಿನ ೨ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
⭐ ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವ ಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ಧೃಡೀಕರಣ ಪತ್ರ
⭐ ಈ ಯೋಜನೆಯಡಿ ಪಡೆದ ವಾಹನವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ಧೃಡೀಕರಣ ಪತ್ರ
⭐ ಅರ್ಜಿದಾರರು ನಿರುದ್ಯೋಗಿ ಆಗಿರಬೇಕು.( ಸ್ವಯಂ ಘೋಷಣಾ ಪತ್ರ ಸಲ್ಲಿಸುವುದು).
ಅರ್ಜಿ ಸಲ್ಲಿಸುವುದು ಹೇಗೆ?
ಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.
ಆನ್ಲೈನ್ ಅರ್ಜಿ ಲಿಂಕ್ : sevasindhu.karnataka.gov.in
ಪ್ರಮುಖ ದಿನಾಂಕಗಳು : ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30-10-2023
ಆಯ್ಕೆ ಸಮಿತಿ :
👉 ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು-ಅಧ್ಯಕ್ಷರು
👉 ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ-ಉಪಾಧ್ಯಕ್ಷರು
👉 ಸಂಬಂಧಪಟ್ಟ ಜಿಲ್ಲೆಯ ಲೀಡ್ ಬ್ಯಾಂಕಿನ ವ್ಯವಸ್ಥಾಪಕರು-ಸದಸ್ಯರು
👉 ಸಂಬಂಧಪಟ್ಟ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ-ಸದಸ್ಯರು
👉 ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿ
👉 ನಿಗಮದ ಜಿಲ್ಲಾ ವ್ಯವಸ್ಥಾಪಕರು
Tags
Govt.scheme