ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ : ಕೂಡಲೇ ಅರ್ಜಿ ಸಲ್ಲಿಸಿ ಯಂತ್ರ ನಿಮ್ಮದಾಗಿಸಿಕೊಳ್ಳಿ.

ಮಹಿಳೆಯರಿಗೆ ಉಚಿತ ಹೊಲಿಗೆ  ಯಂತ್ರ : ಕೂಡಲೇ ಅರ್ಜಿ ಸಲ್ಲಿಸಿ ಯಂತ್ರ ನಿಮ್ಮದಾಗಿಸಿಕೊಳ್ಳಿ.



 
        2023-24 ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ವಿವರ ಇಲ್ಲದೆ. 

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಗ್ರಾಮೀಣ ಪ್ರದೇಶದ ಪ್ರತಿನಿರತ ಕಸುಬುಗಳಾದ ಮರಗೆಲಸ ಮಾಡುವ ಬಡಿಗೆಗಳು, ಬಟ್ಟೆ ತೊಳೆಯುವ ಕಸುಬು ಮಾಡುವ ದೋಬಿ/ ಮಡಿವಾಳರು, ಕಬ್ಬಿಣದ ಕೆಲಸಮಾಡುವ ಕಮ್ಮಾರರು,  ಕಟ್ಟಡ ನಿರ್ಮಾಣ ಕೆಲಸ ಮಾಡುವ ಗೋಂಡಿ (ಗಾರೆ) ಕೆಲಸಗಾರರು, ಕ್ಷೌರಿಕ ವೃತ್ತಿ ಮಾಡುವ ಕ್ಷೌರಿಕರು ಹಾಗೂ ಬಟ್ಟೆ ಹೊಲಿಯುವ ವೃತ್ತಿ ಮಾಡುವ ದರ್ಜಿಗಳು, ಸಿಂಪಿಗರು ಅಥವಾ ವೃತ್ತಿಪರ ಹೋಳಿಗೆ ಕೆಲಸ ಮಾಡುವ ವೈವುದೇ ಜಾತಿಯ ಮಹಿಳಾ ಟೈಲರ್ ಗಳು ಸೇರಿದಂತೆ ಈ ಯೋಜನೆಯಡಿ ಇರುವ ಉಪಕರಣ ಆಧಾರಿತ ವೃತ್ತಿ ವರ್ಗದವರು ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಗಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಹೊಲಿಗೆ ಯಂತ್ರಗಳು ಹಾಗೂ ವೃತ್ತಿನಿರತ ಕುಶಲಕರ್ಮಿಗಳ್ಗಿಯೇ ವಿವಿಧ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಈ ಯೋಜನೆಗಳ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ವೃತ್ತಿಯಾಧಾರಿತ ಯಂತ್ರೋಪಕರಣಗಳನ್ನು ಪಡೆಯಬಹುದಾಗಿದೆ.

whatss


ಅರ್ಜಿ ಸಲ್ಲಿಕೆ ಷರತ್ತುಗಳೇನು?

⇰  ಈ ಯೋಜನೆಗಳು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗಿರುತ್ತವೆ.

⇰  ಹೊಲಿಗೆ ಯಂತ್ರಗಳನ್ನು ಪಡೆಯುವ ಸಾಮಾನ್ಯ ಮತ್ತು ಇತರ ಅಭ್ಯರ್ಥಿಯು ಕನಿಷ್ಠ 18 ರಿಂದ ಗರಿಷ್ಟ 34 ವರ್ಷದ ವರೆಗೆ ವಯೋಮಿತಿ ಹೊಂದಿರಬೇಕು. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯಥಿಗಳಾಗಿದ್ದರೆ, ಕನಿಷ್ಠ 18 ರಿಂದ ಗರಿಷ್ಟ 40 ವರ್ಷ ಮೀರಿರಬಾರದು.

⇰  ಈ ಹಿಂದೆ ಈ ಯೋಜನೆಯಡಿ ಹೊಲಿಗೆ ಯಂತ್ರ/ ಸುಧಾರಿತ ಸಲಕರಣೆಗಳನ್ನು ಪಡೆದಿದ್ದರೆ ಕುಶಲಕರ್ಮಿಗಳು ಮತ್ತೆ ಅರ್ಜಿ ಸಲ್ಲಿಸುವ ಅವಕಾಶ ಇರುವುದಿಲ್ಲ.

⇰  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಆಯ್ಕೆ ಪ್ರಕ್ರಿಯೆ :

ಸದರಿ ಯೋಜನೆಯಡಿ ಪ್ರತಿ ಜಿಲ್ಲೆಗೂ ಇಂತಿಷ್ಟು ಹೊಲಿಗೆ ಯಂತ್ರ ಸುಧಾರಿತ ಸಲಕರಣೆಗಳ ಗುರಿ ನಿಗದಿಪಡಿಸಲಾಗಿದೆ. ಹಾಗೊಂದು ವೇಳೆ ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲಾತಿ ಹಾಗೂ ಕೊನೆಯ ದಿನಾಂಕ :

👉  ಆಧಾರ್ ಕಾರ್ಡ್ 

👉  ಪಡಿತರ ಚೀಟಿ 

👉  ಜಾತಿ ಪ್ರಮಾಣಪತ್ರ (ಪ.ಜಾ/ಪ.ಪಂ)
ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಮಾತ್ರ

👉  ಆಯಾ ಗ್ರಾಮ ಪಂಚಾಯತಿ ಪಿಡಿಒ ಅವರಿಂದ ವೃತ್ತಿಪರ ವೃತ್ತಿ ಮಾಡುತ್ತಿರುವ ಬಗ್ಗೆ ಧೃಢೀಕರಣ ಪತ್ರ 

👉  ಅಭ್ಯರ್ಥಿ ವಿಕಲಚೇತನ ಆಗಿದ್ದಲ್ಲಿ UDID ಕಾರ್ಡ್ 

👉  ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
 
         ಕೆಲವು ಜಿಲ್ಲೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ಮುಕ್ತಾಯವಾಗಿದ್ದು, ಇನ್ನುಳಿದ ಜಿಲ್ಲೆಗಳಿಗೆ ನವೆಂಬರ್ ವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ.



 





2 ಕಾಮೆಂಟ್‌ಗಳು

ನವೀನ ಹಳೆಯದು