ಕೇಂದ್ರದ ಬೊಕ್ಕಸಕ್ಕೆ 22,000 ಕೋಟಿ ಹೆಚ್ಚುವರಿ ಹೊರೆ
ಸಣ್ಣ ರೈತರಿಗೆ ಇನ್ನೂ ಹೆಚ್ಚು ನಗದು ಬೆಂಬಲ !!
ಏನಿದು ರೂಪಾಯಿ 8000 ಕ್ಕೆ???
ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಪೂರಕವಾಗಿ ರೈತರ ಬೆಂಬಲ ಕ್ರೋಢೀಕರಿಸುವ ಉದ್ದೇಶದಿಂದ ಈಗ ಸಣ್ಣ ಹಿಡುವಳಿದಾರರಿಗೆ ನೀಡುತ್ತಿರುವ ನಗದು ನೆರವನ್ನು ಮೂರನೇ ಒಂದರಷ್ಟು ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಪ್ರಸ್ತುತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುತ್ತಿರುವ ವಾರ್ಷಿಕ 6,000 ಮೊತ್ತವನ್ನು 8,000 ರುಪಾಯಿಗೆ ಏರಿಸಲು ಸರ್ಕಾರ ಚಿಂತನೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಈ ಯೋಜನೆಗೆ ಅನುಮೋದನೆ ಸಿಕ್ಕರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 22 ಸಾವಿರ ಕೋಟಿ ಹೊರೆ ಬೀಳಲಿದೆ ಎಂದು ಅವರು ಹೇಳಿದ್ದಾರೆ.
ದೇಶದ 140 ಕೋಟಿ ಜನಸಂಖ್ಯೆಯ ಅಂದಾಜು ಶೇಕಡಾ 65 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಈ ರೈತರು ನರೇಂದ್ರ ಮೋದಿ ಬೆಂಬಲದ ನಿರ್ಣಾಯಕ ಭಾಗವಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
Tags
Govt.scheme

WhatsApp Group
