ಸರ್ಕಾರದ ಅಧಿಸೂಚನೆ ಸಂಖ್ಯೆ ಕೃ,ಇ 43 ಎಎಇ 2023, ಬೆಂಗಳೂರು ದಿನಾಂಕ 06/10/2023
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು 2023-24 ನೇ ಹಿಂಗಾರು/ಬೇಸಿಗೆ ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಲಾಗಿದೆ. ಮೈಸೂರು ಜಿಲ್ಲೆಗೆ ಸದರಿ ಯೋಜನೆಯಡಿ 9 ಬೆಳೆಗಳನ್ನು ಅಧಿಸೂಚಿಸಲಾಗಿದೆ.
ಹಿಂಗಾರು ಹಂಗಾಮಿಗೆ ಮಳೆಯಾಶ್ರಿತ-4,
ನೀರಾವರಿ-2, ಒಟ್ಟು 6 ಆಹಾರ ಧನ್ಯ ಬೆಳೆಗಳು,
1 ತರಕಾರಿ ಬೆಳೆ ಮತ್ತು ಬೇಸಿಗೆ ಹಂಗಾಮಿಗೆ 2
ನೀರಾವರಿ ಬೆಳೆಗಳು (ಭತ್ತ ಮತ್ತು ರಾಗಿ).
ವಾಣಿಜ್ಯ ವಿಮಾ ಕಂತಿನ ದರ ಹಾಗೂ ರೈತರು ಕಟ್ಟಬೇಕಾಗಿರುವ ವಿಮಾ ಕಂತಿನ ದರದಲ್ಲಿನ ವ್ಯತ್ಯಾಸದ ಮೊಬಲಗಿನಲ್ಲಿ ಶೇಕಡಾ 50 ರಷ್ಟು ಹಣವನನು ರಾಜ್ಯ ಸರ್ಕಾರದಿಂದ ಹಾಗೂ 50ರಷ್ಟು ಹಣವನ್ನು ಕೇಂದ್ರ ಸರ್ಕಾರದಿಂದ ಫ್ಯೂಚರ್ ಜನರಲಿ ಇನ್ಶೂರೆನ್ಸ್ ಕಂ, ಲಿ," ಗೆ ನಿಯಮಾನುಸಾರ ಪಾವತಿಸಲಾಗುತ್ತದೆ.
2023-24 ರ ಹಿಂಗಾರು/ ಬೇಸಿಗೆ ಹಂಗಾಮಿಗೆ ಗ್ರಾಮ ಪಂಚಾಯತಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳು : ರಾಗಿ (ಮ.ಆ), ಹುರುಳಿ (ಮ,ಆ),
ಹೋಬಳಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳು : ರಾಗಿ (ಮ,ಆ) ರಾಗಿ (ನೀ), ಮುಸುಕಿನ ಜೋಳ (ನೀ), ಟೊಮೇಟೊ, ಕಡಲೆ (ಮ.ಆ), ಭತ್ತ (ನೀ),
1. ಮಳೆ ಅಭಾವದಿಂದ ವಿಮಾ ಘಟಕದಲ್ಲಿ ಶೇಕಡಾ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ,
2. ದೀರ್ಘಕಾಲದ ತೇವಾಂಶ ಕೊರತೆ ತೀವ್ರ ಬರಗಾಲ, ಮುಳುಗಡೆ ಮುಂತಾದವುಗಳಿಂದ ಯಾವುದೇ ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ 15 ದಿನಗಳಿಗಿಂತ ಮೊದಲು ಬೆಲೆ ಹಾನಿಯಾಗಿದ್ದಲ್ಲಿ,
3. ಬೆಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೇ ಒಣಗಲು ಬಿಟ್ಟಂತಹ ಕಟಾವು ಮಡಿದ ಎರಡು ವಾರಗಳೊಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೇ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ,
4. ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಅಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ ಮೇಘಸ್ಪೋಟ ಮತ್ತು ಗುಡುಗು-ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡ ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಪಡೆಯಲು ಅವಕಾಶವಿರುತ್ತದೆ.
5. ವಿಮಾ ಸಂಸ್ಥೆಗಳು ಬೆಳೆ ಸಾಲ ಪಡೆಯದ ರೈತರುಗಳನ್ನು ತಮ್ಮ ಅಧಿಕೃತ ಏಜೆಂಟರ ಮೂಲಕವೂ ಸಹ ಯೋಜನೆಯಡಿ ನೋಂದಾಯಿಸಲು ಅವಕಾಶವಿರುತ್ತದೆ.
ವಿಮಾ ಮೊತ್ತ & ರೈತರು ಪಾವತಿಸಬೇಕಾದ ವಿಮಾ ಕಂತಿನ ವಿವರಗಳು:
Tags
Govt.scheme

WhatsApp Group
