ಕೆಪಿಎಸ್ಸಿ (KPSC) ಗೆ ಪ್ರಸ್ತಾವನೆ ।। ಭರ್ತಿಯಾಗಲಿವೆ 733 ಹುದ್ದೆಗಳು: ಗ್ರಾಮ ಪಂಚಾಯತಿಗಳಲ್ಲಿ ನೇಮಕ ಸುಗ್ಗಿ !!

ಕೆಪಿಎಸ್ಸಿ (KPSC) ಗೆ ಪ್ರಸ್ತಾವನೆ ।।
ಭರ್ತಿಯಾಗಲಿವೆ 733 ಹುದ್ದೆಗಳು:
ಗ್ರಾಮ ಪಂಚಾಯತಿಗಳಲ್ಲಿ ನೇಮಕ ಸುಗ್ಗಿ !!




 

           ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಖುಷಿ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR)  ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನವೆಂಬರ್ ಅಂತ್ಯಕ್ಕೆ ಅಧಿಸೂಚನೆ ಹೊರ ಬೀಳಲಿದೆ.

ಆರ್ ಡಿಪಿಆರ್  ಇಲಾಖೆಯ ವಿವಿಧ ವೃಂದಗಳ ನೇರ ನೇಮಕಾತಿ ಮೂಲಕ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರೇಡ್-ಮತ್ತು ಗ್ರೇಡ್-2  ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಸೇರಿ ಒಟ್ಟು 733 ಹುದ್ದೆಗಳ ಭರ್ತಿಗೆ ಈಗಾಗಲೇ ಆರ್ಥಿಕ ಇಲಾಖೆ ಸಹಮತಿ ನೀಡಿದೆ. ನವೆಂಬರ್ ಕೊನೆ ವಾರ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ಅಧಿಸೂಚನೆ ಹೊರಡಿಸಲು ತಯಾರಿ ನಡೆದಿದೆ.

KPSC ಮೂಲಕ ಹುದ್ದೆ ಭರ್ತಿಗೆ ಇಲಾಖೆಯಿಂದ ಪ್ರಸ್ತಾವನೆಯು ಸಲ್ಲಿಸಲಾಗಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ PDO ಹುದ್ದೆ ಭರ್ತಿಯಾಗಿಲ್ಲ. ಒಬ್ಬ PDO ಗೆ 2-3 ಪಂಚಾಯತಿಗಳ ಪ್ರಭಾರ ನೀಡಲಾಗಿದ್ದು, ಸರಕಾರಿ ಕೆಲಸಕ್ಕೂ ಹೊಡೆತ ಬಿದ್ದಿದೆ. ಹುದ್ದೆ ಆಕಾಂಕ್ಷಿಗಳ ವಯೋಮಿತಿಯು ಮೀರುತ್ತಿದ್ದು, ಈ ಹುದ್ದೆ ಭರ್ತಿ ಪ್ರಕ್ರಿಯೆ ಶುರುವಾದರೆ ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ಆಶಾಭಾವನೆ ಮೂಡಲಿದೆ.


whatss

ಮೀಸಲಾತಿಗೂ ಗ್ರೀನ್ ಸಿಗ್ನಲ್ !!

ಈ ಹುದ್ದೆ ಭರ್ತಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಸಿದ್ಧತೆ ಮಾಡಿಕೊಂಡು KPSC ಕಳುಹಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಪಿಡಿಒ ಮತ್ತು ಕಾರ್ಯದರ್ಶಿ ಹುದ್ದೆಗಳ ಮೀಸಲಾತಿ ಬಗ್ಗೆ ರೋಸ್ಟರ್ ಬಿಂದು ಸಿದ್ಧಪಡಿಸಿ ಈ ಹುದ್ದೆಗಳಿಗೆ ಮಹಿಳಾ ಅಮ್ತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಮತಿಯನ್ನು ಪಡೆಯಲಾಗಿದೆ. ಹುದ್ದೆಯ ಮರು ನಾಮಕರಣವಾಗಲಿ ಅಥವಾ ಬೇರೆ ಯಾವುದೇ ಪ್ರಸ್ತಾವನೆಗಳ ಸರಕಾರದ ಮುಂದೆ ಇಲ್ಲ. ನಿಯಮಗಳ ಪ್ರಕಾರ ವೇತನ ಶ್ರೇಣಿ ಇರಲಿದೆ.

            KPSC ಯಿಂದ ಅಭಿವೃದ್ಧಿ ಪಡಿಸಿರುವ KPSC-ಉದ್ಯೋಗ ಮೂಲಕ ಆನ್ಲೈನ್ ನಲ್ಲಿ ಹೊಸ ಹುದ್ದೆಗಳ ನೇಮಕಾತಿಗಾಗಿ ಲೆವೆಲ್-1  ಮತ್ತು ಲೆವೆಲ್-2  ಅಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ.ಬಳಿಕ ಪ್ರಸ್ತಾವನೆಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಕ್ರಮ ಆಗಲಿದೆ.

ಕಲ್ಯಾಣಕ್ಕೆ ೧೦೬ ಹುದ್ದೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಪಿಡಿಒ 106 ಮತ್ತು ಗ್ಗ್ರೇಡ್-1  ಕಾರ್ಯದರ್ಶಿಯ 85 ಹುದ್ದೆಗಳು ಸಿಗಲಿವೆ.  ರೋಸ್ಟರ್ ಬಿಂದು ಸಿದ್ಧಪಡಿಸಿ ಸಂಬಂಧಿಸಿದ ಇಲಾಖೆಗಳ ಸಹಮತಿಯು ಸಿಕ್ಕಿದೆ. 371 ಜೆ ಅಡಿ ಸ್ಥಳೀಯ ಯುವಕರಿಗೆ ಹೆಚ್ಚು ಉದ್ಯೋಗ ಅವಕಾಶಗಳು ಸಿಗಲಿವೆ


 









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು