ಮೊದಲ ಹಂತದಲ್ಲಿ 545 ಪಿಎಸ್ಐ ಗಳ ನೇಮಕಕ್ಕೆ ಪರೀಕ್ಷೆ
ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳೂ ಸೇರಿದಂತೆ ಮುಂದಿನ ಆರು ತಿಂಗಳಲ್ಲಿ 4547 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅದರ ಭಾಗವಾಗಿ ಸದ್ಯ ಹೈ ಕೋರ್ಟ್ ಸೂಚನೆ ಮೇರೆಗೆ 545 ಪಿಎಸ್ಐ ಹದ್ದೆಗಳಿಗೆ ಡಿಸೆಂಬರ್ ನಲ್ಲಿ ಮರುಪರೀಕ್ಷೆ ನಡೆಸುತ್ತಿರುವುದಾಗಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 4547 ಹುದ್ದೆಗಳಲ್ಲಿ 1547 ಮಂದಿ ಪಿಎಸ್ಐ ಹಾಗೂ 3 ಸಾವಿರ ಕಾನ್ಸ್ ಸ್ಟೇಬಲ್ ಗಳು ಇರಲಿದ್ದಾರೆ. ಪಿಎಸ್ಐ ಹುದ್ದೆಗಳ ಪೈಕಿ ಸದ್ಯ ಹೈ ಕೋರ್ಟ್ ಸೂಚನೆಯಂತೆ 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಅದಾದ ನಂತರ ಈಗಾಗಲೇ ನೋಟಿಫಿಕೇಶನ್ ಹೊರಡಿಸಿರುವ 402 ಪಿಎಸ್ಐ ಹುದ್ದೆ ಭರ್ತಿಗೆ ಚಾಲನೆ ನೀಡಲಾಗುವುದು. ತದನಂತರ 600 ಮಂದಿ ಪಿಎಸ್ಐ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗುವುದು.
ಒಟ್ಟು 6 ತಿಂಗಳಲ್ಲಿ 1547 ಪಿಎಸ್ಐ ಹುದ್ದೆಗಳ ನೇಮಕ ಮಾಡಿಕೊಳ್ಳಲಾಗುವುದು. ಅದರ ಜತೆಗೆ ಪಿಎಸ್ಐ ಹುದ್ದೆಯಲ್ಲಿರುವವರಿಗೆ SI ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ 15000 ಪೇದೆಗಳ ಹುದ್ದೆ ಖಾಲಿ ಇದ್ದು, ಮೊದಲಿಗೆ 3000 ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
Tags
Govt JOB