ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯಿ ದತ್ತಿಗಳ ಇಲಾಖೆ ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯಾಲಯ,,,,
ಹುಲಿಗೆಮ್ಮ ದೇವಿ ದೇವಸ್ಥಾನ, ಹುಲಗಿ, ತಾ:ಜಿ:ಕೊಪ್ಪಳ
Email:shrihuligemmadevi@gmail.com Mobno:9483391000
ಮಾಂಗಲ್ಯ ಭಾಗ್ಯ ಉಚಿತ ಸರಳ ವಿವಾಹ ಕಾರ್ಯಕ್ರಮ :
ಘನ ಸರ್ಕಾರದ ಆದೇಶದಂತೆ, ಮಾನ್ಯ ಧಾರ್ಮಿಕ ದತ್ತಿ ಆಯುಕ್ತರು, ಬೆಂಗಳೂರು ಇವರ ಸುತ್ತೋಲೆ ಸಂಖ್ಯೆ-MDA ಸಿಆರ್/11/ಸಿಆರ್/126/2019-20 ದಿನಾಂಕ :20/10/2023ರ ಪ್ರಕಾರ ಶ್ರೀ ಕ್ಷೇತ್ರ ಹುಲಿಗೆಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ದಿನಾಂಕ:31/01/2024ರ ಬುಧವಾರದಂದು ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ 'ಮಾಂಗಲ್ಯ ಭಾಗ್ಯ ಸರಳ ವಿವಾಹ ಕಾರ್ಯಕ್ರಮವನ್ನು ಹಿಂದೂ ಧಾರ್ಮಿಕ ಸಂಪ್ರದಾಯ ವಿಧಿ ವಿಧಾನದಂತೆ ನೆರವೇರಿಸಲಾಗುತ್ತದೆ. ಸರ್ಕಾರದ ಈ ಉಚಿತ ಸರಳ ವಿವಾಹ ಕಾರ್ಯಕ್ರಮದಲ್ಲಿ ಪ್ರತಿ ನವಜೋಡಿಗೆ ಅಗತ್ಯಗತೆಗನುಗುಣವಾಗಿ ವರನಿಗೆ ಹೂವಿನ ಹಾರ ಪಂಚೆ, ಶರ್ಟ್, ಮತ್ತು ಶಲ್ಯಕ್ಕಾಗಿ ರೂ 5000 - ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ ರೂ 10,000/- ಮತ್ತು ವಧುವಿಗೆ ಎರಡು ಚಿನ್ನದ ತಾಳಿ ಒಂದು ಗುಂಡು (45,000) ಒಟ್ಟು 60,000 ಗಳನ್ನು ಉಚಿತವಾಗಿ ಪ್ರೋತ್ಸಾಹ ಧನ ನೀಡಲಾಗುವುದು.
ಉಚಿತ ಸರಳ ವಿವಾಹಕ್ಕೆ ಆಗಮಿಸುವ ವಧು-ವರಾರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ಮಾಡಲು ತಗಲುವ ವೆಚ್ಚಗಳ್ನ್ನು ದೇವಸ್ಥಾನದ ನಿಧಿಯಿಂದ ಭರಿಸಲಾಗುವುದು. ಈ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಕೋರಿದೆ.
ವಧುವರರ ಅರ್ಜಿಗಳನ್ನು ದೇವಾಲಯದ ಆಡಳಿತ ಕಚೇರಿಯಲ್ಲಿ ದಿನಾಂಕ:15/12/2023 ರೊಳಗೆ ಪಡೆಯತಕ್ಕದ್ದು, ಹಾಗೂ ಭಾರ್ತಿ ಮಾಡಿ ಅಧಿಕೃತ ದಾಖಲೆಗಳೊಂದಿಗೆ ದಿನಾಂಕ:30/12/2023ರೊಳಗೆ ಸಲ್ಲಿಸತಕ್ಕದ್ದು.
Tags
Social