ತಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಿಕೊಳ್ಳಲು ಆರ್ಥಿಕ ಸಮಸ್ಯೆಯನ್ನು ಎದುರಿಸುವ ಪ್ರತಿಭಾವಂತ ಹಾಗೂ ಅರ್ಹ ವಿದ್ಯಾರ್ಥಿಗಳಿಗಾಗಿ ಕೋಲ್‌ಗೇಟ್ ಪಾಮೊಲಿವ್ (ಇಂಡಿಯಾ) ಲಿಮಿಟೆಡ್ - ಕೋಲ್‌ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್‌ಶಿಪ್ ಪ್ರೋಗ್ರಾಮ್ ಜಾರಿಗೊಳಿಸಿದೆ. ಪ್ರಸ್ತುತ ಈ ಸ್ಕಾಲರ್‌ಶಿಪ್‌ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ದೇಶದ ಅಂಗೀಕೃತ ವಿವಿಗಳು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ವರ್ಷದ ಡೆಂಟಲ್ ಸರ್ಜರಿ (ಬಿಡಿಎಸ್) ಕೋರ್ಸ್ ಅನ್ನು ಓದುತ್ತಿರುವವರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ತಮ್ಮ ಶಿಕ್ಷಣ ಗುರಿಗಳನ್ನು ಸಾಧಿಸಲು ರೂ.75,000 ವರೆಗೆ ಸಹಾಯಧನವನ್ನು ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಮೂಲಕ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು 2024 ರ ಜನವರಿ 31 ರವರೆಗೆ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/01/2024
ಅರ್ಹತೆಗಳು:
ಯಾವುದೇ ರಾಜ್ಯದ ಪ್ರಜೆಗಳಾಗಿರಬೇಕು.
ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ'ಯ ಯಾವುದೇ ವರ್ಷದ ಕೋರ್ಸ್‌ನಲ್ಲಿ ಓದುತ್ತಿರುವವರು ಅರ್ಜಿ ಹಾಕಬಹುದು.
ದ್ವಿತೀಯ ಪಿಯುಸಿ ಅಲ್ಲಿ ಶೇಕಡ.60 ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷ ಮೀರಿರಬಾರದು.
ದ್ವಿತೀಯ ಪಿಯುಸಿ ಅಲ್ಲಿ ಶೇಕಡ.60 ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.
ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿವಿಗಳು / ಶಿಕ್ಷಣ ಸಂಸ್ಥೆಗಳಲ್ಲಿ ಬಿಡಿಎಸ್ ಪದವಿ ಪ್ರವೇಶ ಪಡೆದಿರಬೇಕು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:
⇾ ಆಧಾರ್ ಕಾರ್ಡ್
⇾ ಈ ಮೇಲ್ ವಿಳಾಸ
⇾ ಮೊಬೈಲ್ ಸಂಖ್ಯೆ
⇾ ವಿದ್ಯಾರ್ಥಿ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
⇾ ದ್ವಿತೀಯ ಪಿಯುಸಿ ಅಂಕಪಟ್ಟಿ
⇾ ಬಿಡಿಎಸ್ ಕೋರ್ಸ್ ಗೆ ಪ್ರವೇಶ ಪಡೆದ ದಾಖಲೆ
⇾ ಬ್ಯಾಂಕ್ ಖಾತೆ ದಾಖಲೆ/ ಪಾಸ್ ಬುಕ್ ಜೆರಾಕ್ಸ್
⇾ ಆದಾಯ ಪ್ರಮಾಣಪತ್ರ
Tags
Scholarship

WhatsApp Group