ಆಧಾರ್ ಕಾರ್ಡ್ ಗೆ ಹೊಸ ರೂಲ್ಸ್ !!! ದಾಖಲಾತಿಯಿಂದ ನವೀಕರಣದವರೆಗೆ ಬದಲಾದ ನಿಯಮಗಳು : ಸಂಪೂರ್ಣ ಮಾಹಿತಿ ತಿಳಿಯಿರಿ....

ಆಧಾರ್ ಕಾರ್ಡ್ ಗೆ ಹೊಸ ರೂಲ್ಸ್ !!! ದಾಖಲಾತಿಯಿಂದ ನವೀಕರಣದವರೆಗೆ ಬದಲಾದ ನಿಯಮಗಳು : ಸಂಪೂರ್ಣ ಮಾಹಿತಿ ತಿಳಿಯಿರಿ....



 
                 ಭಾರತೀಯ  ಪ್ರಾಧಿಕಾರ ಆಧಾರ್ ನೋಂದಣಿ ಮತ್ತು ನವೀಕರಣ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಈ ಕುರಿತ UIDAI ಜನೆವರಿ 18 ರಂದು ಸುತ್ತೋಲೆ ಹೊರಡಿಸಿತ್ತು. ಆ ಸುತ್ತೋಲೆಯ ಪ್ರಕಾರ ಭಾರತೀಯ ನಿವಾಸಿಗಳು, ಅನಿವಾಸಿ ಭಾರತೀಯರು ಹಾಗೂ ವಿದೇಶ ಪ್ರಜೆಗಳಿಗೆ ಆಧಾರ್ ನೋಂದಣಿ ಹಾಗೂ ನವೀಕರಣಕಕೆಗಿ ಹೊಸ ನಮೂನೆಗಳನ್ನು ಸೂಚಿಸಿದೆ.

ಹೊಸ ನಿಯಮಗಳ ಪ್ರಕಾರ ಆಧಾರ್‌ ಕಾರ್ಡ್‌ ಹೊಂದಿರುವ 18 ವರ್ಷಕ್ಕಿಂತ ಮೇಲ್ಪಟ್ಟವರು ಆಧಾರ್‌ ತಿದ್ದುಪಡಿ ಹಾಗೂ ಆಧಾರ್‌ ನಂಬರ್‌ ರದ್ಧತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ ನೀವು ಫಾರ್ಮ್‌ 9 (Form 9) ಮೂಲಕ ಅರ್ಜಿ ಸಲ್ಲಿಸಬಹುದು. ಈ ಫಾರ್ಮ್‌ 18 ವರ್ಷ ತುಂಬಿದವರು ಆಧಾರ್‌ ಕಾರ್ಡ್‌ ತಿದ್ದುಪಡಿ ಅಥವಾ ರದ್ಧತಿಗೆ ಸಲ್ಲಿಸುವ ಅರ್ಜಿಯಾಗಿದೆ.

ಆಧಾರ್ ಅರ್ಜಿ ಸಲ್ಲಿಕೆ:

18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಫಾರ್ಮ್‌ 1 (Form 1) ಮೂಲಕ ಆಧಾರ್‌ಗೆ ಅರ್ಜಿ ಸಲ್ಲಿಸಬಹುದು. ಈಗ ನೀವು ಎರಡು ವಿಧಾನಗಳಲ್ಲಿ ಆಧಾರ್‌ ಮಾಹಿತಿಯನ್ನು ಅಪ್‌ಡೇಟ್‌ ಮಾಡಬಹುದಾಗಿದೆ. ವೆಬ್‌ಸೈಟ್ ಮೂಲಕ ಹಾಗೂ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಮಾಹಿತಿ ನವೀಕರಿಸುವ ಆಯ್ಕೆ ಈಗ ಲಭ್ಯವಿದೆ. 2016ರಲ್ಲಿ ಜಾರಿಗೆ ತಂದ ನಿಯಮಗಳ ಪ್ರಕಾರ ಆನ್‌ಲೈನ್‌ನಲ್ಲಿ ಅಡ್ರೆಸ್‌ ಅನ್ನು ಮಾತ್ರ ನವೀಕರಿಸಬಹುದಾಗಿದೆ. ಹೆಚ್ಚುವರಿ ಡೇಟಾ ನವೀಕರಿಸಲು ಅಧೀಕೃತ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗಿತ್ತು.

ಹೊಸ ನಿಯಮಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲದ ಕಾರಣ ಆಧಾರ್‌ ಕಾರ್ಡ್‌ ಹೊಂದಿರುವವರು ಆನ್‌ಲೈನ್‌ ಮೂಲಕ ತಮ್ಮ ಮೊಬೈಲ್‌ ನಂಬರ್‌ ನವೀಕರಿಸಲು ಸಾಧ್ಯವಾಗುತ್ತದೆ.

whatss


 

ಆಧಾರ್ ಕಾರ್ಡ್ ನೋಂದಣಿಗೆ ಹೊಸ ಫಾರ್ಮ್ ಗಳು:

ಫಾರ್ಮ್ 1:
ಫಾರ್ಮ್‌ 1 ಅನ್ನು 18 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಿವಾಸಿಗಳು ಹಾಗೂ ಅನಿವಾಸಿ ಭಾರತೀಯರು (ಭಾರತದಲ್ಲಿ ವಿಳಾಸ ದಾಖಲೆ ಹೊಂದಿರುವವರು) ಆಧಾರ್‌ ನೋಂದಣಿಗಾಗಿ ಬಳಸಬಹುದು. ವ್ಯಕ್ತಿಯು ಈಗಾಗಲೇ ಆಧಾರ್‌ ಕಾರ್ಡ್‌ ಹೊಂದಿದ್ದು, ಇತರ ವಿವರಗಳನ್ನು ನವೀಕರಿಸಲು ಫಾರ್ಮ್‌ 1 ಅನ್ನು ಬಳಸಬಹುದು.

ಫಾರ್ಮ್ 2:
ವಿದೇಶದ ವಿಳಾಸ ಪುರಾವೆ ಹೊಂದಿರುವ ಎನ್‌ಆರ್‌ಐಗಳಿಗಾಗಿ, ದಾಖಲಾತಿ ಮತ್ತು ನವೀಕರಣಕ್ಕಾಗಿ ಫಾರ್ಮ್ 2 ಅನ್ನು ಬಳಸಲಾಗುತ್ತದೆ.

ಫಾರ್ಮ್ 3:
5 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಕ್ಕಳು ಅಂದರೆ 18 ವರ್ಷಕ್ಕಿಂತ ಚಿಕ್ಕವರು (ನಿವಾಸಿ ಅಥವಾ ಭಾರತೀಯ ವಿಳಾಸ ಹೊಂದಿರುವ NRI) ದಾಖಲಾತಿಗಾಗಿ ಬಳಸಬೇಕು.

ಫಾರ್ಮ್ 4:
ಭಾರತದ ಹೊರಗಿನ ಅಂದರೆ ವಿದೇಶದ ವಿಳಾಸ ಹೊಂದಿರುವ ಎನ್‌ಆರ್‌ಐ ಮಕ್ಕಳಿಗಾಗಿ ಫಾರ್ಮ್‌ 4 ಅನ್ನು ಬಳಸಬಹುದು.

ಫಾರ್ಮ್ 5:
ಫಾರ್ಮ್ 5 ಅನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವಾಸಿ ಅಥವಾ ಎನ್‌ಆರ್‌ಐ ಮಕ್ಕಳು (ಭಾರತೀಯ ವಿಳಾಸ ಹೊಂದಿರುವ) ಆಧಾರ್‌ನಲ್ಲಿ ನೋಂದಣಿ ಅಥವಾ ನವೀಕರಣಕ್ಕಾಗಿ ಬಳಸಬೇಕು.

ಫಾರ್ಮ್ 6:
ಫಾರ್ಮ್ 6 ಅನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ NRI ಮಕ್ಕಳು (ಭಾರತದ ಹೊರಗಿನ ವಿಳಾಸವನ್ನು ಹೊಂದಿರುವವರು) ಬಳಸಬೇಕು.

ಫಾರ್ಮ್ 7:
ಫಾರ್ಮ್ 7 ಅನ್ನು 18 ವರ್ಷಕ್ಕಿಂತ ಮೇಲ್ಪಟ್ಟ ನಿವಾಸಿ ವಿದೇಶಿ ಪ್ರಜೆಯು ಬಳಸಬೇಕು. ಇದರಲ್ಲಿ ಆಧಾರ್‌ ವಿಳಾಸಗಳನ್ನು ನೋಂದಾಯಿಸಲು ಹಾಗೂ ನವೀಕರಿಸಲು ಬಳಸಬಹುದು. ಈ ಫಾರ್ಮ್‌ನಲ್ಲಿ ನೋಂದಣಿ ಮಾಡಲು ವಿದೇಶಿ ಪಾಸ್‌ಪೋರ್ಟ್, OCI ಕಾರ್ಡ್, ಮಾನ್ಯವಾದ ದೀರ್ಘಾವಧಿಯ ವೀಸಾ, ಭಾರತೀಯ ವೀಸಾ ವಿವರಗಳು ಬೇಕಾಗುತ್ತವೆ. ಇಲ್ಲಿ ಇಮೇಲ್ ಐಡಿ ಕಡ್ಡಾಯವಾಗಿರುತ್ತದೆ.

ಫಾರ್ಮ್ 8:
18 ವರ್ಷದ ನಂತರದವರು ಆಧಾರ್ ಸಂಖ್ಯೆಯನ್ನು ರದ್ದುಗೊಳಿಸಲು ಫಾರ್ಮ್ 9 ಅನ್ನು ಬಳಸಬಹುದು ಎಂದು UIDAI ಸೂಚಿಸಿದೆ.

10 ವರ್ಷಗಳ ನಂತರ ನವೀಕರಣ ಸಾಧ್ಯ:

          ಆಧಾರ್‌ ಸಂಖ್ಯೆ ಹೊಂದಿರುವವರು ಆಧಾರ್‌ ಸಂಖ್ಯೆ ಕ್ರಿಯೇಟ್‌ ಆದ ದಿನದಿಂದ 10 ವರ್ಷಗಳು ಪೂರ್ಣಗೊಂಡ ನಂತರ ದಾಖಲೆಗಳನ್ನು ಹಾಗೂ ಮಾಹಿತಿಯನ್ನು ನವೀಕರಿಸಬಹುದಾಗಿದೆ. UIDAI ನ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಒದಗಿಸಲಾದ ಆನ್‌ಲೈನ್ ಫಾರ್ಮ್‌ನಲ್ಲಿ ಅಥವಾ ದಾಖಲಾತಿ ಕೇಂದ್ರದಲ್ಲಿ ಫಾರ್ಮ್ ಸಲ್ಲಿಸುವ ಮೂಲಕ ಆಧಾರ್ ಸಂಖ್ಯೆಯ ನವೀಕರಣವನ್ನು ಮಾಡಬಹುದು.

 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು